ಇತ್ತೀಚಿನ ಸುದ್ದಿ
ರಸ್ತೆಯುದ್ಧಕ್ಕೂ ಪ್ಲಾಸ್ಟಿಕ್ ತಟ್ಟೆ, ನೀರಿನ ಬಾಟ್ಲಿ: ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುವ ಭಕ್ತರ ಕೃತ್ಯ; ಪ್ರತಿ ವರ್ಷವೂ ಇದೇ ಗೋಳು
03/03/2024, 12:38

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಲೆನಾಡು ಹಾಗೂ ದಕ್ಷಿಣ ಕನ್ನಡ ಸಂಪರ್ಕಿಸುವ ದಾರಿಯುದ್ದಕ್ಕೂ ತಿಂದು ಬಿಸಾಕಿದ ಪ್ಲಾಸ್ಟಿಕ್ ತಟ್ಟೆಗಳ ರಾಶಿ. ರಾಜ್ಯದ ವಿವಿಧ ಮೂಲೆಗಳಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳುವ ಯಾತ್ರಿಗಳು ಈ ಪ್ಲಾಸ್ಟಿಕ್ ತಟ್ಟೆಗಳನ್ನು ಎಸೆದು ಹೋಗುತ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಧರ್ಮಸ್ಥಳ ಯಾತ್ರಿಗಳು ಸಾಗುವ ಮಾರ್ಗಯುದ್ಧಕ್ಕೂ ಪ್ಲಾಸ್ಟಿಕ್ ತಟ್ಟೆಗಳ ರಾಶಿ ಬಿದ್ದಿರುತ್ತದೆ. ಪ್ಲಾಸ್ಟಿಕ್ ಬಾಟಲ್ ಹಾಗೂ ಪ್ಲಾಸ್ಟಿಕ್ ತಟ್ಟೆಯನ್ನು ಪಾದಯಾತ್ರಿಗಳು ಬೇಕಾಬಿಟ್ಟಿ ಎಸೆದು ಹೋಗಿರುತ್ತಾರೆ.
ಬಣಕಲ್ ಮುಖ್ಯ ರಸ್ತೆಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲ್ ಹಾಗೂ ಪ್ಲಾಸ್ಟಿಕ್ ತಟ್ಟೆಗಳು ಅನಾಥವಾಗಿ ಬಿದ್ದಿರುತ್ತವೆ.
ಧರ್ಮಸ್ಥಳ ಪಾದಯಾತ್ರೆಗಳ ವಿರುದ್ಧ ಸ್ಥಳೀಯರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಹೇಮಾವತಿ ನದಿಯ ಉದ್ದಕ್ಕೂ ಸ್ನಾನ ಹಾಗೂ ಶೌಚ ಮಾಡಿ ಹೇಮಾವತಿ ನದಿ ಮಲಿನವಾಗುತ್ತಿದೆ. ಶಿವರಾತ್ರಿ ಹಿನ್ನೆಲೆಯಲ್ಲಿ ಭಕ್ತರು ಪ್ರತಿ ವರ್ಷ ಪಾದಯಾತ್ರೆ ಕೈಗೊಳ್ಳುತ್ತಾರೆ. ಬಣಕಲ್ ಕೊಟ್ಟಿಗೆಹಾರ, ಚಾರ್ಮುಡಿ ಘಾಟ್ ಮೂಲಕ ಧರ್ಮಸ್ಥಳಕ್ಕೆ ಭಕ್ತರು ತೆರಳುತ್ತಾರೆ. ದಾರಿಯಲ್ಲಿ ಕೆಲವು ಸಂಘಟನೆಗಳು ಪಾದಯಾತ್ರಿಗಳಿಗೆ ಉಚಿತವಾಗಿ ಆಹಾರ ಒದಗಿಸುತ್ತಾರೆ. ಪ್ರತಿ ವರ್ಷವೂ ಇದೇ ಗೋಳು.