ಇತ್ತೀಚಿನ ಸುದ್ದಿ
ಕೊಪ್ಪ: ಹೊಳೆಗೆ ವಿಷಪೂರಿತ ಕಾಫಿಯ ಪಲ್ಪರ್ ನೀರು ವಿಸರ್ಜನೆ; ಗ್ರಾಮಸ್ಥರು ತೀವ್ರ ಆಕ್ರೋಶ
13/02/2024, 17:35
ಶಶಿ ಬೆತ್ತದಕೊಳಲು ಕೊಪ್ಪ ಚಿಕ್ಕಮಗಳೂರು
info.reporterkarnataka@gmail.com
ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖಾಸಗಿ ಎಸ್ಟೇಟಿನವರು ಹೊಳೆಗೆ ವಿಷಪೂರಿತ ಕಾಫಿಯ ಪಲ್ಪರ್ ನೀರನ್ನು ಬಿಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕೊಳೆತ ವಿಷಪೂರಿತ ಪಲ್ಪರ್ ನೀರನ್ನು ಹೊಳೆಗೆ ಬಿಡುತ್ತಿರುವುದರಿಂದ ಏಡಿ, ಮೀನು ಹಾಗೂ ಜಲಜೀವಿಗಳು ಬಲಿಯಾಗುತಿವೆ. ಜಯಪುರ, ಮಕ್ಕಿಕೊಪ್ಪ ಹಾಗೂ ಸುತ್ತಮುತ್ತಲಿನ ಕೆಲ ಗ್ರಾಮದ ಜನರು ಈ ನೀರನ್ನು ಕುಡಿಯುತ್ತಿದ್ದಾರೆ. ಬಿಸಿಲಿನ ತಾಪವೂ ಹೆಚ್ಚಾಗಿದ್ದು ನೀರಿನ ಅಭಾವವು ಉಂಟಾಗಿದೆ ಹೀಗಿರುವಾಗ ಈ ಕೊಳಕು ಕಲುಷಿತ ನೀರನ್ನು ಹೊಳೆಗೆ ಬಿಡುವುದರಿಂದ ಈ ನೀರನ್ನು ಕುಡಿಯುವ ಜನರಿಗೆ ಬಹಳಷ್ಟು ತೊಂದರೆ ಉಂಟಾಗಿದೆ..
ಜಯಪುರ ಪೋಲಿಸ್ ಠಾಣೆಯಲ್ಲಿ ಎಸ್ಟೇಟಿನ ಮೇಲೆ ಪ್ರಕರಣ ದಾಖಲಾಗಿಸಲಾಗಿದೆ.