ಇತ್ತೀಚಿನ ಸುದ್ದಿ
ಗೋ ಬ್ಯಾಕ್ ಶೋಭಕ್ಕ ಅಭಿಯಾನದ ಮಧ್ಯೆಯೂ ಗೋಡೆಯಲ್ಲಿ ಕಮಲ ಬಿಡಿಸಿದ ಕರಂದ್ಲಾಜೆ!: ಪ್ರಚಾರದಲ್ಲಿ ಫುಲ್ ಬ್ಯುಸಿ!
26/02/2024, 20:49
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಗೋ ಬ್ಯಾಕ್ ಶೋಭಕ್ಕ ಅಭಿಯಾನದ ಮಧ್ಯೆಯೂ ಕೇಂದ್ರ ಸಚಿವೆ, ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಫುಲ್ ಬ್ಯುಸಿಯಾಗಿದ್ದಾರೆ.
ಕೈಯಲ್ಲಿ ಪೈಂಟ್ ಬ್ರಷ್ ಹಿಡಿದು ಸಚಿವೆ ಶೋಭಾ ಕರಂದ್ಲಾಜೆ ಅವರು ಗೋಡೆಗಳಲ್ಲಿ ತಾನು ಪ್ರತಿನಿಧಿಸುತ್ತಿರುವ ಬಿಜೆಪಿ ಪಕ್ಷದ ಚಿಹ್ನೆಯಾದ ಕಮಲವನ್ನು ಬಿಡಿಸುತ್ತಿದ್ದಾರೆ.
ಗೋ ಬ್ಯಾಕ್ ಶೋಭಕ್ಕ, ಪತ್ರ ಚಳವಳಿ ಮಧ್ಯೆಯೂ ಅಬ್ಬರದ ಪ್ರಚಾರದಲ್ಲಿ ಶೋಭಾ ಕರಂದ್ಲಾಜೆ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ರಸ್ತೆ ಬದಿ ಗೋಡೆ ಮೇಲೆ ಕಮಲದ ಚಿತ್ರ ಬಿಡಿಸುತ್ತಿದ್ದಾರೆ.
ಚಿಕ್ಕಮಗಳೂರು ನಗರದ ಜಯನಗರ ಬಡಾವಣೆಯ
ರಸ್ತೆ ಬದಿ ಗೋಡೆ ಮೇಲೆ ಕಮಲದ ಹೂ ಚಿತ್ರ ಬಿಡಿಸಿ ಶೋಭಾ ಕರಂದ್ಲಾಜೆ ಪ್ರಚಾರ ಕೈಗೊಂಡಿದ್ದಾರೆ. ಕಳೆದೊಂದು ವಾರದಿಂದ ಶೋಭಾಗೆ ಟಿಕೆಟ್ ಬೇಡ ಅಂತ ಕೆಲ ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿ ಪತ್ರ ಚಳವಳಿ ಆರಂಭಿಸಿದ್ದಾರೆ.