ಇತ್ತೀಚಿನ ಸುದ್ದಿ
ಕಾಫಿನಾಡಿಗೆ ಲಂಡನ್ ಅತಿಥಿ!: ಹಿಂದೂ ಧರ್ಮದ ಬಗ್ಗೆ ಅಧ್ಯಯನಕ್ಕೆ ಬಂದ ವಿದೇಶಿ ಪ್ರಜೆಗೆ ರಾಮ ಮಂದಿರದ ಮಂತ್ರಾಕ್ಷತೆ!
11/01/2024, 20:04

ಶಶಿ ಬೆತ್ತದಕೊಳಲು ಕೊಪ್ಪ ಚಿಕ್ಕಮಗಳೂರು
info.reporterkarnataka@gmail.com
ಭಾರತಕ್ಕೆ 9ನೇ ಬಾರಿ ಆಗಮಿಸಿರುವ, ಪ್ರಪಂಚದ 25 ಕ್ಕೂ ಹೆಚ್ಚು ದೇಶಗಳನ್ನ ಸೈಕಲ್ ನಲ್ಲೆ ಸುತ್ತಿರುವ ಇಂಗ್ಲೆಂಡ್ ಪ್ರಜೆಯಾದ ಹೆರಾಲ್ಡ್ ಕೊಪ್ಪ ತಾಲೂಕಿನ ಮೆಣಸಿನಹಾಡ್ಯ ಹತ್ತಿರ ಜಂಗಲ್ ಕ್ಯಾಂಪ್ ಹಾಕಿದ್ದಾರೆ.
ಮುಂಜಾನೆ 6ಕ್ಕೆ ಗಮನಿಸಿದ ಗ್ರಾಮಸ್ಥರು ಹೋಗಿ ಕಾಫಿ ನೀಡಿ, ಭಾರತದ ಮಲೆನಾಡಿನ ಸಂಸ್ಕೃತಿಯ ಬಗ್ಗೆ ಸಹೋದರರಾದ ವಾಸೇಗೌಡ ,, ಸಂಪತ್ ಕುಮಾರ್ ಅವರ ಭಾಷೆಯಲ್ಲಿಯೇ ವಿವರಿಸಿದರು. ನಿನ್ನೆಯಿಂದ ಊಟವನ್ನೆ ಮಾಡದ ಅವರಿಗೆ ಬೆಳಿಗ್ಗೆಯ ಉಪಹಾರ ನೀಡಿ, ಹಿಂದೂ ಧರ್ಮದ ಮತ್ತು ಭಗವದ್ಗೀತೆ ಬಗ್ಗೆ ಚಿಕ್ಕದಾಗಿ ಮಾಹಿತಿಯನ್ನು ವಾಸೇಗೌಡ ನೀಡಿದರು. ಹಾಗೆ ರಾಮ ಮಂತ್ರಾಕ್ಷತೆ ನೀಡಿ, ರಾಮ ಮಂದಿರದ ಬಗ್ಗೆ ಮಾಹಿತಿ ನೀಡಿದರು. ಕೈಯಲ್ಲಿ ಓಂ ಟ್ಯಾಟೂ ಹಾಕಿಕೊಂಡಿದ್ದ ಅವರು ಹಿಂದು ಧರ್ಮದ ಬಗ್ಗೆ ತಿಳಿಯಲು ಹೊರಟಿರುವುದು ಹೆಮ್ಮೆ ಅನ್ನಿಸುತ್ತಿದೆ.