ಇತ್ತೀಚಿನ ಸುದ್ದಿ
ಧಾರವಾಡ: ಯುವ ಗಾಯಕ ಪ್ರಜ್ವಲ್ ಪುಟಾಣಿಗೆ ಪದ್ಮಭೂಷಣ ಪುಟ್ಟರಾಜ ಕವಿಗವಾಯಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
04/03/2024, 12:12

ಸಂತೋಷ ಹ.ಹೊಸಟ್ಟಿ ಉರು ಮೂಡಲಗಿ ಬೆಳಗಾವಿ
info.reporterkarnataka@gmail.com
ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಚೇತನ ಫೌಂಡೇಶನ್ ಕರ್ನಾಟಕ ವತಿಯಿಂದ ನಡೆದ ಪದ್ಮಭೂಷಣ ಪುಟ್ಟರಾಜ ಕವಿಗವಾಯಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯುವ ಗಾಯಕ ಪ್ರಜ್ವಲ್ ಪುಟಾಣಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚೇತನ್ ಫೌಂಡೇಶನ್ ಕರ್ನಾಟಕ ವತಿಯಿಂದ ಸಂಗೀತ ಸಾಮ್ರಾಟ, ಗಾನ ವಿಶಾರದ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳ 110ನೇ ಜಯಂತ್ಯೋತದ ಅಂಗವಾಗಿ ನಡೆದ ಸಂಗೀತ ಸೌರಭ ಕಾರ್ಯಕ್ರಮ ಒಟ್ಟು 42 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯುವ ಗಾಯಕರಾದ ಪ್ರಜ್ವಲ್ ಪುಟಾಣಿ ಅವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಜ್ವಲ್,
ಪದ್ಮಭೂಷಣ ಪುಟ್ಟರಾಜ ಗವಾಯಿ ರಾಷ್ಟ್ರೀಯ ಪ್ರಶಸ್ತಿ ನನಗೆ ಕೊಟ್ಟು ಗೌರಿಸಿದವರಿಗೆ ಧನ್ಯವಾದಗಳು. ಪ್ರಶಸ್ತಿ ಕೊಡಲು ಮತ್ತು ನನಗೆ ಬೆಳೆಯಲು ಅನುಕೂಲ ಮಾಡಿಕೊಟ್ಟ ಬೆಳಗಾವಿಯ
ಸಮಾಜ ಸೇವಕರಾದ ಡಾ. ವಿಜಯ ಅಣ್ಣ ಜಂಬಗಿ ಹಾಗೂ
ಚೇತನ್ ಫೌಂಡೇಶನ್ ಕರ್ನಾಟಕದ ಅಧ್ಯಕ್ಷರಾದ
ಚಂದ್ರಶೇಖರ್ ಮಾಡಲಗೇರಿ ಅವರಿಗೆ ವಂದನೆಗಳು ಎಂದರು.