5:29 AM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಚಿಂತೆಯ ಬದಲು ಚಿಂತನೆ ಮಾಡೋಣ: ಮೇಲ್ಕಾರಿನಲ್ಪಿ ಕೊಂಡೆವೂರು ಶ್ರೀಗಳು

12/02/2024, 13:49

ಬಂಟ್ವಾಳ(reporterkarnataka.com): ಹಿರಿಯರ ಅನುಭವವು ನಂಬಿಕೆಯ ಜೊತೆಗೆ ಮಿಳಿತವಾದಾಗ ಜೀವನವು ಅರ್ಥಪೂರ್ಣವಾಗುತ್ತದೆ. ಚಿಂತೆಯ ಬದಲು ಎಲ್ಲರೂ ಚಿಂತನೆಯನ್ನು ಮಾಡಬೇಕು. ಹಿರಿಯರ ಸೇವಾ ಪ್ರತಿಷ್ಠಾನ ನಡೆಸುವ ಕಾರ್ಯಗಳು ಸಮಾಜದ ಒಳಿತಿಗೆ ದೊಡ್ಡ ಕೊಡುಗೆಯಾಗಿದೆ. ಸಂಸ್ಕೃತಿಯ ರಕ್ಷಣೆಗೆ ಹಿರಿಯರ ಮಾರ್ಗದರ್ಶನವು ಅಗತ್ಯವಾಗಿದೆ ಎಂದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ( ರಿ) ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯನ್ನು ಆಶ್ರಮದಲ್ಲಿ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಆಶ್ರಮದ ಮೂಲಕ ಪರಿಸರದಲ್ಲಿ ಅನ್ನ ,ಅಕ್ಷರ, ಆಧಾರ ,ಆಶ್ರಯ ಮತ್ತು ಆರೋಗ್ಯ ಯೋಜನೆಯ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು ಈ ಪರಿಸರದಲ್ಲಿ ಹಿರಿಯರ ಸೇವಾ ಪ್ರತಿಷ್ಠಾದ ಘಟಕವನ್ನು ಆರಂಭಿಸಲು ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಮಾತನಾಡಿ ತಾಲೂಕು ಘಟಕಗಳನ್ನು ಸಕ್ರಿಯಗೊಳಿಸುವುದರೊಂದಿಗೆ ಸಹಕಾರಿ ಸಂಘದ ಸ್ಥಾಪನೆಯ ಬಗ್ಗೆ ಮಾಹಿತಿ ನೀಡಿ ಪ್ರತಿಷ್ಠಾನದ ಸದಸ್ಯರು ಪ್ರವರ್ತಕರಾಗಿ ಸಹಕರಿಸಬೇಕೆಂದು ತಿಳಿಸಿದರು.
ಡಾ.ಬಿ ಎನ್. ಮಹಾಲಿಂಗ ಭಟ್ ಕುಮಾರವ್ಯಾಸ ನಮನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ರಾಮಾಯಣದಲ್ಲಿ ಶ್ರೀರಾಮನ ಆದರ್ಶ ಗುಣಗಳ ಬಗ್ಗೆ ಮಾತನಾಡಿದರು.
ಪ್ರೊ. ವೇದವ್ಯಾಸ ರಾಮಕುಂಜ ಮಿರಾಕಲ್ ಹಣ್ಣಿನ ಮಹತ್ವದ ಬಗ್ಗೆ ತಿಳಿಸಿ ಪ್ರಾತ್ಯಕ್ಷಿಕೆ ನೀಡಿದರು.
ಬಂಟ್ವಾಳ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ ಕಾಂತಾಡಿ , ಸಮಿತಿಯ ಸದಸ್ಯರಾದ ಭವಾನಿ ಶಂಕರ ಶೆಟ್ಟಿ ಪುತ್ತೂರು, ಉದಯಶಂಕರ ಪುಣಚ ಮತ್ತು ಸ್ಥಳೀಯ ಹಿರಿಯರು ಭಾಗವಹಿಸಿದ್ದರು.
ಸಮಿತಿಯ ಸದಸ್ಯ ಅನಾರು ಕೃಷ್ಣಶರ್ಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ಆಳ್ವ ಪಡುಮಲೆ ವಂದಿಸಿದರು.
ಬಳಿಕ ಆಶ್ರಮದ ಗೋಶಾಲೆ ಮತ್ತು ನಕ್ಷತ್ರವನವನ್ನು ಹಿರಿಯರು ವೀಕ್ಷಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು