3:01 PM Saturday2 - May 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್…

ಇತ್ತೀಚಿನ ಸುದ್ದಿ

ಮೊರಬದಲ್ಲಿ ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸೆ ಶಿಬಿರ; ಸಮಾಜ ಸೇವೆಯಿಂದ ಸಂತೃಪ್ತಿ: ಅಬ್ದುಲ್ ರಹೆಮಾನ್

30/01/2024, 21:55

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮದಲ್ಲಿ, ಸಮಾಜ ಸೇವಕ ಅಬ್ದುಲ್ ರಹೆಮನ್ ರವರ ನೇತೃತ್ವದಲ್ಲಿ ಜ30ರಂದು ಸ್ನೇಹಿತರ ಬಳಗದಿಂದ ಸತತ 7ನೇ ವರ್ಷದ ಸಮಾಜ ಸೇವಾರ್ಥ, “ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಶಿಬಿರ”
ಆಯೋಜಿಸಲಾಗಿತ್ತು.

ಶಿಬಿರದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಸ್ನೇಹಿತರ ಬಳಗದ ಅಧ್ಯಕ್ಷ ಅಬ್ದುಲ್ ರಹೆಮಾನ್ ರವರು ಮಾತನಾಡಿದರು. ಸಮಾಜ ಸೇವೆಯಿಂದಲೇ ಆತ್ಮ ತೃಪ್ತಿ ದೊರಕಲಿದೆ, ಇದು ಸ್ನೇಹಿತರ ಬಳಗದ ದೇಯೋದ್ಧೇಶವಾಗಿದೆ. ಈ ನಿಟ್ಟಿನಲ್ಲಿ ಸತತ ಏಳನೇ ವರ್ಷಗಳಿಂದ ಶ್ರಮಿಸುತ್ತಿದೆ, ಅದಕ್ಕೆಲ್ಲಾ ಸಮಸ್ತ ಸ್ನೇಹಿತರ ಬಳಗದ ಸರ್ವ ಸದಸ್ಯರ ಶ್ರಮದಾನವೇ ಕಾರಣವಾಗಿದೆ. “ಸರ್ವೇ ಜನಃ ಸುಖೀನೋ ಭವಂತು” ಎಂಬ ಧೇಯ ದೊಂದಿಗೆ, ಸ್ನೇಹಿತರ ಬಳಗ ಸನಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು. ನೇತ್ರಲಕ್ಷ್ಮಿ ವೈದ್ಯಾಲಯ ಡಾಕ್ಟರ್ ದೇಶಪಾಂಡೆ ಹಾಗೂ ಸ್ನೇಹಿತರ ಬಳಗದ ಉಪಾಧ್ಯಕ್ಷ ಬಿ ಖಾದರ್ ಭಾಷಾ, ಸದಸ್ಯರಾದ ಅಬ್ದುಲ್ ವಾಹಿದ್, ಆಲಂ ಭಾಷ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಯೋಜನಾ ಘಟಕ, ಎನ್.ಎಸ್.ಎಸ್ ವಿಭಾಗದ ಅಧಿಕಾರಿ ಜಗದೀಶ್, ಪ್ರಾಂಶುಪಾಲರಾದ ಸುರೇಶ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಣ್ಣ, ಫೈರೋಜ್ ಆಲಂ, ಮೌಲ್ವಿ ಸಾಬ್, ಗ್ರಾಮ ಪಂಚಾಯ್ತಿ ಸದಸ್ಯ ಮೆಹಬೂಬ್ ಬಾಷಾ, ಗ್ರಾಮ ಪಂಚಾಯಿತಿ ಸದಸ್ಯ ಚನ್ನಬಸಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಹೊನ್ನೂರವಲಿ, ಮೊರಬ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಚಂದ್ರಪ್ಪ, ಜನಪ್ರತಿನಿಧಿ ಕೊಟ್ರೇಶ್ ಉಪಸ್ಥಿತರಿದ್ದರು. 110 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆ ಗೆ ಅಯ್ಕೆ ಮಾಡಲಾಯಿತು. ಒಟ್ಟು 230 ಜನರು ತಪಾಸಣೆ ಮಾಡಿ, ಓಪಿಡಿ ಸೇವೆ ಸಲ್ಲಿಸಲಾಯಿತು. ಶಾಲಾ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ, ಗ್ರಾಮದ ಹಿರಿಯರು ಮತ್ತು ಮುಖಂಡರು. ವಿವಿದ ಜನಪ್ರತಿನಿಧಿಗಳು, ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದು ಶಿಬಿರ ಯಶಸ್ಸಿಗೆ ಸಹರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು