3:25 AM Saturday19 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ಹಬ್ಬಗಳಿಂದ ಸಂಬಂಧ ಸೌಹಾರ್ದತೆ, ಸಂಪರ್ಕ ಗಟ್ಟಿಯಾಗುತ್ತದೆ: ಮಾತೆ ಪಂಕಜಮ್ಮ

29/01/2024, 19:52

ವೃಷಭೇಂದ್ರ ವಿ.ಜಿ. ಕೂಡ್ಲಗಿ ವಿಜಯನಗರ

info.reporterkarnataka@gmail.com

ಹಬ್ಬಗಳಿಂದ ಪರಸ್ಪರ ಸಂಬಂಧಗಳು ಬೆಸೆದುಕೊಳ್ಳುತ್ತವೆ, ಸಮಾಜದಲ್ಲಿ ಸೌಹಾರ್ದತೆ ಇಮ್ಮಡಿಯಾಗುತ್ತದೆ, ಸಂಪರ್ಕ ಬೆಳೆಯುತ್ತದೆ ಎಂದು ಬಳ್ಳಾರಿಯ ಮಾತೆ ಪಂಕಜಮ್ಮರವರು ನುಡಿದರು. ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀಚಿದಂಬರೇಶ್ವರ ದೇವಸ್ಥಾನದಲ್ಲಿ, ರಾಷ್ಟ್ರೀಯ ಸೇವಿಕ ಸಮಿತಿ ಕೂಡ್ಲಿಗಿ ಘಟಕದಿಂದ ಆಯೋಜಿಸಲಾಗಿದ್ದ. “ಸಂಕ್ರಮಣ ಉತ್ಸವ” ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಶ್ಚಿಮಾತ್ಯ ಸಂಸ್ಕ್ರತಿಗೆ ಮಾರು ಹೋಗಿರುವ ಯುವ ಪೀಳಿಗೆ, ನಮ್ಮ ದೇಶಿಯ ಸಂಸ್ಕ್ರತಿಯನ್ನು ಅಸಡ್ಡೆ ಮಾಡುತ್ತಿರುವುದು ಖೇದದ ಸಂಗತಿಯಾಗಿದೆ. ಪ್ರತಿಯೊಬ್ಬ ಭಾರತೀಯರು ಸನಾತನ ಧರ್ಮವನ್ನು ಗೌರವಿಸಬೇಕು, ಸಂಸ್ಕಾರ ಸಂಸ್ಕ್ರತಿ ಧಾರ್ಮಿಕ ನಿಷ್ಠೆ ಯನ್ನು ಹೊಂದಬೇಕಿದೆ. ಪೋಷಕರು ತಮ್ಮ ಮಕ್ಕಳಿಗೆ ಹಾಗೂ ಯುವ ಪೀಳಿಗೆಗೆ ಉತ್ತಮ ಗುಣ ಮಟ್ಟದ ಶಿಕ್ಷಣದೊಂದಿಗೆ, ಉತ್ತಮ ಸಂಸ್ಕಾರ ನೀಡಬೇಕಿದ್ದು ಈ ನಿಟ್ಟಿನಲ್ಲಿ ದೇಶದ ಎಲ್ಲಾ ಪೋಷಕರು ಸಂಕಲ್ಪ ತೋಡಬೇಕು. ಹಬ್ಬಗಳು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಹಾಗೂ ಧಾರ್ಮಿಕ ಹಿನ್ನಲೆಯಲ್ಲಿ, ಮನುಷ್ಯನ ಜೀವನದಲ್ಲಿ ಹಾಸು ಹೊಕ್ಕ‍ಾಗಿವೆ. ಕಾರಣ ಎಲ್ಲ‍ಾ ಪ್ರಮುಖ ಹಬ್ಬಗಳನ್ನು ಧರ್ಮಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಜಮುನಾರವರು, ಸಂಘದ ನಿಯಮದಂತೆ ತರಗತಿ ನಡೆಸಿಕೊಟ್ಟರು. ಶ್ರೀರಾಮ ಮಂದಿರ ಕರಸೇವಕರಾದ ದಿವಂಗತ ಕೆ.ಬಿ.ನಾಗರಾಜರವರ ನೆನಪಾರ್ಥವಾಗಿ, ಅವರ ತಾಯಿ ಕೆ.ಬಿ.ಮಾರಮ್ಮರವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಅಂತಿಮವಾಗಿ ನೆರೆದವರಿಗೆಲ್ಲ ಎಳ್ಳು ಬೆಲ್ಲ, ಹೂವು. ಹಾಗೂ ಸಿಹಿ ಹಂಚಿ ಸುಭ ಕೋರಿ ಸಂಕ್ರಮಣವನ್ನು ಸಂಭ್ರವಾಗಿ ಆಚರಿಸಲಾಯಿತು. ಮಮತಾ ಪ್ರಾರ್ಥಿಸಿದರು, ನಿರ್ಮಲಾ ಅಡ್ಮನಿರವರು ನಿರೂಪಿಸಿದರು. ಜಿ.ಶರಣ್ಯ ಸಂಘದ ಗೀತೆ ಹಾಡಿದರು. ಧನುಶ್ರೀರವರು ಶ್ಲೋಕವನ್ನು ಹೇಳಿದರು.
ಪ್ರತ್ಯುಷ ದೇವಿ ಅಮೃತ ವಚನ ವಾಚನ ಮಾಡಿದರು. ಮಹಾಲಕ್ಷ್ಮೀ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಡಾ”ರೂಪಾ ಉಪಸ್ಥಿತರಿದ್ದರು. ಡಾ”ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು