ಇತ್ತೀಚಿನ ಸುದ್ದಿ
ಹಳೆಯಂಗಡಿ ಸಮೀಪ ನಂದಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: 4 ದೋಣಿಗಳ ವಶ
11/01/2024, 16:19
ಮುಲ್ಕಿ(reporterkarnataka.com): ಮಂಗಳೂರು ಹೊರವಲಯದ ಮುಲ್ಕಿ ಸಮೀಪದ ಹಳೆಯಂಗಡಿಯ ಕೊಪ್ಪಳ ಸಮೀಪ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ 4 ಕಬ್ಬಿಣದ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗಣಿ ಇಲಾಖೆ, ಕಂದಾಯ ಇಲಾಖೆ ಮತ್ತು ಪೋಲೀಸ್ ಇಲಾಖೆ ಸಂಯುಕ್ತವಾಗಿ ಈ ಕಾರ್ಯಾಚರಣೆ ನಡೆಸಿ ನಂದಿನಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದ 4 ಕಬ್ಬಿಣದ ದೋಣಿಗಳನ್ನು ವಶಪಡಿಸಿಕೊಂಡಿದೆ.