ಇತ್ತೀಚಿನ ಸುದ್ದಿ
ಮಾರ್ಚ್ 3: ಎಂಸಿಸಿ ಬ್ಯಾಂಕಿನ ಬ್ರಹ್ಮಾವರ ಶಾಖೆ ಉದ್ಘಾಟನೆ; 17ನೇ ಹೊಸ ಶಾಖೆ
02/03/2024, 13:58
ಉಡುಪಿ(reporterkarnataka.com): ಎಂಸಿಸಿ ಬ್ಯಾಂಕಿನ ಬ್ರಹ್ಮಾವರ ಶಾಖೆ ಉದ್ಘಾಟನಾ ಸಮಾರಂಭ ವಾರಂಬಳ್ಳಿಯ ಶೇಷಗೋಪಿ ಪ್ಯಾರಡೈಸಿನ ನೆಲ ಮಹಡಿಯಲ್ಲಿ ಮಾರ್ಚ್ 3ರಂದು ಬೆಳಗ್ಗೆ 11.15ಕ್ಕೆ ನಡೆಯಲಿದೆ.
ಉಡುಪಿ ಶಾಸಕ ಯಶಪಾಲ್ ಸುವರ್ಣ ಉದ್ಘಾಟನೆ ನೆರವೇರಿಸುವರು. ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸುವರು. ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್ ಧರ್ಮಗುರು ರೆ.ಫಾ. ಜಾನ್ ಫೆರ್ನಾಂಡಿಸ್ ಆಶೀರ್ವಚನ ನೀಡುವರು. ವಿಕಾರ್ ಜನರಲ್ ರೆ.ಫಾ. ಎಂ.ಸಿ. ಮಥಾಯಿ ಭದ್ರತಾ ಕೊಠಡಿ ಉದ್ಘಾಟಿಸುವರು. ಗೌರವ ಅತಿಥಿಗಳಾಗಿ ಉಡುಪಿ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೆ.ಫಾ. ಡೆನ್ನಿಸ್ ಡೇಸಾ, ಉಡುಪಿ ಕೆಥೋಲಿಕ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರೆ. ಫಾ. ವಿನ್ಸೆಂಟ್ ಕ್ರಾಸ್ತಾ, ಉಡುಪಿ ಜಿಲ್ಲೆ ಹೆಚ್ಚುವರಿ ಪೊಲೀಸ್ ಸುಪರಿಟೆಂಡೆಂಟ್ ಪಿ.ಎ. ಹೆಗ್ಡೆ, ಉಡುಪಿ ಜಿಲ್ಲೆ ಸಹಕಾರಿ ಸಂಘಗಳ ಉಪ ನಿಬಂಧಕ ಎಚ್.ಎನ್. ರಮೇಶ್, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್. ಹಾಗೂ ಉಡುಪಿ ವಕ್ಫ್ ಬೋರ್ಡ್ ನಿಕಟಪೂರ್ವ ಜನಾಬ್ ಕೆ.ಪಿ. ಇಬ್ರಾಹಿಂ ಉಪಸ್ಥಿತರಿದ್ದರು.