5:22 PM Saturday7 - March 2026
ಬ್ರೇಕಿಂಗ್ ನ್ಯೂಸ್
Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ 1,000 ಕೋಟಿ ವೆಚ್ಚದ ‘ಕಲ್ಯಾಣ ಪಥ’ ಯೋಜನೆಡಿ ರಸ್ತೆ ಅಭಿವೃದ್ಧಿ:ಮುಖ್ಯಮಂತ್ರಿ ರಾಜ್ಯ ಬಜೆಟ್ | ಮೈಸೂರು ರಾಜ್ಯದ 2ನೇ ಐಟಿ ಸಿಟಿಯಾಗಿ ರೂಪಿಸುವ ಯೋಜನೆ ರಾಜ್ಯದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ : ಬಜೆಟ್ ನಲ್ಲಿ ಘೋಷಣೆ

ಇತ್ತೀಚಿನ ಸುದ್ದಿ

ತೊಕ್ಕೊಟ್ಟು: ಜನವರಿ 13ರಂದು ಸಂಕ್ರಾಂತಿ ಕಾವ್ಯಧಾರೆ ಸಾಹಿತ್ಯ ಗೋಷ್ಠಿ ಮತ್ತು ಕೃತಿ ಲೋಕಾರ್ಪಣೆ

09/01/2024, 12:25

ಮಂಗಳೂರು(reporterkarnataka.com): ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಜನವರಿ 13ರಂದು ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿರುವ ಯುನಿಟಿ ಮಿನಿ ಹಾಲ್ ನಲ್ಲಿ ಸಂಕ್ರಾಂತಿ ಕಾವ್ಯಧಾರೆ ಸಾಹಿತ್ಯ ಗೋಷ್ಠಿ ಮತ್ತು ಕಡಲ‌ಹನಿ ಒಡಲ ಧ್ವನಿ ( ರತ್ನಾ ಭಟ್ ,ಹಾ .ಮ ಸತೀಶ, ಡಾ ಸುರೇಶ್ ನೆಗಳಗುಳಿ) ಗಜಲ್ ಸಂಕಲನದ ಲೋಕಾರ್ಪಣಾ ಸಮಾರಂಭ ಬೆಳಗ್ಗೆ ಗಂಟೆ 9ರಿಂದ ನಡೆಯಲಿದೆ.
ಈ ಸಮಾರಂಭದ ಉದ್ಘಾಟನೆ ಯನ್ನ ಕೊಟ್ರೇಶ ಉಪ್ಪಾರ ( ಕೇ.ಕ.ಸಾ.ವೇ ಸ್ಥಾಪಕಾಧ್ಯಕ್ಷರು ಬೆಂಗಳೂರು) ಇವರು ಮಾಡಲಿದ್ದಾರೆ. ವಾಸು ಸಮುದ್ರವಲ್ಲಿ ( ಕೇ.ಕ.ಸಾ.ವೇ ಮುಖ್ಯ ನಿರ್ವಾಹಕರು) ಅವರು ಆಶಯ ನುಡಿ ನುಡಿಯಲಿದ್ದಾರೆ.
ಇದೇ ವೇಳೆ ರತ್ನಾ ಭಟ್, ಹಾ.ಮ ಸತೀಶ ಮತ್ತು ಡಾ ಸುರೇಶ ನೆಗಳಗುಳಿ ಒಟ್ಟಾಗಿ ಸಂಕಲಿಸಿದ ಕಡಲ ಹನಿ ಒಡಲ ಧ್ವನಿ ಗಜಲ್ ಸಂಕಲನದ ಲೋಕಾರ್ಪಣೆಯನ್ನು ಮಹಮ್ಮದ್ ಬಡ್ಡೂರು( ಖ್ಯಾತ ಗಜಲ್ ಕವಿ, ನಟ, ಮಂಗಳೂರು) ಇವರು ಮಾಡಲಿದ್ದಾರೆ.
ಸಾಹಿತ್ಯ ಗೋಷ್ಠಿ ಅಧ್ಯಕ್ಷತೆಯನ್ನು ರತ್ನಾ ಕೆ. ಭಟ್ ತಲಂಜೇರಿ( ವಿಶ್ರಾಂತ ಮುಖ್ಯೋಪಾಧ್ಯಾಯಿನಿ, ಸಾಹಿತಿ, ಯಕ್ಷಗಾನ ಪಟು ಪುತ್ತೂರು) ವಹಿಸಲಿದ್ದಾರೆ.
ಗೋಷ್ಠಿ ಚಾಲನೆಯನ್ಮು ವೆಂಕಟ್ ಭಟ್ ಎಡನೀರು ( ಖ್ಯಾತ ವ್ಯಂಗ್ಯ ಚಿತ್ರಗಾರರು ಹಾಗೂ ನಗೆ ಚುಟುಕು ಕವಿಗಳು) ನಡೆಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಡಾ ಸುರೇಶ ನೆಗಳಗುಳಿ,( ದ.ಕ. ಜಿಲ್ಲಾ ವೇದಿಕೆ ಅಧ್ಯಕ್ಷರು ಮಂಗಳೂರು)ವಹಿಸಲಿದ್ದಾರೆ.
ಗಿರಿಜಾ ಎಂಟರ್ ಪ್ರೈಸಸ್ ನ ಲಯನ್ ಶ್ರೀನಾಥ್, ನವೀನ್ ನಾಯಕ್ ( ಉದ್ಯಮಿ ತೊಕ್ಕೊಟ್ಟು ಮಂಗಳೂರು)
ಕೊಳ್ಚಪ್ಪೆ ಗೋವಿಂದ ಭಟ್ ( ಸಾಹಿತಿ ಮಂಗಳೂರು)
ರೇಮಂಡ್ ಡಿ‌ಕುನ್ಹ ( ಪಿಂಗಾರ ಪತ್ರಿಕೆ ಮಂಗಳೂರು) ಪರಿಮಳಾ ಮಹೇಶ್ (ಉಪಾಧ್ಯಕ್ಷರು ಕೇ‌..ಕ.ಸಾ.ವೇ ದ.ಕ. ಸಮಿತಿ) ಮತ್ತು ಮನ್ಸೂರ್ ಮುಲ್ಕಿ (ಉಳ್ಳಾಲ ಎ‌ಎಸ್.ಐ) ಉಪಸ್ಥಿತರಿರುವರು. ಈ ಸಾಹಿತ್ಯ ಸಂಭ್ರಮಕ್ಕೆ ಸರ್ವ ಸಾಹಿತ್ಯಾಸಕ್ತರಿಗೆ ಸ್ವಾಗತ ಎಂದು ಅದ್ಯಕ್ಷ ಡಾ ಸುರೇಶ ನೆಗಳಗುಳಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು