ಇತ್ತೀಚಿನ ಸುದ್ದಿ
ತಾರಕ್ಕೇರಿದ ಮಂಗಳೂರು ನೀರಿನ ಸಮಸ್ಯೆ; ಕಾಲ್ ಎತ್ತದ ಎಂಜಿನಿಯರ್ ಗಳು: ಮೇಯರ್ ಗೆ ಕಾರ್ಪೋರೇಟರ್ ಗಳ ದೂರು
12/02/2024, 19:44
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.ಕಾಂ
ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಇದರ ಬಿಸಿ ಸ್ವತಃ ಜನಪ್ರತಿನಿಧಿಗಳಾದ ಕಾರ್ಪೋರೇಟರ್ ಗಳಿಗೆ ತಟ್ಟಲಾರಂಭಿಸಿದೆ.
ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಇಂದು ನಡೆದ ಪಾಲಿಕೆಯ ವಿಶೇಷ ಸಭೆಯಲ್ಲಿ ಇದು ವ್ಯಕ್ತವಾಯಿತು. ನೀರಿನ ಸಮಸ್ಯೆ ಹೇಳಲು ಕಾಲ್ ಮಾಡಿದರೆ, ಪಾಲಿಕೆ ಎಂಜಿನಿಯರ್ ಗಳು ಕರೆ ಸ್ವೀಕರಿಸುತ್ತಿಲ್ಲ ಎಂದು ಕಾರ್ಪೋರೇಟರ್ ಗಳು ದೂರಿದ್ದಾರೆ. ಮಾಜಿ ಉಪ ಮೇಯರ್ ಒಬ್ಬರು ನೀರು ಬಾರದಿದ್ದರೆ, ತಾನು ಒಂದು ಗುಟುಕು ನೀರು ಕುಡಿಯೋದಿಲ್ಲ ಎಂದು ಶಪಥ ಮಾಡಿದ್ದಾರೆ. ನೀರಿನ ಬರದ ಬಗ್ಗೆ ಪಾಲಿಕೆ ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಆಡಳಿತ ಪಕ್ಷವನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾರ್ಪೋರೇಟರ್ಗಳ ಕರೆಗಳನ್ನು ಇಂಜಿನಿಯರ್ ಸ್ವೀಕರಿಸುತ್ತಿಲ್ಲ. ಕೆಲವರಲ್ಲಿ ಮಾತನಾಡಲು ಭಯ ಆಗುತ್ತೆ. ಹಾಗಾದರೆ ಪಾಲಿಕೆ ಸದಸ್ಯರಿಗೆ ಗೌರವ ಇಲ್ಲವೇ ಎಂದು ಕಾರ್ಪೋರೇಟರ್ ಗಾಯತ್ರಿ ರಾವ್ ಅವರು ಮೇಯರ್ ಅವರಲ್ಲಿ ದೂರಿದರು. ಮಾಜಿ ಉಪ ಮೇಯರ್, ಕಾರ್ಪೋರೇಟರ್ ಪೂರ್ಣಿಮಾ ಮಾತಾನಾಡಿ, ನನ್ನ ವಾರ್ಡ್ ಗೆ ನಾಳೆ ನೀರು ಬರದಿದ್ದಲ್ಲಿ ಒಂದು ಹನಿ ನೀರು ಕುಡಿಯೋದಿಲ್ಲ. ಪಾಲಿಕೆ ಮುಂದೆ ಕುಳಿತು ಧರಣಿ ಕೂರುವೆ ಎಂದು ಎಚ್ಚರಿಸಿದರು.
ಕಾರ್ಪೋರೇಟರ್ ನವೀನ್ ಡಿಸೋಜ ಮಾತನಾಡಿ, ಖಾಸಗಿ ಕಾಲೇಜಿವೊಂದರ ನೀರಿನ ಸಪ್ಲೈ ಅನ್ನು ಲೀಗಲ್ ಮಾಡಿದೆ. ಹಾಗೇನೇ ಇಲ್ ಲೀಗಲ್ ಇದ್ದಿದ್ದನ್ನು ಲೀಗಲ್ ಮಾಡಿ ಮಾಡಿ ಎಂದು ಒತ್ತಾಯಿಸಿದರು.
ನೀರಿನ ಸಮಸ್ಯೆ ಪರಿಹಾರವಾಗುವವರೆಗೆ ಬಿಲ್ಡಿಂಗ್ ಕಾಮಗಾರಿಗಳಿಗೆ ಅನುಮತಿ ನೀಡಬಾರದು ಎಂದು ಪ್ರತಿಪಕ್ಷದ ಸದಸ್ಯರು ಮೇಯರ್ ಗೆ ಮನವಿ ಮಾಡಿದರು.