6:14 AM Tuesday16 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಸಾಸಲವಾಡ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಇಷ್ಟಲಿಂಗ ಪೂಜೆ

10/03/2024, 19:08

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಾಸಲವಾಡ ಗ್ರಾಮದಲ್ಲಿ ಮಾ8ರ ಶಿವರಾತ್ರಿ ಹಬ್ಬದಂದು, ಜಂಗಮ ಸಮುದಾಯದ ಬಿಜೆಪಿ ಮುಖಂಡರಾದ ಎಂ.ಎಂ. ಚಂದ್ರಶೇಖರಯ್ಯ ಅವರ ಸ್ವಗೃಹದಲ್ಲಿ ಮನೆಯ ಸದಸ್ಯರೆಲ್ಲರೊಡಗೂಡಿ, ಶಿವರಾತ್ರಿ ಹಬ್ಬದ ಪ್ರಯುಕ್ತ ಇಷ್ಟ ಲಿಂಗಪೂಜೆ ನೆರವೇರಿಸುವ ಮೂಲಕ ಹಾಲಿ ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿಯವರು, ಮತ್ತೊಮ್ಮೆ ಪ್ರಧಾನ ಮಂತ್ರಿಗಳಾಗಲೆಂದು ಶಿವನಲ್ಲಿ ಪ್ರಾರ್ಥಿಸಿದ್ದಾರೆ.

ಸಾಸಲವಾಡ ವಾಸಿ ಜಂಗಮ ಸಮುದಾಯದ ಯುವ ಮುಖಂಡರು ಹಾಗೂ ಬಿಜೆಪಿಯ ಮುಖಂಡರಾದ ಚಂದ್ರಶೇಖ ಅವರು ದಶಕಗಳಿಂದಲೂ ಬಿಜೆಪಿ ಪಕ್ಷದ ಮುಖಂಡತ್ವ ನಿರ್ವಹಿಸುತ್ತಿದ್ದು, ಅವರು ಪಕ್ಕಾ ಮೋದಿಯವರ ಅಭಿಮಾನಿಗಳಾಗಿದ್ದಾರೆ. “ನಮ್ಮ ಕುಟುಂಬ ಮೋದಿ ಕುಟುಂಬ” ಗ್ರೂಪ್ ನಲ್ಲಿ ಪ್ರಾರಂಭದಿಂದಲೂ ತುಂಬಾ ಚಟುವಟಿಯಿಳ್ಳವರಾಗಿದ್ದಾರೆ, ಅವರು ತಮ್ಮ ಸ್ವಗೃಹದಲ್ಲಿ ತಮ್ಮ ಮನೆಯ ಸರ್ವ ಸದಸ್ಯರೊಡಗೂಡಿ. ಶಿವರಾತ್ರಿ ಹಬ್ಬದ ಪ್ರಯುಕ್ತ ಧಾರ್ಮಿಕ ವಿದಿವಿಧಾನದಂತೆ ಶಿವ ಪೂಜೆ ನೆರವೇರಿಸಿದ್ದಾರೆ ಮತ್ತು ಮುಂಬರುವ ಚುನಾವಣೆಯಲ್ಲಿ. ಬಿಜೆಪಿ ಅತ್ಯಧಿಕ ಸಂಖ್ಯೆಗಳ ಸ್ಥಾನಗಳಲ್ಲಿ ಜಯಗಳಿಸಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು, ಹಾಗೂ ಹಾಲಿ ಪ್ರಧ‍ಾನಿ ನರೇಂದ್ರ ಮೋದಿಯರು. ಮತ್ತೆ ಪ್ರಧಾನ ಮಂತ್ರಿಗಳಾಗಿ ಆಯ್ಕೆಯಾಗಬೇಕೆಂಬ, ತಮ್ಮ ಮಹಾದಾಸೆಗಳನ್ನು ಈಡೇರಿಸುವಂತೆ ಸಂಕಲ್ಪ ಮಾಡಿ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು