7:39 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಸಿಎಂ ಕ್ಷೇತ್ರದಲ್ಲಿ ಮತದಾರರಿಗಿಲ್ಲ ಕಿಮ್ಮತ್ತು: 38ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಪ್ರತಿಭಟನೆ; ಬಂಡವಾಳಶಾಹಿಗಳ ರಕ್ಷಣೆ ವಿರುದ್ಧ ಪ್ರತಿಭಟನಾಕಾರರ ವಾಗ್ದಾಳಿ

15/03/2024, 12:20

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಇದು ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸಿರುವ ನಂಜನಗೂಡು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಣ್ಣಾರಿಯಮ್ಮನ್ ಸಕ್ಕರೆ ಕಾರ್ಖಾನೆ ಮುಂಭಾಗ ಕಳೆದ 38 ದಿನಗಳಿಂದ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ರೈತರು ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಮತ ನೀಡಿದ ಮತದಾರರ ಗೋಳು.
ಕಾರ್ಖಾನೆ ನಿರ್ಮಾಣಕ್ಕಾಗಿ ಅಂದು, ಮಲ್ಲುಪುರ, ಅಳಗಂಚಿ, ಅಳಗಂಚಿ ಪುರ ರೈತರಿಂದ ಕೇವಲ 26 ಸಾವಿರ ರೂಪಾಯಿಗಳಿಗೆ ಭೂಮಿ ಪಡೆದ ಕೆಐಎಡಿಬಿ ಯು ರೈತ ಕುಟುಂಬಕ್ಕೆ ಕಾಯಂ ಉದ್ಯೋಗ ನೀಡುವುದಾಗಿ ಹೇಳಿ ಬಣ್ಣಾರಿಯಮ್ಮನ್ ಸಕ್ಕರೆ ಕಾರ್ಖಾನೆಗೆ ನೀಡಲಾಗಿದೆ.


ಕೆಲಸದ ಆಸೆಯಿಂದ ಭೂಮಿ ನೀಡಿದ ಸಂತ್ರಸ್ತರಿಗೆ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಖಾಯಂ ಉದ್ಯೋಗ ನೀಡಿಲ್ಲ. ಬದಲಾಗಿ ಸಣ್ಣಪುಟ್ಟ ಗುತ್ತಿಗೆ ಆಧಾರದ ಕೆಲಸಗಳನ್ನು ನೀಡುತ್ತಾ ಬಂದಿದ್ದಾರೆ ಎಂದು ಆರೋಪಿಸಿ ಭೂಮಿ ಕಳೆದುಕೊಂಡ ಸುಮಾರು 120 ರೈತ ಕುಟುಂಬಗಳು ಹಾಗೂ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಮತ್ತು ರಾಜ್ಯ ರೈತ ಸಂಘ ಟನೆಗಳ ವತಿಯಿಂದ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿ 38ನೇ ದಿನಕ್ಕೆ ಕಾಲಿಟ್ಟು ಇಂದು ಪೊರಕೆ ಚಳುವಳಿ ನಡೆಸಿತು.
ಆದರೂ ಇದುವರೆಗೂ ಕ್ಷೇತ್ರದ ಶಾಸಕರಾದ ಸಿಎಂ ಸಿದ್ದರಾಮಯ್ಯ ಆಗಲಿ ಅಥವಾ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಆಗಲಿ ಅಥವಾ ಉನ್ನತ ಮಟ್ಟದ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದು ತಮಗೆ ಮತ ನೀಡಿದ ಮತದಾರರಿಗೆ ನ್ಯಾಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇನ್ನು ಮಹಿಳೆಯರು, ಮಕ್ಕಳು ವೃದ್ದರಾಧಿಯಾಗಿ ಕಾರ್ಖಾನೆ ಮುಂಭಾಗವೇ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಿ ಅಲ್ಲೇ ಸೊಪ್ಪುಸದೆ ಬೇಯಿಸಿಕೊಂಡು ತಿನ್ನುತ್ತಾ ಜೀವನ ಸಾಗಿಸುತ್ತಿದ್ದಾರೆ.
ಚಳಿ ಮತ್ತು ಬಿಸಿಲಿನಿಂದಾಗಿ ಕೆಲವು ಮಹಿಳಾ ಪ್ರತಿಭಟನಾಕಾರರ ಆರೋಗ್ಯದಲ್ಲಿ ಏರುಪೇರು ಕೂಡ ಆಗಿದೆ.
ನಮಗೆ ಕಾಯಂ ಕೆಲಸ ನೀಡಲಿ ಇಲ್ಲ ನಮ್ಮ ಭೂಮಿ ವಾಪಸ್ ನೀಡಲಿ, ಅಲ್ಲಿಯವರೆಗೂ ನಾವು ಇಲ್ಲೇ ಸತ್ತರೂ ಸಹ ನಮ್ಮ ಹೋರಾಟ ಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದು ಕುಳಿತಿದ್ದಾರೆ.
ಕಾರ್ಖಾನೆ ಒಳಗೆ ಹಾಗೂ ಹೊರಗೆ ಯಾವುದೇ ಕಬ್ಬಿನ ವಾಹನಗಳು ತೆರಳದಂತೆ ಕಾರ್ಖಾನೆಯ ಗೇಟಿನ ಮುಂಭಾಗಕ್ಕೆ ಪ್ರತಿಭಟನಾಕಾರರು ಮುಳ್ಳಿನಿಂದ ಮುಚ್ಚಿದ್ದಾರೆ. ಇದರಿಂದಾಗಿ ಯಾವುದೇ ವಾಹನಗಳು ಕಾರ್ಖಾನೆ ಒಳಗೆ ಮತ್ತು ಹೊರಗೆ ಹೋಗದಂತಾಗಿ ಕಾರ್ಖಾನೆಯ ಕೆಲಸಕ್ಕೂ ಅಡ್ಡಿ ಉಂಟಾಗಿದೆ.
ಒಟ್ಟಾರೆ ಕಾರ್ಖಾನೆ ಮತ್ತು ಕಾರ್ಖಾನೆಗೆ ಭೂಮಿ ನೀಡಿದ ರೈತರ ಒಂದು ಸಂಘರ್ಷ ಇದೀಗ ತಾರಕಕ್ಕೇರಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿ ಒಂದು ರೀತಿ ಬೂದಿ ಮುಚ್ಚಿದ ಕೆಂಡದಂತಿದೆ.
ಅಖಿಲ ಭಾರತ ಕೃಷಿ ಕಾರ್ಮಿಕ ಸಂಘಟನೆ ಜಿಲ್ಲಾ ಸಂಚಾಲಕ ಬಸವರಾಜ್ ಮಾತನಾಡಿ ರೈತರ ಹಕ್ಕು ಮತ್ತು ಹೋರಾಟದ ಬಗ್ಗೆ ತಿಳಿಸಿ ನಮ್ಮ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನಾಕಾರರಾದ ಚಿಕ್ಕ ಮಹದೇವ ನಾಯಕ ಸಿಎಂ ವಿರುದ್ಧ ವಾಗ್ದಾಳಿ ನಡೆಸಿ ನೀವು ರೈತ ಮಗನಾಗಿದ್ದರೆ ನಮ್ಮ ಸಮಸ್ಯೆಯನ್ನು ಬೇಗ ಇತ್ಯರ್ಥಪಡಿಸಿ ಇಲ್ಲವಾದಲ್ಲಿ ಮುಂದಿನ ಚುನಾವಣೆಗೆ ಬಂದೇ ಬರುತ್ತೀರಿ. ಆಗ ನಾವು ನಿಮಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಅಪ್ಪ ಮಕ್ಕಳ ವಿರುದ್ಧ ಹಾಗೂ ಸಿದ್ದರಾಮಯ್ಯನವರಿಗೇ ಮತ ನೀಡುವಂತೆ ನಮ್ಮನ್ನು ಓಲೈಸುತಿದ್ದ ನಮ್ಮ ನಾಯಕ ಸಮಾಜದ ಶಾಸಕರಾದ ಅನಿಲ್ ಚಿಕ್ಕಮಾದು, ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜ್ ಅವರ ವಿರುದ್ಧವು ವಾಗ್ದಾಳಿ ನಡೆಸಿ ನಮಗೆ ನ್ಯಾಯ ಕೊಡಿಸುವಂತೆ ತಮ್ಮ ಆಕ್ರೋಶ ಹೊರ ಹಾಕಿದರು.

ಇತ್ತೀಚಿನ ಸುದ್ದಿ

ಜಾಹೀರಾತು