ಇತ್ತೀಚಿನ ಸುದ್ದಿ
ಸ್ವಾಮೀ ವಿವೇಕಾನಂದರ ಚಿಂತನೆಗಳನ್ನು ನಿರಂತರ ಪಾಲಿಸಿ: ಶಾಸಕ ವೇದವ್ಯಾಸ ಕಾಮತ್
13/01/2024, 00:17
ಚಿತ್ರ/ವರದಿ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆ, ಯುವನಿಕ ಫೌಂಡೇಶನ್, ಡಿಪಾರ್ಟ್ಮೆಂಟ್ ಆಫ್ ಸ್ಕಿಲ್ ಡೆವಲಪ್ಮೆಂಟ್, ಎನ್ ಸಿ. ಸಿ ಹೆಚ್.ಕ್ಯೂ ಮಂಗಳೂರು, ರಾಷ್ಟ್ರೀಯ ಸೇವಾಯೋಜನೆ ಸಹ ಭಾಗಿತ್ವದಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನಚರಣೆಯು ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ಜರುಗಿತು.
ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು.
ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ನಡೆದು ಬಂದ ದಾರಿಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಬೇಕು. ಅವರ ಚಿಂತನೆಗಳನ್ನು ನಿರಂತರ ಅಭ್ಯಾಸಿಸಬೇಕು. ಅದುವೇ ಈ ಕಾರ್ಯಕ್ರಮ ಉದ್ದೇಶವಾಗಿದೆ. ವಿವೇಕಾನಂದರು ಇಡೀ ದೇಶಕ್ಕೆ ಸಂಸ್ಕೃತಿಯನ್ನು ಸಾರಿದ ವ್ಯಕ್ತಿ ಎಂದರು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಸ್ವಾಮೀ ವಿವೇಕಾನಂದರು ಇಡೀ ಪ್ರಪಂಚದಲ್ಲಿ ಬದುಕಲು ಕಲಿಸಲು ಕಲಿಸಿಕೊಟ್ಟ ಮಹಾನ್ ವ್ಯಕ್ತಿ. ನಾವು ಗುರಿಯನ್ನು ಇಟ್ಟು ಕೊಂಡು ಕೆಲಸ ಮಾಡಿದರೆ, ನಿರಂತರ ಪ್ರಯತ್ನ ಮಾಡಿದರೆ ಅದಕ್ಕೆ ನಮ್ಮ ಗುರುಗಳ ಆಶೀರ್ವಾದ ಖಂಡಿತ ಇರುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಡಿವಿಷನ್ ಆಫೀಸರ್, ಎನ್ಎಸ್ ಎಸ್ ಡಿಪಾರ್ಟ್ಮೆಂಟ್ ಆಫ್ ಸ್ಕೂಲ್ ಆಫ್ ಎಜುಕೇಶನ್ ಡಿವಿಷನ್ ಆಫೀಸರ್ ಸವಿತಾ ಎರ್ಮಾಳ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಇಚ್ಚಾ ಶಕ್ತಿಯ ಕೊರತೆ ಇದೆ. ನಮ್ಮ ಮಕ್ಕಳು ಯಾವುದು ಡಿಗ್ರಿ ಪಡೆಯುವ ಚಿಂತನೆಯಲ್ಲಿರುತ್ತಾರೆ. ಕೊನೆಗೆ ಯಾವುದೋ ಬಿಕಾಂನಂತಹ ಯಾವುದೋ ಒಂದು ಡಿಗ್ರಿ ಪಡೆಯುತ್ತಾರೆ. ಆದರೆ ಹೊರ ಜಿಲ್ಲೆಗಳ ಮಕ್ಕಳು ಸರ್ಕಾರಿ ಎಕ್ಸಾಮ್ ಬರೆದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳುತ್ತಾರೆ. ನಾವು ಜೀವನ ಪೂರ್ತಿ ಚಪ್ಪಾಳೆ ಹೊಡಿತಾ ಇರುತ್ತೇವೆ. ನಿಮ್ಮ ಜೀವನವನ್ನು ರಿ ಸ್ಟಾರ್ಟ್ ಮಾಡಿ ಜೀವನದಲ್ಲಿ ಮುನ್ನುಗ್ಗಿ ಎಂದು ಕರೆ ನೀಡಿದರು.
ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಭರತ್, ಯುವನಿಕ ಫೌಂಡೇಶನ್ ಕೋರ್ಡಿನೆಟರ್ ರಘುವೀರ್ ಸೂಟರ್ ಪೇಟೆ, ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಕರಾವಳಿ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಎಂ. ಜೈಕಿಶೇನ್ ಭಟ್, ಮಂಗಳೂರು ವಿಶ್ವ ವಿದ್ಯಾವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕನಾಧಿಕಾರಿ ಡಾ.ನಾಗರತ್ನ ಕೆ.ಎ. ಉಪಸ್ಥಿತರಿದ್ದರು.
ಡಾ. ಮಂಜುಳಾ ಶೆಟ್ಟಿ ನಿರೂಪಿಸಿ, ರಕ್ಷಾ ವಂದಿಸಿದರು.ಶಿಕ್ಷಕಿ ಅಕ್ಷತಾ ಶೆಣೈ,ರಾಷ್ಟ್ರೀಯ ಸೇವಾಯೋಜನೆಯ ಸ್ವಯಂ ಸೇವಕ,ಸೇವಕಿಯರು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು.