10:28 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಮಂಗಳೂರು: ಫೆ.10ರಂದು 20ನೇ ವರ್ಷದ ಶ್ರೀ ಕೃಷ್ಣ-ಬಲರಾಮ ರಥಯಾತ್ರೆ; ಎಲ್ಲರಿಗೂ ರಥ ಎಳೆಯಲು‌‌ ಅವಕಾಶ

07/02/2024, 15:55

ಮಂಗಳೂರು(reporterkarnataka.com): ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ ಮಂಗಳೂರು ಶಾಖೆಯ ಆಶ್ರಯದಲ್ಲಿ ನಡೆಯಲಿರುವ 20ನೇ ವಾರ್ಷಿಕ ಕೃಷ್ಣ ಬಲರಾಮ ರಥಯಾತ್ರೆ ಉತ್ಸವ ಫೆ.10 ರಂದು ನಗರದ ಪಿವಿಎಸ್ ಮಂದಿರದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ ಎಂದು ಇಸ್ಕಾನ್‌ನ ಅಧ್ಯಕ್ಷ ಗುಣಾಕರ ರಾಮ ದಾಸ ಹೇಳಿದರು.

ನಗರದ ಇಸ್ಕಾನ್ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಈ ರಥಯಾತ್ರೆಗೆ ರಥವು ಬೆಂಗಳೂರಿನಿಂದ ಬರಲಿದ್ದು, ನಗರದಲ್ಲಿ 5 ಕಿ.ಮೀ. ದೂರ ಸಾಗಲಿದೆ. ರಥವು ಪಿವಿಎಸ್ ಮಂದಿರದಿಂದ, ಶಾರದಾ ವಿದ್ಯಾಲಯ ರಸ್ತೆ, ಟಿ.ವಿ. ರಮಣ ಪೈ ಸಭಾಂಗಣ ವೃತ್ತ, ಮಹಾಮಯಿ ದೇವಸ್ಥಾನ ರಸ್ತೆ, ವೆಂಕಟರಮಣ ದೇವಸ್ಥಾನ ವೃತ್ತ ರಥಬೀದಿ, ಬಿಇಎಂ ಶಾಲೆ ರಸ್ತೆ, ಕುದ್ರೋಳಿ ದೇವಸ್ಥಾನ ರಸ್ತೆ, ಮಣ್ಣಗುಡ್ಡ ರಸ್ತೆ, ಬಲ್ಲಾಳ್ ಭಾಗ್ ರಸ್ತೆ, ಮಹಾತ್ಮ ಗಾಂಧಿ ರಸ್ತೆ ಮೂಲಕ ಇಸ್ಕಾನ್ ಪಿ.ವಿ.ಎಸ್ ರಸ್ತೆಯ ಮೂಲಕ ಸಂಜೆ 7.30_ಕ್ಕೆ ಬಂದು ಸೇರಲಿದೆ ಎಂದರು.
ಈ ರಥಯಾತ್ರೆಗೆ 5 ಸಾವಿರಕ್ಕೂ ಹೆಚ್ಚು ಜನ ಸೇರಲಿದ್ದು, ಎಲ್ಲಾ ಭಕ್ತರಿಗೂ ರಥ ಎಳೆಯುವ ಅವಕಾಶ ಕಲ್ಪಿಸಲಾಗಿದೆ. ರಥಯಾತ್ರೆಯ ನಂತರ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಕಾರ್ಯಕ್ರಮಕ್ಕೆ ಶಾಸಕ ವೇದವ್ಯಾಸ ಕಾಮತ್, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಆಳ್ವ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್, ಮಂಗಳೂರು ನಗರಪಾಲಿಕೆ ಸದಸ್ಯೆ ಜಯಶ್ರೀ ಕುಡ್ವ, ಅಭಿನವ್ ಬನ್ಸಲ್‌ನ ನಿದೇರ್ಶಕ ಎ.ಕೆ. ಬನ್ಸಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜೊತೆ ಕಾರ್ಯದರ್ಶಿಗಳಾದ ರಾಧ ವಲ್ಲಭ ದಾಸ, ಸುಂದರ ಗೌರ ದಾಸ ಮಾಧ್ಯಮ ಸಲಹೆಗಾರ ಎಂ.ವಿ. ಮಲ್ಯ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು