ಇತ್ತೀಚಿನ ಸುದ್ದಿ
ಜನವರಿ 22: ಶಕ್ತಿ ನಗರದ ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ‘ಶ್ರೀರಾಮ ವೈಭವ’ ಸಂಗೀತ ಕಾರ್ಯಕ್ರಮ
21/01/2024, 21:09
ಮಂಗಳೂರು(reporterkarnataka.com):ಕಲಾ ಸಾಧನ ಮ್ಯೂಸಿಕ್ ಸ್ಕೂಲ್ ನ ವತಿಯಿಂದ ಶಕ್ತಿ ನಗರದ ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಜ.22ರಂದು 10 ಗಂಟೆಗೆ ನಡೆಯಲಿರುವ ಶ್ರೀರಾಮ ವೈಭವ ಸಂಗೀತ ಕಾರ್ಯಕ್ರಮ ವನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟಿಸಲಿದ್ದಾರೆ.
ಶಕ್ತಿ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಡಾ.ಕೆ.ಸಿ.ನಾಯಕ್ ಸಮಾರಂಭ ದ ಅದ್ಯಕ್ಷತೆ ವಹಿಸಲಿದ್ದಾರೆ. ಬಳಿಕ ವಿಭಾ ನಾಯಕ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಇಂಡಿಯನ್ ರೆಡ್ ಕ್ರಾಸ್ ದಕ್ಷಿಣ ಕನ್ನಡ ಘಟಕದ ಸಭಾಪತಿ ಶಾಂತಾರಾಮ ಶೆಟ್ಟಿ,ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ,ದಿವಾಕರ ಪಾಂಡೇಶ್ವರ, ಶಕಿಲಾ ಕಾವ, ವನಿತಾ, ಕಿಶೋರ್ ಕೊಟ್ಟಾರಿ, ಮನೋಹರ ಕದ್ರಿ ಹಾಗೂ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಮಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ.