7:19 AM Friday7 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಭಯ ಬಿಡಿ, ಪರೀಕ್ಷೆಯನ್ನು ಹಬ್ಬವಾಗಿ ಪರಿಗಣಿಸಿ ಸಂಭ್ರಮಿಸಿ: ಬಿ.ಅಬ್ದುಲ್ ರಹೆಮಾನ್

11/02/2024, 15:32

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

“ಪರೀಕ್ಷೆ”ಯನ್ನು ಹಬ್ಬವಾಗಿ ಪರಿಗಣಿಸಿ, ಭಯ ಬಿಟ್ಟು ಬಿಡಿ ಸಂಭ್ರಮಿಸಿ ಎಂದು ಸ್ನೇಹಿತರ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕರಾದ ಬಿ.ಅಬ್ದುಲ್ ರಹೆಮಾನ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮಯ ಹತ್ತಿರವಾದ ಹಿನ್ನಲೆಯಲ್ಲಿ, ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಭಯ ನಿವಾರಿಸುವ ಸಲುವಾಗಿ ಪಟ್ಟಣದ ‘ತಹ’ ಶಾಲೆಯಲ್ಲಿ ಸ್ನೇಹಿತರ ಬಳಗದಿಂದ ಆಯೋಜಿಸಲಾಗಿದ್ದ, ವಿದ್ಯಾರ್ಥಿಗಳೇ “ಪರೀಕ್ಷೆ ಭಯ ಬಿಡಿ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಜೀವನ ಬಂಗಾರದಂತಹ ಅಮೂಲ್ಯವಾದ ಜೀವನ, ಪರೀಕ್ಷೆಗೆ ಅಲ್ಪ ಸಮಯವಿದ್ದು ಪ್ರತಿ ಕ್ಷಣವನ್ನು ಶ್ರದ್ಧೆಯಿಂದ ಓದಿಗಾಗಿ ಮುಡುಪಾಗಿಸಿಕೊಳ್ಳಬೇಕಿದೆ. ಪೋಷಕರ ಹಾಗೂ ಶಿಕ್ಷಕರ ಪರಿಶ್ರಮವನ್ನು ವ್ಯರ್ಥಮಾಡಬಾರದು, ಬಹು ಜವಾಬ್ದಾರಿಯಿಂದ ಅಭ್ಯಸಿಸಬೇಕು ಹಾಗೂ ಆತ್ಮ ಸ್ಥೈರ್ಯದಿಂದ ಪರೀಕ್ಷೆಗಳನ್ನು ನಿರ್ವಹಿಸಬೇಕಿದೆ. ಒಂದು ವರ್ಷದ ಶ್ರಮ ಕೇವಲ ಮೂರು ತಾಸಲ್ಲಿರುತ್ತದೆ, ಬುದ್ಧಿ ಮತ್ತೆ, ಚಾಣಾಕ್ಷತನ ಹಾಗೂ ಸಮಯ ಪ್ರಜ್ಞೆಯಿಂದ ಪರೀಕ್ಷೆಯ ಸಮದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನ ಎದುರಿಸಬೇಕು. ಆದರೆ ಪರೀಕ್ಷೆಯ ಸಮಯದಲ್ಲಿ ಯಾರೂ ದೃತಿಗೆಡಬಾರದು ಧೈರ್ಯದಿಂದಲೇ ಎದುರಿಸಬೇಕು, ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕಿದೆ ಎಂದರು. ಜಾನಪದ ಪರಿಷತ್ ತಾಲೂಕು ಅಧ್ಯಕ್ಷರು, ಹಾಗೂ ಪತ್ರಕರ್ತರಾದ ಕೆ.ಎಂ.ವೀರೇಶ ಮಾತನಾಡಿ. ವಿದ್ಯಾರ್ಥಿಗಳು ಪರೀಕ್ಷೆ ಬರೆದ ನಂತರ ಏನೇ ಫಲಿತಾಂಶ ಬಂದರೂ, ಯಾರೂ ಯಾವುದೇ ಕಾರಣಗಳಿಗೆ ದುಡಕಬಾರದು. ದೃತಿಗೆಡಬಾರದು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಪಾಸಾದವರು ಮುಂದಿನ ಭವಿಷ್ಯಕ್ಕಾಗಿ ಮುಂದಿನ ಶಿಕ್ಷಣದತ್ತ ದಾಪುಗಾಲಿಡಬೇಕು, ಫೇಲ್ ಆದವರು ಆಗಿದ್ದೆಲ್ಲಾ ಒಳ್ಳೇದಕ್ಕೇ ಆಗಿದೆ ಎಂದು ಪರಿಗಣಿಸಬೇಕು. ಮತ್ತೆ ಮರಳಿ ಪ್ರಯತ್ನ ಮಾಡಬೇಕು ಫೇಲ್ ಆದ ವಿಷಯಗಳಿಗೆ, ಪರೀಕ್ಷೆ ಕಟ್ಟಿ ಮೊದಲಗಿಂತ ಹೆಚ್ಚು ಪರಿಶ್ರಮದಿಂದ ಅಭ್ಯಾಸಿಸಿ ಅತಿ ಹೆಚ್ಚು ಅಂಕ ಪಡೆದು ಪಾಸಾಗಬೇಕಿದೆ ಎಂದರು. ಫಲಿತಾಂಶ ಬಂದ ನಂತರದಲ್ಲಿ ಪ್ರತಿ ವಿದ್ಯಾರ್ಥಿಗಳು ಪೋಷಕರೊಡಗೂಡಿ, ತರಗತಿಯ ಶಿಕ್ಷಕ ವೃಂಧವನ್ನು ಸಂಪರ್ಕಿಸಿ ಸಲಹೆ ಸೂಚನೆ ಮಾರ್ಗದರ್ಶನ ಪಡೆಯಬೇಕಿದೆ ಎಂದು ಅವರು ಸಲಹೆ ನೀಡಿದರು. ಸ್ನೇಹಿತರ ಬಳಗದ ಸದಸ್ಯರಾದ ಅಬ್ದುಲ್ ವಾಹಿದ್, ಆಝ್ ಭಾಷಾ. ತಹ ಶಾಲೆಯ ಮುಖ್ಯ ಉಪಾಧ್ಯಾಯರಾದ ನಜ್ಮಾ, ಶಾಲೆಯ ಆಡಳಿತ ವರ್ಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರಾದ ಮಂಜುನಾಥ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು