ಇತ್ತೀಚಿನ ಸುದ್ದಿ
ಕಾಲುವೆಹಳ್ಳಿ ಗ್ರಾಪಂಗೆ ಪಿಡಿಒ ರಜನಿಕಾಂತ್ ಬೇಡ, ಸಾಣೀಕೆರೆ ಗ್ರಾಪಂಗೆ ವರ್ಗಾಯಿಸಿ: ಗ್ರಾಪಂ ಸದಸ್ಯರ ಆಗ್ರಹ
01/03/2024, 17:12
ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಪಂ ಗ್ರೇಡ್ 1 ಕಾರ್ಯದರ್ಶಿ ಡಿ.ಕೆ. ರಜನಿಕಾಂತ್ ಅವರನ್ನು ಮೂಲ ಸ್ಥಳಕ್ಕೆ ಸಾಣೀಕೆರೆಗೆ ಹಿಂತಿರುಗಿಸುವಂತೆ ಕಾಲುವೆಹಳ್ಳಿ ಗ್ರಾಪಂ ಸದಸ್ಯರು ತಾಪಂ ಸಿಇಒ ಗೆ ಮನವಿ ಮಾಡಿದ್ದಾರೆ.
ಕಾಲುವೆಹಳ್ಳಿ ಹಾಗೂ ಓಬಳಾಪುರ ಗ್ರಾಪಂ ಪಿಡಿಒ ಹುದ್ದೆ ಇರುವುದರಿಂದ ಅವರು ಕಾಲುವೆಹಳ್ಳಿ ಗ್ರಾಪಂ ಕಚೇರಿಗೆ ಸರಿಯಾದ ಸಮಯಕ್ಕೆ ಕಚೇರಿಗೆ ಬರುವುದಿಲ್ಲ. ನರೇಗಾ 15ನೇ ಹಣಕಾಸು ಯೋಜನೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗುತ್ತಿವೆ. ಹಾಗಾಗಿ ಅವರನ್ನು ಮೂಲ ಸ್ಥಳಕ್ಕೆ ಹಿಂದಿರುಗಿಸುವಂತೆ ಗ್ರಾಪಂ ಸದಸ್ಯರು ಆಗ್ರಹಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಪಂ ಗ್ರೇಡ್ 1 ಕಾರ್ಯದರ್ಶಿ ರಜನಿಕಾಂತ್ ಇವರಿಗೆ ಕಾಲುವೆಹಳ್ಳಿ ಹಾಗೂ ಗ ಓಬಳಾಪುರ ಗ್ರಾಪಂ ಎರಡು ಗ್ರಾಪಂ ಪಿಡಿಒ ಹುದ್ದೆ ಮಾಡುವುದರಿಂದ ಕಾಲುವೆಹಳ್ಳಿ ಗ್ರಾಪಂ ಕಚೇರಿಗೆ ಸರಿಯಾದ ಸಮಯಕ್ಕೆ ಕಚೇರಿಗೆ ಬರುವುದಿಲ್ಲ. ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ನಡುವೆ ಅಭಿವೃದ್ಧಿ ಅಧಿಕಾರಿಯ ಹೊಂದಾಣಿಕೆ ಇಲ್ಲದಿರುವುದು ಹಾಗೂ ಅಭಿವೃದ್ಧಿಯ ಕೆಲಸ ಕಾರ್ಯಗಳಿಗೆ ಸೂಕ್ತ
ರೀತಿಯಾಗಿ ಸ್ಪಂದಿಸುವುದಿಲ್ಲ. ಬೇಜವಾಬ್ದಾರಿಯ ನಡತೆಯನ್ನು ತೊರಿಸುತ್ತಾರೆ. ಅಭಿವೃದ್ಧಿ ಅಧಿಕಾರಿಯ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಪ್ರಭಾವಿಗಳ ಕೈಗೊಂಬೆಯಾಗಿ ನಡೆದುಕೊಳ್ಳುತ್ತಾರೆ. ಈಗಾಗಲೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳಿಂದ
ಪ್ರಭಾರ ಹುದ್ದೆಯಿಂದ ಬಿಡುಗಡೆಗೊಳಿಸಿ ಆದೇಶ ನೀಡಿದ್ದರೂ ಸಹ ಆದೇಶವನ್ನು ಉಲ್ಲಂಘಿಸಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ರಜನಿಕಾಂತ್ ಡಿ.ಕೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾಲ್ಲೂಕು ಪಂಚಾಯತಿ ಆದೇಶದ ಪ್ರಕಾರ ಮೂಲ ಗ್ರಾಮ ಪಂಚಾಯತಿಗೆ ಸಾಣೀಕೆರೆ ಗ್ರಾಮ ಪಂಚಾತಿಗೆ ವರ್ಗಾವಣೆಗೊಳಿಸಿ ಆದೇಶಿಸಬೇಕು. ಇಲ್ಲಿಗೆ ಬೇರೆ ಪಿಡಿಒ ನೇಮಕಾತಿ ಮಾಡುವಂತೆ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ. ತಾಪಂ ಇಒ ಲಕ್ಷ್ಮಣ್ ಮಾತಾಡಿ ಪಿಡಿಒ ಗಳ ಬದಲಾವಣೆ ಮಾಡುವ ಅಧಿಕಾರ ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಎಲ್ಲಾ ಪಂಚಾಯಿತಿ ಯವರು ಪಿಡಿಒ ಅವರು ಬೇಡ ಇವರು ಬೇಡ ಎಂದರೆ ಹೇಗೆ ಇರುವ ವ್ಯವಸ್ಥೆಯಲ್ಲಿ ಸರಿಪಡಿಸಿಕೊಳ್ಳಬೇಕು ಎಂದಿದ್ದಾರೆ.