11:52 AM Sunday19 - April 2026
ಬ್ರೇಕಿಂಗ್ ನ್ಯೂಸ್
ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ… ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಸನದಲ್ಲಿ ಮೂರು ದಿನಗಳ ಆಪರೇಷನ್‌ ಯಶಸ್ವಿ: ನರಹಂತಕ ಕಾಡಾನೆ ಸೆರೆ ಬಳ್ಳಾರಿ | ಪ್ಯಾರಚೂಟ್ ತರಬೇತಿ ವೇಳೆ ತಾಂತ್ರಿಕ ದೋಷ: 50 ಅಡಿ ಎತ್ತರದಿಂದ… ತೀರ್ಥಹಳ್ಳಿಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ: ಪ್ರಕರಣ ದಾಖಲು Udupi | ಕಾಪು ಬಳಿ ಭೀಕರ ಲಾರಿ-ಕಾರು ಅಪಘಾತ: ಓರ್ವ ಸಾವು; ಇಬ್ಬರು… ಮಂತ್ರಾಲಯದ ಬಳಿ ಭೀಕರ ಅಪಘಾತ: 8 ಮಂದಿ ಸಾವು, ತರೀಕೆರೆ ತಾಲೂಕಿನ ಇಬ್ಬರು… ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ, ಸಂಪುಟ ಪುನರ್ ರಚನೆ ಆಗಲಿ: ಆರೋಗ್ಯ… ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ 17 ಮಂದಿಗೆ ಜೀವಾವಧಿ… ಪುತ್ರನ ಮೇಲಿನ ಹಲ್ಲೆ ಕೇಸ್ ಕೈಬಿಡಿ: ಅನಂತ ಕುಮಾರ್ ಹೆಗಡೆ ಮನವಿಗೆ ಸ್ಪಂದಿಸಿದ…

ಇತ್ತೀಚಿನ ಸುದ್ದಿ

ಕಂಬಳ ಕೋಣಗಳ ಯಜಮಾನ ಕೆದುಬರಿ ಗುರುವಪ್ಪ ಪೂಜಾರಿ ಅಪಘಾತದಲ್ಲಿ ನಿಧನ

08/08/2021, 17:59

Photo source : BeautyOfTulunad
ಮಂಗಳೂರು (ReporterKarnataka.com)

ಕಂಬಳ ಕ್ಷೇತ್ರದಲ್ಲಿ ಅಗ್ರಮಾನ್ಯರಾದ ಕಂಬಳದ ಕೋಣಗಳ‌ ಯಜಮಾನ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿಯವರು ಅಪಘಾತದಲ್ಲಿ ನಿಧನರಾಗಿದ್ದಾರೆ.
ಕಂಬಳ ಕ್ಷೇತ್ರದಲ್ಲಿ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿಯ ಹೆಸರು ಚಿರಪರಿಚಿತ. ಕಳೆದ 47 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಕೃಷಿಭೂಮಿ ಹೊಂದಿದ್ದು, ಬಾಲ್ಯದಿಂದಲೇ ಕಂಬಳದ ಆಸಕ್ತಿ ಹೊಂದಿದ್ದರು, ತನ್ನ ಗದ್ದೆ ಉಳಲೆಂದು ಉತ್ತಮ ಜಾತಿಯ ಕೋಣಗಳನ್ನು ತಂದು, ಕೃಷಿ ಕೆಲಸ ಮುಗಿದ ಬಳಿಕ ಕಂಬಳ ಗದ್ದೆಗಳಲ್ಲಿ ಓಡಿಸಿ ಖುಷಿ ಪಡೆಯುತ್ತಿದ್ದರು. ಮುಂದೆ, ದೂರದ ಊರುಗಳಲ್ಲಿ ನಡೆಯುವ ಕಂಬಳಗಳತ್ತ ಗಮನ ಕೇಂದ್ರೀಕರಿಸಿದ ಇವರು ಕಂಬಳಕ್ಕಾಗಿಯೇ ಹುಬ್ಬಳ್ಳಿ, ಕೋಟಾ ಮೊದಲಾದ ಕಡೆಯಿಂದ ಉತ್ತಮ ಜಾತಿಯ ಕೋಣಗಳನ್ನು ತಂದು, ಪಳಗಿಸುವುದರಲ್ಲಿ ಎತ್ತಿದ ಕೈ. ಇವರು ಹಿರಿಕಿರಿಯ ಕಂಬಳಾಸಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಪ್ರಥಮ ಬಾರಿಗೆ ಬಾರಾಡಿ ಕಂಬಳದಲ್ಲಿ ಗುರುತಿಸಲ್ಪಟ್ಟಿದ್ದ ಇವರು ಇದಕ್ಕಿಂತ ಮುಂಚೆ ಪೂಕರೆ ಕಂಬಳಗಳಲ್ಲಿ ಪಾಲ್ಗೊಂಡಿದ್ದರು. ಆರಂಭದ ದಿನಗಳಲ್ಲಿ ಕೋಣ ಓಡಿಸಿದ್ದರು. ಬಳಿಕ ಜೋಡಿ ಕೋಣ ಸಾಕಿ, ಅವುಗಳನ್ನು ಕಂಬಳಕ್ಕೆ ಕೊಂಡೊಯ್ಯುವ ಗೀಳು ಬೆಳೆಸಿಕೊಂಡಿದ್ದರು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ನೆರೆಯ ಉಡುಪಿ ಜಿಲ್ಲೆಯಲ್ಲಿ ನಡೆಯುವ ಎಲ್ಲ ಕಂಬಳಗಳಲ್ಲಿ ಕೋಣ ಇಳಿಸಿದ ಇವರಿಗೆ ಬಹುತೇಕ ಕಡೆಗಳಲ್ಲಿ ಮೆಡಲ್ ಸಿಕ್ಕಿದೆ. ಕದ್ರಿ, ಮೂಲ್ಕಿ, ಮಿಜಾರು, ಬಜಗೋಳಿ, ಪುತ್ತೂರು, ಕಾವಳಕಟ್ಟೆ-ಮೂಡೂರು ಪಡು, ಉಪ್ಪಿನಂಗಡಿ, ಜೆಪ್ಪು, ಕಟಪಾಡಿ, ಮೂಡಬಿದ್ರೆ, ವೇಣೂರು, ಕಾಜೂರು, ಬೋಳಿಯಾರು, ಪಡುಬಿದ್ರಿ, ಐಕಳ ಬಾವ, ತಿರುವೈಲು, ಬೊಳ್ಳೂರು (ಗುರುಪುರ), ಸುರತ್ಕಲ್, ಪಿಲಿಕುಲ, ಹೊಸಬೆಟ್ಟು ಹೀಗೆ ಎಲ್ಲೆಲ್ಲಿ ಕಂಬಳ ನಡೆಯುತ್ತಿದೆಯೋ ಅಲ್ಲಿ ಕೆದುಬರಿ ಗುರುವಪ್ಪನವರ ಕೋಣಗಳು ಹಾಜರಾಗುತ್ತಿದ್ದವು.

ಇತ್ತೀಚಿನ ಸುದ್ದಿ

ಜಾಹೀರಾತು