ಇತ್ತೀಚಿನ ಸುದ್ದಿ
ಮಂಗಳೂರು ತುಳು ಭವನದಲ್ಲಿ 13ರಂದು ಅಮೃತ ನುಡಿನಮನ: ಮಾಜಿ ಸಿಎಂ ವೀರಪ್ಪ ಮೊಯ್ಲಿ ಉಪಸ್ಥಿತಿ
12/01/2024, 19:49
ಮಂಗಳೂರು(reporterkarnataka.com): ಇತ್ತೀಚೆಗೆ ನಿಧನರಾದ ಶ್ರೇಷ್ಠ ವಿದ್ವಾಂಸ, ಸಾಹಿತಿ, ಶಿಕ್ಷಕ ಪ್ರೊ.ಅಮೃತ ಸೋಮೇಶ್ವರ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಜ.13ರ ಶನಿವಾರ ಅಪರಾಹ್ನ 3.00 ಗಂಟೆಗೆ ನಗರದ ಉರ್ವಾಸ್ಟೋರ್ ನ ತುಳು ಭವನದಲ್ಲಿ ನಡೆಯಲಿದೆ.
ನುಡಿನಮನ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ ಖಾದರ್, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಸಂಸದ ನಳಿನ್ ಕುಮಾರ್ ಕಟೀಲ್ , ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕರಾದ ವೇದವ್ಯಾಸ ಕಾಮತ್, ವೈ.ಭರತ್ ಶೆಟ್ಟಿ, ಹರೀಶ್ ಕುಮಾರ್ , ಮಂಜುನಾಥ್ ಭಂಡಾರಿ, ಮಂಗಳೂರು ವಿ.ವಿ.ಕುಲಪತಿ ಪ್ರೊ.ಜಯರಾಜ್ ಅಮೀನ್ ಮೊದಲಾದವರು ಭಾಗವಹಿಸುವರು ಎಂದು ತುಳು ಪರಿಷತ್ ಪ್ರಕಟಣೆ ತಿಳಿಸಿದೆ.