ಇತ್ತೀಚಿನ ಸುದ್ದಿ
ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಪ್ರವೇಶ ನಿಷೇಧಿತ 16 ಚಕ್ರದ ಲಾರಿ: ಭಾರೀ ಟ್ರಾಫಿಕ್ ಜಾಮ್; ಮೈಲಿಗಟ್ಟಲೆ ವಾಹನಗಳ ಸಾಲು
18/03/2024, 11:50

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಾರ್ಮಾಡಿ ಘಾಟಿಯಲ್ಲಿ 16 ಚಕ್ರದ ಲಾರಿ ಕೆಟ್ಟು ನಿಂತ ಪರಿಣಾಮ ಘಾಟಿ ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ 10ನೇ ತಿರುವಿನಲ್ಲಿ 16 ಚಕ್ರದ ಲಾರಿ ಕೆಟ್ಟು ನಿಂತಿದೆ. ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಸಿಮೆಂಟ್ ಹೊತ್ತ ಲಾರಿ ಇದಾಗಿದೆ. ವಾಸ್ತವದಲ್ಲಿ
10 ಚಕ್ರದ ವಾಹನಕ್ಕಿಂತ ದೊಡ್ಡ ವಾಹನಗಳು ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವಂತಿಲ್ಲ. ಆದರೆ 16 ಚಕ್ರದ ಲಾರಿ ಘಾಟಿ ಹೇಗೆ ಪ್ರವೇಶಿಸಿತು ಎನ್ನುವುದು ಪ್ರಶ್ನೆ ಯಾಗಿದೆ. ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಇದ್ದರೂ ಲಾರಿಗೆ ಹೇಗೆ ಎಂಟ್ರಿ ನೀಡಲಾಯಿತು ಎನ್ನುವ ಬಗ್ಗೆ ತನಿಖೆ ಆಗಬೇಕಿದೆ.
ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತಿರುವುದರಿಂದ ಇಂದು ಬೆಳಗ್ಗಿನಿಂದಲೂ ವಾಹನ ಸವಾರರು ಮುಂದೆಯೂ ಹೋಗಲಾಗದೆ, ಹಿಂದೆಯೂ ಬರಲಾಗದೆ ಪರದಾಡುತ್ತಿದ್ದಾರೆ.
ಪೊಲೀಸರು ವಾಹನ ಬಿಟ್ಟಿರುವುದಕ್ಕೆ ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.