9:13 PM Tuesday25 - November 2025
ಬ್ರೇಕಿಂಗ್ ನ್ಯೂಸ್
ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ

ಇತ್ತೀಚಿನ ಸುದ್ದಿ

ಸಂಭ್ರಮದ ಗುಡೇಕೋಟೆ ಉತ್ಸವ: ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ಯೋಜನೆ: 3 ಕೋಟಿ ಬಿಡುಗಡೆ

27/02/2024, 12:13

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ದೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ, ಫೆ.24 ಹಾಗೂ 25ರಂದು “ಗುಡೇಕೋಟೆ ಉತ್ಸವ” ಬಹು ವಿಜೃಂಭಣೆಯಿಂದ ಜರುಗಿತು. ಕನ್ನಡ ಸಂಸ್ಕೃತಿ ಇಲಾಖೆ, ಹಾಗೂ ವಿಜಯ ನಗರ ಜಿಲ್ಲಾಢಳಿತ ಸಹಯೋಗದೊಂದಿಗೆ, ಹಂಪಿ ಉತ್ಸವ ಮಾದರಿಯಲ್ಲಿ ಗುಡೇಕೋಟೆ ಉತ್ಸವವನ್ನು ಆಚರಿಸಲಾಯಿತು. ಫೆ 24ರಂದು ಸಂಜೆ ಪ್ರಾರಂಭಗೊಂಡ ಉತ್ಸವ, ಫೆ25ರಂದು ರಾತ್ರಿ ಸಮಾರೋಪಗೊಂಡಿತು. ಮೊದಲನೆಯ ದಿನದಂದು ಒನಕೆ ಒಬವ್ವ ವೇದಿಕೆಯಲ್ಲಿರುವ ಮಡಿಕೆಗಳಿಗೆ ಧಾನ್ಯ ಸುರಿಯುವ ಮೂಲಕ, ಶಾಸಕರಾದ ಡಾ. ಎನ್.ಟಿ.ಶ್ರೀನಿವಾಸ್ ಉತ್ಸವಕ್ಕೆ ಚಾಲನೆ ನೀಡಿದರು. ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ತಮ್ಮನ್ನು ಕ್ಷೇತ್ರದ ಜನತೆ “ನುಡಿದಂತೆ ನಡೆಯುವ ಶಾಸಕರೆಂದು” ಬಿಂಬಿಸಿದ್ದಾರೆ. ಅಂತೇ ತಾವು ಅವರ ವಿಶ್ವಾಸವನ್ನು ಕಾಪಿಟ್ಟುಕೊಳ್ಳುವುದಾಗಿ, ಕ್ಷೇತ್ರದ ಜನತೆಯ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ತಾವು ಶ್ರಮಿಸುವುದಾಗಿ ತಿಳಿಸಿದರು. ವೀರವನಿತೆ ವನಕೆ ಒಬವ್ವಳ ತವರೂರಾದ ಗುಡೇಕೋಟೆಯನ್ನು, ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುವುದಕ್ಕೆ ತಾವು ಬದ್ಧರಾಗುರುವುದು ತಿಳಿಸಿದರು. ಈ ನಿಟ್ಟಿನಲ್ಲಿ ಸರ್ಕಾರದಿಂದ 3 ಕೋಟಿ ಮಂಜೂರಾಗಿದ್ದು, ಇದು ಪ್ರಾರಂಭ ಕ್ಷೇತ್ರದ ಅಭಿವೃದ್ಧಿ ನಾಗಲೋಟದಲ್ಲಿ ಸಾಗಿದೆ. ಗುಡೇಕೋಟೆಯ ಸರ್ವ ಜನಾಂಗಗಳ ಯುವ ಪೀಳಿಗೆ ಉನ್ನತ ಶಿಕ್ಷಣ ಹೊಂದಿ, ಉತ್ತಮ ಬೌದ್ಧಿಕ ಶಕ್ತಿವಂತರಾಗಿ ಹೊರ ಹೊಮ್ಮ ಬೇಕಾಗಿದೆ. ಅದಕ್ಕಾಗಿ ತಾವು ಆವರಿಗೆ ಸರ್ವರೀತಿಯಲ್ಲಿಯೂ, ಸಹಕರಿಸುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿ ಎಮ್.ಎಸ್. ದಿವಾಕರ ಮಾತನಾಡಿ, ಕ್ಷೇತ್ರದ ಶಾಸಕರಾದ ಡಾ. ಎನ್.ಟಿ.ಶ್ರೀನಿವಾಸ್ ರವರು. ಜನತೆಯ ಕ್ಷೇಮಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದು, ಹಂಪಿ ಉತ್ಸವ ಮಾದರಿಯಲ್ಲಿ ಗುಡೇಕೋಟೆ ಉತ್ಸವ ಆಚರಿಸಿದ್ದು ಶ್ಲಾಘನೀಯ ಹಾಗೂ ಇತಿಹಾಸದಲ್ಲಿಯೇ ಅಚ್ಚಳಿಯದ ದಿನವಾಗಿದೆ ಎಂದರು.
ಮಾತೆ ಮಂಜಮ್ಮ ಜೋಗತಿ ಮಾತನಾಡಿ, ದಿವಂಗತ ಎಂ.ಪಿ.ಪ್ರಕಾಶರವರು ಅಂದು “ಹಂಪಿ ಉತ್ಸವ” ಪ್ರಾರಂಭಿಸಿದ್ದರು. ಇಂದು ಶಾಸಕರಾದ ಡಾ. ಎನ್.ಟಿ.ಶ್ರೀನಿವಾಸ್ ರವರು “ಗುಡೇಕೋಟೆ ಉತ್ಸವ” ಪ್ರಾರಂಭಿಸಿ, ದಾಖಲೆ ನಿರ್ಮಿಸಿದ್ದು ತಾಲೂಕಿನ ಹೆಮ್ಮೆಯ ವಿಷಯವಾಗಿದೆ ಎಂದರು. ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ, ಭೀಮಣ್ಣ ಗಜಾಪುರ ಮಾತನಾಡಿದರು. ಅವರು ಗುಡೇಕೋಟೆಯ ಐತಿಹಾಸಿಕ ಗತ ವೈಭವದ ಹಿನ್ನಲೆಯ ಕುರಿತು, ಸಂಕ್ಷಿಪ್ತ ಮಾಹಿತಿ ನೀಡಿದರು. ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಸದಾಶಿವ ಪ್ರಭು, ಎಸ್ಪಿ ಬಿ.ಎಲ್.ಹರಿಬಾಬು, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಉಪ ವಿಭಾಗಾಧಿಕಾರಿ ಮೊಹಮ್ಮದ್ ಅಕ್ರಂಷಾ ಅಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಉಪನಿರ್ಧೇಶಕ ಸಿದ್ದಲಿಂಗೇಶ ರಂಗಣ್ಣನವರ. ಕೂಡ್ಲಿಗಿ ತಹಶೀಲ್ದಾರರಾದ ರಾಜು ಫಿರಂಗಿ, ಹಿರೇಮಠದ ಪ್ರಶ‍ಾಂತ ಸಾಗರ ಸ್ವಾಮೀಜಿ, ಒನಕೆ ಓಬವ್ವ ವಂಶಸ್ಥರಾದ ರಾಜಣ್ಣ, ಪಾಳೇಗಾರ ವಂಶಸ್ಥರಾದ ಶಿವರಾಜ ವರ್ಮ. ಗ್ರಾಮ ಪಂಚಾಯ್ತಿ ಸರ್ವಸದಸ್ಯರು, ತಾಲೂಕಿನ ವಿವಿದ ಜನಪ್ರತಿನಿಧಿಗಳು. ತಾಲೂಕಿನ ವಿವಿದ ಗಣ್ಯರು ವೇದಿಕೆಯಲ್ಲಿದ್ದರು. ವಿವಿದ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.


ಉತ್ಸವದ ಎರಡನೇ ದಿನವಾದ ಫೆ. 25ರಂದು, ವಿವಿದ ಸಾಧಕರಿಂದ ಅನೇಕ ಕಾರ್ಯಕ್ರಮಗಳು ಜರುಗಿದವು. ರಾತ್ರಿ ಭವ್ಯವಾದ ಕಾರ್ಯಕ್ರಮದ ನಡೆಯುವುದರೊಂದಿಗೆ, ಉತ್ಸವದ ಸಮಾರೋಪ ಸಮಾರಂಭ ಜರುಗಿತು. ಗುಡೇಕೋಟೆ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ, ಅಸಂಖ್ಯಾತ ಜನತೆ ಉತ್ಸವದಲ್ಲಿ ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು