9:45 AM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಮೊಡಂಕಾಪು ಕಾರ್ಮೆಲ್ ಡಿಗ್ರಿ ಕಾಲೇಜಿಗೆ ‘ಒಂದು ಜಿಲ್ಲೆ ಒಂದು ಹಸಿರು ಚಾಂಪಿಯನ್’ ಪ್ರಶಸ್ತಿ ಪ್ರದಾನ 

11/08/2021, 23:23

ಬಂಟ್ವಾಳ(reporterkarnataka.com): ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ, ಮಹಾತ್ಮ ಗಾಂಧಿ ರಾಷ್ಟ್ರೀಯ ಶಿಕ್ಷಣ  ಮಂಡಳಿಯು ಆಯೋಜಿಸಿದ “ಒಂದು ಜಿಲ್ಲೆ ಒಂದು ಹಸಿರು ಚಾಂಪಿಯನ್” (ಒನ್ ಡಿಸ್ಟ್ರಿಕ್ಟ್ ಒನ್ ಗ್ರೀನ್ ಚಾಂಪಿಯನ್) ಪ್ರಶಸ್ತಿಯನ್ನು ಬಂಟ್ವಾಳ ಮೊಡಂಕಾಪಿನ ಕಾರ್ಮೆಲ್ ಕಾಲೇಜ್ ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಪ್ರದಾನ ಮಾಡಿದರು.
ನಂತರ ಮಾತನಾಡಿದ ಅವರು, ಯುವ ಜನರು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಲು ಕರೆ ನೀಡಿದರು.

ಕಾರ್ಮೆಲ್ ಕಾಲೇಜಿನ ಸ್ವಚ್ಛತಾ ಕ್ರಿಯಾ ಯೋಜನೆ 2020 21 (ಎಸ್.ಎ.ಪಿ) ಸಮಿತಿಯು “ಸ್ವಚ್ಛತಾ ಶಿಕ್ಷಣ ಹಾಗೂ ಅಭ್ಯಾಸ”ಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಶ್ಲಾಘಿಸಿದರು.

ಈ ಪ್ರಶಸ್ತಿಗಾಗಿ ದೇಶದಾದ್ಯಂತ ಅನೇಕ ಕಾಲೇಜುಗಳು ಸ್ಪರ್ಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಪ್ರಶಸ್ತಿಯು ಕಾರ್ಮೆಲ್ ಡಿಗ್ರಿ ಕಾಲೇಜಿಗೆ ಬಂದಿರುವುದು ಅತೀವ ಸಂತೋಷದ ವಿಷಯವಾಗಿದೆ ಎಂದುಮಹಾತ್ಮ ಗಾಂಧಿ ರಾಷ್ಟ್ರೀಯ ಶಿಕ್ಷಣ  ಮಂಡಳಿಯ ಸದಸ್ಯ ಮೆಲ್ವಿನ್ ತಿಳಿಸಿದರು. 

ಪ್ರತಿಯೊಂದು ಕಾಲೇಜು ಕೂಡ ಸ್ವಚ್ಛತಾ ಹಾಗೂ ಜಲಶಕ್ತಿ ಯೋಜನೆಯನ್ನು ಕಾಲೇಜಿನಲ್ಲಿ ಕಾರ್ಯರೂಪಕ್ಕೆ ತರಬೇಕೆಂದು ವಿನಂತಿಸಿದರು.


ಕಾಲೇಜಿನ ಪ್ರಾಂಶುಪಾಲರಾದ ಡಾ. ಲತಾ ಫರ್ನಾಂಡಿಸ್ ಎ. ಸಿ., ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿ ನಾಯಕ ಮೆಲ್ವಿನ್ , ನಾಯಕಿ ತೇಜಸ್ವಿ, ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ಮಧುರಾ ಕೆ, ದೀಪ್ತಿ ಡಿಸೋಜಾ,  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು