ಇತ್ತೀಚಿನ ಸುದ್ದಿ
ರಾಮನ ನಿಂದಿಸಿದರೆ ಪ್ರಶಸ್ತಿ, ಜೈ ಶ್ರೀರಾಮ್ ಎಂದವರಿಗೆ ಎಫ್ ಐ ಆರ್: ಶಾಸಕ ಡಾ.ಭರತ್ ಶೆಟ್ಟಿ ಕಿಡಿ
16/02/2024, 22:45
ಬೆಂಗಳೂರು(reporterkarnataka.com): ಹಿಂದೂ ಭಾವನೆಗೆ, ದೇವರ ನಂಬಿಕೆಗೆ ಕುರಿತಂತೆ ಶಿಕ್ಷಕಿಯಿಂದ ಅವಹೇಳನ ಮಾಡಿರುವುದನ್ನು ಖಂಡಿಸಿ ಮಕ್ಕಳ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದುವರೆಗೆ ಎಫ್ಐಆರ್ ದಾಖಲಾಗಿಲ್ಲ,ಬದಲಾಗಿ ಜೈ ಶ್ರೀರಾಮ ಎಂದವರ ಮೇಲೆ ದಾಖಲಿಸಲಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ನಾನಿಲ್ಲದಿದ್ದರೂ ದುರುದ್ದೇಶ ಪೂರ್ವಕವಾಗಿ ಎಫ್ಐಆರ್ ಮಾಡಿದ್ದಾರೆ. ವೇದವ್ಯಾಸ ಕಾಮತ್ ,ನನ್ನನ್ನು ಬಂಧಿಸಿದರೆ ಬಂಧಿಸಲಿ. ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ ಎಂದು ಡಾ. ಭರತ್ ನುಡಿದರು.