ಇತ್ತೀಚಿನ ಸುದ್ದಿ
ಉಳ್ಳಾಲ: ಬಾಷಾ ಮನೆ ಎದುರು ಭಜರಂಗದಳ ಪ್ರತಿಭಟನೆ: ಪೊಲೀಸರಿಂದ ಪ್ರತಿಭಟನಾನಿರತರ ಬಂಧನ
11/08/2021, 13:16
ಮಂಗಳೂರು(reporterkarnataka.com): ಐಸಿಸ್ ಜತೆಗಿನ ನಂಟಿನ ಆರೋಪದ ಮೇಲೆ ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡದಿಂದ ದಾಳಿಗೀಡಾದ ಉಳ್ಳಾಲದ ಬಿ.ಎಂ. ಬಾಷಾ ಅವರ ಮನೆಗೆ ಎದುರು ಭಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಎಲ್ಲ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಭಜರಂಗ ದಳ ಹಿರಿಯ ನಾಯಕ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಮಾಸ್ತಿಕಟ್ಟೆಯಲ್ಲಿರುವ ಬಾಷಾ ಅವರ ಮನೆಯ ಎದುರುಗಡೆ ಪ್ರತಿಭಟನೆ ನಡೆಸಲಾಯಿತು.
ಎನ್ ಐಎ ತಂಡ ಇತ್ತೀಚೆಗೆ ಮಾಸ್ತಿಕಟ್ಟೆ ನಿವಾಸಿಯಾಗಿರುವ ಬಾಷಾ ಅವರ ನಿವಾಸಕ್ಕೆ ದಾಳಿ ನಡೆಸಿತ್ತು. ಸುಮಾರು 20 ಮಂದಿಯ ಎನ್‌ಐಎ ತಂಡ ಮುಂಜಾನೆ 5.30ಕ್ಕೆ ದಾಳಿ ಮಾಡಿತ್ತು. ಸಂಜೆ ಬಾಷಾ ಅವರ ಕಿರಿಯ ಪುತ್ರ ಅಮ್ಮಾರ್ ಎಂಬಾತನನ್ನು ಹೆಚ್ಚಿನ ವಿಚಾರಣೆಗೆಂದು ವಶಕ್ಕೆ ಪಡೆದುಕೊಂಡಿತ್ತು.