2:13 PM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ಮಸ್ಕಿ: ಸಂಕಲ್ಪ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಉಚಿತ ಕಂಪ್ಯೂಟರ್ ಶಿಕ್ಷಣ, ಟೈಲರಿಂಗ್ ತರಬೇತಿ ಉದ್ಘಾಟನೆ 

10/08/2021, 12:12

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com

ರಾಯಚೂರು ಜನ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ( ಮಸ್ಕಿಯ
ಸಂಕಲ್ಪ ಶಿಕ್ಷಣ ಮತ್ತು ಗ್ರಾಮಿಣಾಭಿವೃದ್ದಿ ಸಂಸ್ಥೆ) ಮಸ್ಕಿಯ ಹೈ-ಟೆಕ್ ಕಂಪ್ಯೂಟರ್ಸ್  ಶಿಕ್ಷಣ ತರಬೇತಿ ಕೇಂದ್ರ ವತಿಯಿಂದ ಉಚಿತ ಕಂಪ್ಯೂಟರ್ ಮತ್ತು ಟೈಲರಿಂಗ್ ತರಬೇತಿಯ ಉದ್ಘಾಟನೆ ನಡೆಯಿತು.

 ಗಚ್ಚಿನಮಠದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಗಮಿಸಿದ್ದರು.ಶರಣಯ್ಯಸ್ವಾಮಿ ಗುಡದೂರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ಸದಾನಂದ ಎಂ.ಪಿ. (ನಿರ್ದೇಶಕರು ಜನ ಶಿಕ್ಷಣ ಸಂಸ್ಥಾನ ರಾಯಚೂರು), ಪೊಮಣ್ಣ (ಕಾರ್ಯಕ್ರಮದ ಅಧಿಕಾರಿಗಳು, ಜನ ಶಿಕ್ಷಣ ಸಂಸ್ಥಾನ ರಾಯಚೂರು), ಯಮನೂರ ಕನ್ನಾರಿ (ಉಪನ್ಯಾಸಕರು ಮತ್ತು ಮಸ್ಕಿಯ ಹೈಟೆಕ್ ಕಂಪ್ಯೂಟರ್ಸ್  ಶಿಕ್ಷಣ ತರಬೇತಿ ಕೇಂದ್ರ ವ್ಯವಸ್ಥಾಪಕರು ), ಅಯ್ಯಮ್ಮ (ಜನ ಶಿಕ್ಷಣ ಸಂಸ್ಥಾನ ರಾಯಚೂರು), ಉಮಾ (ಟೈಲರಿಂಗ್ ಶಿಕ್ಷಕಿಯರು) ಹಾಗೂ ಕಂಪ್ಯೂಟರ್ ಮತ್ತು ಟೈಲರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶರಣಯ್ಯಸ್ವಾಮಿ ಗುಡದೂರು ಮಾತನಾಡಿ, ಆನೇಕ ವರ್ಷಗಳಿಂದ ಸಂಕಲ್ಪ ಶಿಕ್ಷಣ ಮತ್ತು ಗ್ರಾಮಿಣಾಭಿವೃದ್ದಿ ಸಂಸ್ಥೆಯಡಿಯಲ್ಲಿ ಅನೇಕ ಸಮಾಜ ಸೇವೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಹಲವು ವಿದ್ಯಾರ್ಥಿಗಳಿಗೆ ಉಚಿತ ಮತ್ತು ಉದ್ಯೋಗವಕಾಶವನ್ನು ಕಲ್ಪಿಸಲಾಗಿದೆ. ಇನ್ನು ಅನೇಕ ಸೇವೆ ಮಾಡಲು ಸರಕಾರದಿಂದ ಇನ್ನು ಅನೇಕ ಸವಲತ್ತು ಸಿಗಬೇಕಿದೆ ಹಾಗೂ ವಿಧ್ಯಾರ್ಥಿಗಳು ಇಂತಹ ಉಚಿತ ಕೌಶಲ್ಯಗಳನ್ನು ಸರಿಯಾದ ರೀತಿಯಲ್ಲಿ ಉಪಯೊಸಿಕೊಳ್ಳಬೇಕೆಂದು ತಿಳಿಸಿದರು.

ವಿದ್ಯಾರ್ಥಿಗಳು ಕಂಪ್ಯೂಟರ್ ಮತ್ತು ಇತರೆ ತರಬೇತಿಯನ್ನು ಕಲಿಯಲು ಸರಕಾರದಿಂದ ವಿಶೇಷ ಅನದಾನ ನೀಡಬೇಕೆಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ಅವರಿಗೆ ಮನವಿ ಪತ್ರ ನೀಡಿದರು. 

ನಂತರ ಮಾತನಾಡಿದ ಪ್ರತಾಪ್ ಗೌಡ ಪಾಟೀಲ್ ಅವರು, ವಿದ್ಯಾರ್ಥಿಗಳ ಮನವಿಗೆ ತಕ್ಕಂತೆ ನಾನು ಪ್ರಮಾಣಿಕವಾಗಿ ಸರಕಾರಕ್ಕೆ ಒತ್ತಡ ಹಾಕಿ ವಿಶೇಷ ಅನುದಾನ ಒದಗಿಸುತ್ತೇನೆ ತಿಳಿಸಿದರು.

ರಾಯಚೂರು ಜನಶಿಕ್ಷಣ ಸಂಸ್ಥಾನ ನಿರ್ದೇಶಕ ಸದಾನಂದ ಎಂ.ಪಿ. ಮಾತನಾಡಿ, ನಮ್ಮ ಜನ ಶಿಕ್ಷಣ ಸಂಸ್ಥಾನ ವತಿಯಿಂದ ಮಸ್ಕಿಯ ಹೈಟೆಕ್ ಕಂಪ್ಯೂಟರ್ಸ್  ಶಿಕ್ಷಣ ತರಬೇತಿ ಕೇಂದ್ರದ ಮೂಲಕ ಮಸ್ಕಿ ತಾಲೂಕಿಗೆ ನಿರಂತರವಾಗಿ ಹಲವು ಕೌಶಲ್ಯ ತರಬೇತಿ ನೀಡುತ್ತಿದ್ದೇವೆ. ಇಂತಹ ತರಬೇತಿಗಳನ್ನು ವಿದ್ಯಾರ್ಥಿಗಳು ಸದುಪಯೊಗ ಪಡೆದುಕೊಳ್ಳಬೇಕು. ನಮ್ಮ ಸಂಸ್ಥೆಯು ಯಾವಾಗಲೂ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಗುರಿ ಹೊಂದಿದ್ದು, ಇದ್ದಕ್ಕೆ ನಿಮ್ಮ ಕಲಿಕೆಯು ಬರಿ ಕಲಿಕೆಗೆ ಮಾತ್ರ ಸಿಮಿತವಾಗಬಾರದು. ಇದರಿಂದ ಉದ್ಯೋಗ ನಿರ್ಮಣವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಯಮನೂರ ಕನ್ನಾರಿ ಮತ್ತು ಶರಣಯ್ಯ ಸ್ವಾಮಿ ಗುಡದೂರು ಅವರು ಮುಖ್ಯ ಅತಿಥಿಗಳಾದ ಪ್ರತಾಪ್ ಗೌಡ ಪಾಟೀಲ್, ಅತಿಥಿಗಳಾದ ಸದಾನಂದ ಎಂ.ಪಿ.ಪೊಮಣ್ಣ, ಅಯ್ಯಮ್ಮ ಅವರಿಗೆ ಸನ್ಮಾನಿಸಿದರು. ಆಂಜನೇಯ್ಯ ಚಿಗರಿ, ಬಸಲಿಂಗಯ್ಯ ಸ್ವಾಮಿ, ಸರಸ್ವತಿ,  ಪವಿತ್ರ ಕ, ರಮ್ಯ, ರಮೇಶ ಶಿಲ್ಪ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು