ಇತ್ತೀಚಿನ ಸುದ್ದಿ
ಬಿಕರ್ಣಕಟ್ಟೆ ಸಮೀಪ ಭೀಕರ ಲಾರಿ- ಬೈಕ್ ಅಪಘಾತ: ಸವಾರ ಸ್ಥಳದಲ್ಲೇ ಸಾವು
11/08/2021, 09:13

ಮಂಗಳೂರು(reporterkarnataka.com): ನಗರದ ನಂತೂರು ಜಂಕ್ಷನ್ ಸಮೀಪದ ಬಿಕರ್ನಕಟ್ಟೆ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಉಳಾಯಿಬೆಟ್ಟು ನಿವಾಸಿ ದಯಾನಂದ ಎಂದು ಗುರುತಿಸಲಾಗಿದೆ. ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಫಘಾತದ ತೀವ್ರತೆಗೆ ಬೈಕ್ ಸವಾರನ ದೇಹ ಲಾರಿಯಡಿಗೆ ಸಿಲುಕಿ ಛಿದ್ರವಾಗಿದೆ.
ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ.