ಇತ್ತೀಚಿನ ಸುದ್ದಿ
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ: 18 ಹಾಗೂ 19ರಂದು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ದೈಹಿಕ ಕ್ಷಮತೆ ಪರೀಕ್ಷೆ
17/03/2024, 11:55

ಮಂಗಳೂರು(reporterkarnataka.com): ಮಂಗಳೂರು ನಗರ ಪೊಲೀಸ್ ಘಟಕದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್(ಸಿ.ಎ.ಆರ್/ಡಿ.ಎ.ಆರ್) ಹುದ್ದೆಗಳಿಗೆ 2024ರ ಜ.28ರಂದು ನಡೆಸಲಾದ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಾತ್ಕಾಲಿಕ ಅರ್ಹತೆ ಪಟ್ಟಿ ಅನುಸಾರ 1:5 ರ ಅನುಪಾತದಲ್ಲಿ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಇದೇ ಮಾ.18 ಹಾಗೂ19 ರಂದು ದೈಹಿಕ ಕ್ಷಮತೆ ಮತ್ತು ದೇಹ ದಾಡ್ರ್ಯತೆ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಮಂಗಳೂರು ನಗರ ಘಟಕದ ಪರೀಕ್ಷೆಯನ್ನು ಮಂಗಳೂರು ನಗರದ ಅಡ್ಯಾರ್ ನಲ್ಲಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆ ತಿಳಿಸಿದ್ದಾರೆ.