7:32 PM Saturday18 - May 2024
ಬ್ರೇಕಿಂಗ್ ನ್ಯೂಸ್
ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ…

ಇತ್ತೀಚಿನ ಸುದ್ದಿ

ಗಬ್ಬೂರು: ಶ್ರೀಕ್ಷೇತ್ರ ಕೈಲಾಸ ಮಹಾಶೈವ ಧರ್ಮಪೀಠದಲ್ಲಿ 78ನೇ ಶಿವೋಪಶಮನ ಕಾರ್ಯ

28/01/2024, 23:23

ರಮೇಶ್ ದೇವದುರ್ಗ ರಾಯಚೂರು

info.reporterkarnataka@gmail.com

ಗಬ್ಬೂರು ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಭಾನುವಾರದಂದು 78ನೆಯ ಶಿವೋಪಶಮನ ಕಾರ್ಯ ನಡೆಯಿತು.
ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು. ವಿಶ್ವೇಶ್ವರ ಶಿವನು ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜಗದೋದ್ದಾರದ ಲೀಲೆಯನ್ನಾಡುತ್ತ ವಿಶ್ವದ ತಂದೆಯಾಗಿ ಪ್ರಕಟಗೊಂಡಿರುವುದರಿಂದ ಮಹಾಶೈವ ಧರ್ಮಪೀಠವು ಲೋಕ ಸಮಸ್ತರ ಕಲ್ಯಾಣ ಕೇಂದ್ರವಾಗಿದೆ. ಮಹಾಶೈವ ಧರ್ಮಪೀಠವು ಶಿವನ ಗುಣಸ್ವಭಾವಗಳಾದ ಸಮತೆ, ಸರ್ವರುನ್ನತಿಯ ಅವಕಾಶ, ಸರ್ವಪೂರ್ಣತೆ, ಸರ್ವವ್ಯಾಪಕತ್ವತತ್ತ್ವದ ಪ್ರಾತಿನಿಧಿಕ ಧರ್ಮಪೀಠವಾಗಿದ್ದರಿಂದ ಜಾತಿ, ಧರ್ಮಗಳನ್ನು ಲೆಕ್ಕಿಸಿದೆ ಎಲ್ಲ ಮತಧರ್ಮೀಯರು ‘ಮುಕ್ಕಣ್ಣ ಶಿವ’ ನಿಗೆ ನಡೆದುಕೊಳ್ಳುತ್ತಿದ್ದಾರೆ. ಮಹಾಶೈವ ಧರ್ಮಪೀಠವು ಬ್ರಾಹ್ಮಣ-ದಲಿತ, ಹಿಂದೂ- ಮುಸ್ಲಿಂ, ಬೌದ್ಧ- ಕ್ರಿಶ್ಚಿಯನ್ ಎಂದು ಜನರಲ್ಲಿ ಯಾವುದೇ ಕೃತ್ರಿಮ ಭೇದ ಭಾವವನ್ನೆಣಿಸಿದೆ’ ಸರ್ವರಿಗೂ ಶಿವಾನುಗ್ರಹದ ಹಕ್ಕು ಇದೆ’ ಎಂದು ಪ್ರತಿಪಾದಿಸುತ್ತಿರುವ ಶಿವಶಕ್ತ್ಯಾತ್ಮಕ ಶಿವಾದ್ವೈತದಮಠವಾಗಿರುವುದರಿಂದ ಎಲ್ಲ ಜಾತಿ,ಮತ- ಧರ್ಮಗಳ ಜನರು’ ಇದು ನಮ್ಮ ಮಠ’ ವೆಂಬ ಭಾವನೆಯಿಂದ ಆಗಮಿಸಿ, ವಿಶ್ವೇಶ್ವರಶಿವನ ಸನ್ನಿಧಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.


ಅಲ್ಲದೆ ಪೀಠಾಧ್ಯಕ್ಷರಾದ ಶ್ರೀಮುಕ್ಕಣ್ಣ ಕರಿಗಾರ ಅವರ ಗುರುಗಳಾಗಿದ್ದ ಧಾರವಾಡದ ತಪೋವನದ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ಪ್ರಭು ಶಕ್ತಿಯನ್ನು ಧರೆಗಿಳಿಸಲು ವಿಶ್ವಕ್ಕೆ ಕರುಣಿಸಿದ್ದ “ಹೇ ಪ್ರಭೋ ಪ್ರಸೀದ ಓಂ” ಮಹಾಮಂತ್ರವನ್ನು ಧರ್ಮಪೀಠದ ದಾಸೋಹಸಮಿತಿಯ ಅಧ್ಯಕ್ಷರಾದ ಗುರುಬಸವ ಹುರಕಡ್ಲಿ ಅವರು ಪ್ರತಿ ಭಾನುವಾರ ಮಧ್ಯಾಹ್ನದ ಪ್ರಸಾದದ ಸಮಯದಲ್ಲಿ ಭಕ್ತರೆಲ್ಲರ ಮೂಲಕ ಸಾಮೂಹಿಕ ಪಠಣೆ- ಪ್ರಾರ್ಥನೆ ಮಾಡಿಸುತ್ತಿರುವುದರಿಂದ ಹೊಸಬಗೆಯ ಧಾರ್ಮಿಕ ಜಾಗೃತಿಯುಂಟಾಗಿದೆ.” ಹೇ ಪ್ರಭೋ ಪ್ರಸೀದ ಓಂ” ಮಂತ್ರವು ಕೂಡ ಯಾವುದೇ ಒಂದು ಮತ, ಧರ್ಮದ ಮಂತ್ರವಾಗಿರದೆ ವಿಶ್ವದ ಪ್ರಜಾಸಮಸ್ತರ ಕಲ್ಯಾಣದ ವಿಶ್ವಮಂತ್ರವಾಗಿದ್ದು ಗುರುಬಸವ ಹುರಕಡ್ಲಿ ಅವರು ಪ್ರತಿರವಿವಾರ ಪ್ರಸಾದ ಸಮಯದಲ್ಲಿ ಈ ಮಂತ್ರವನ್ನು ಭಕ್ತರ ಮೂಲಕ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿಸುವ ಮೂಲಕ ಭಕ್ತರಲ್ಲಿ ಮಹಾಶೈವ ಧರ್ಮದ ವಿಶಿಷ್ಟತೆಯನ್ನು ಪಸರಿಸುತ್ತಿದ್ದಾರೆ.
ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ, ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ಮೂಲಕಾರ್ಯಕರ್ತರುಗಳಾದ ಗೋಪಾಲಮಸೀದಪುರ, ಈರಪ್ಪ ಹಿಂದುಪುರ, ಧರ್ಮಪೀಠದ ದಾಸೋಹಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ, ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ, ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ, ಮಲ್ಲಯ್ಯ ಪೂಜಾರಿ ಜೇಗರಕಲ್, ಪತ್ರಕರ್ತರುಗಳಾದ ರಮೇಶ ಖಾನಾಪುರ, ಏಳುಬಾವೆಪ್ಪಗೌಡ, ಯಲ್ಲಪ್ಪ ಕರಿಗಾರ, ತಾತಪ್ಪ ಚಿಕ್ಕಳ್ಳಿ, ಸಿದ್ರಾಮಯ್ಯಸ್ವಾಮಿ ಹಳ್ಳಿ, ಮಲ್ಲಯ್ಯ ಹಿರೇಮಠ, ಜಗದೀಶರಾವ ಕಲ್ಬುರ್ಗಿ, ಹನ್ಮಂತಪ್ಪಗೌಡ ಪೋಲೀಸ್ ಪಾಟೀಲ್ ಮಸೀದಪುರ, ರಂಗನಾಥ ಮಸೀದಪುರ, ಶಿವಾನಂದ ಹಿಂದುಪುರ, ವೆಂಕಟೇಶ, ಪರಶುರಾಮ ಜಡೇರ್, ಹನುಮೇಶ, ಬೂದೆಪ್ಪ ಬಳ್ಳಾರಿ, ಲಿಂಗಪ್ಪ ಕರಿಗಾರ, ಹನುಮೇಶ ಹೊನ್ನಟಗಿ, ಬೂದಿಬಸವ ಶಾಂತಪ್ಪ, ಶರಣಪ್ಪ ಕರಿಗಾರ, ಗುರುದೇವ ಕರಿಗಾರ ಮತ್ತು ಶಿವಕುಮಾರ ವಸ್ತಾರ ಸೇರಿದಂತೆ ಭಕ್ತರುಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು