9:26 AM Sunday30 - November 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ… ಶಾಲೆಯಂಗಳದಲ್ಲಿ ತಾರಾಲಯ: ಗ್ರಾಮೀಣ ಮಕ್ಕಳಲ್ಲಿ ಖಗೋಳ ವಿಜ್ಞಾನ ಕೌತುಕ ಬಿತ್ತುವ ಗುರಿ; ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ‘ವಾಯ್ಸ್ ಆಫ್ ಆರಾಧನಾ’: ಜನವರಿ ತಿಂಗಳ ಟಾಪರ್ ಆಗಿ ವಾಗ್ಮಿ ಕೆ. ಪುತ್ತೂರು ಹಾಗೂ ರೊಶ್ನಿ ಶೆಟ್ಟಿ ಆಯ್ಕೆ

06/02/2024, 10:53

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜನವರಿ ತಿಂಗಳ ಟಾಪರ್ ಆಗಿ ವಾಗ್ಮಿ ಕೆ. ಪುತ್ತೂರು ಹಾಗೂ ರೊಶ್ನಿ ಶೆಟ್ಟಿ ಅವರು ಆಯ್ಕೆಗೊಂಡಿದ್ದಾರೆ.


ಪುತ್ತೂರು ತಾಲೂಕಿನ ಕೆಮ್ಮಾಯಿ ಬೀರ್ನಹಿತ್ಲ್ ಎಂಬಲ್ಲಿ ಜನಿಸಿದ ವಾಗ್ಮಿ ಕೆ. ಪುತ್ತೂರು, ಕೇಶವ ಹಾಗೂ ಮಲ್ಲಿಕಾ ಅವರ ಪುತ್ರಿ. ವಾಗ್ಮಿ 10 ತಿಂಗಳ ಮಗುವಾಗಿದ್ದಾಗ ಆನ್‌ಲೈನ್ ನಡೆಸಿದ ಕೃಷ್ಣ ವೇಷ ಫೋಟೋ ಸ್ಪರ್ಧೆಯಲ್ಲಿ 10-12 ರವರೆಗೆ ಬಹುಮಾನಗಳಿಸಿದ್ದಾಳೆ. ಡ್ಯಾನ್ಸ್ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದಾಳೆ. ಇದುವರೆಗೆ ಭಾಗವಹಿಸಿ ಕೃಷ್ಣ ವೇಷ ಸ್ಪರ್ಧೆಯಲ್ಲಿ ಸುಮಾರು 30ಕ್ಕಿಂತ ಹೆಚ್ಚು ಬಹುಮಾನ ಪಡೆದಿದ್ದಾಳೆ. ಚಾನೆಲ್ 9 ನಡೆಸಿದ ಕೃಷ್ಣ ವೇಷ ವಿಡಿಯೋ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಹಾಗೂ ವಿಜಯ ಕರ್ನಾಟಕದವರು ನಡೆಸಿದ ಕೃಷ್ಣ ವೇಷ ಫೋಟೋ ಸ್ಪರ್ಧೆಯಲ್ಲಿ ಪ್ರೋತ್ಸಾಹಕ ಬಹುಮಾನ ಪಡೆದಿದ್ದಾಳೆ. ಇದೀಗ 4 ವರ್ಷದ ಈಕೆ ಡ್ಯಾನ್ಸ್, ಹಾಡುಗಾರಿಕೆ ಹಾಗೂ ಅಂಗನವಾಡಿ ಚಟುವಟಿಕೆಯಲ್ಲಿ ತುಂಬಾನೆ ಉತ್ತಮ ರೀತಿಯಲ್ಲಿ ಭಾಗವಹಿಸಿದ್ದಾಳೆ. ವಾಯ್ಸ್ ಆಫ್ ಆರಾಧನಾ ತಂಡದ ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾಳೆ.
ಇನ್ನೋರ್ವ ಬಾಲಪ್ರತಿಭೆ ರೊಶ್ನಿ ಶೆಟ್ಟಿ. ಈಕೆ ಅಮಿತ್ ಕುಮಾರ್ ಹಾಗೂ ಪ್ರತಿಭಾ ಶೆಟ್ಟಿ ಅವರ ಪುತ್ರಿ. ರೋಶ್ನಿ ಮಂಗಳೂರಿನ ಸೈಂಟ್ ತೆರೆಸಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಹಲವಾರು ಸಾರ್ವ ಜನಿಕ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಹಲವಾರು ಬಹುಮಾನ ಪಡೆದು ಕೊಂಡಿದ್ದಾಳೆ. ಝೀ ಕನ್ನಡ ಸರಿಗಮಪದಲ್ಲಿ ಭಾಗವಹಿಸಿದ್ದಾಳೆ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಕೊರೊಕೆ ಹಾಡು ಕಲಿಯುತ್ತಿದ್ದಾಳೆ. ವಾಯ್ಸ್ ಆಪ್ ಆರಾಧನಾ ಪೇಜ್ ನಲ್ಲಿ ಸಕ್ರೀಯವಾಗಿದ್ದಾಳೆ. ಹಾಡು, ನೃತ್ಯ, ಡ್ರಾಯಿಂಗ್ ಈಕೆಯ ಪ್ರಮುಖ ಹವ್ಯಾಸ.

ಇತ್ತೀಚಿನ ಸುದ್ದಿ

ಜಾಹೀರಾತು