4:55 PM Saturday11 - July 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಶಾಸಕಿ ನಯನ ಮೋಟಮ್ಮ ಪರ ಕಾರ್ಯಕರ್ತರ ಬ್ಯಾಟಿಂಗ್; ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ ಮಂಡ್ಯ: ಕಟ್ಟಡದ ಮೇಲಿಂದ ಬಿದ್ದು ಫೈಂಟ್ ಮಾಡುತ್ತಿದ್ದ ಕಾರ್ಮಿಕ ದಾರುಣ ಸಾವು ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷ?: ಕುಮಾರಸ್ವಾಮಿ ಭೇಟಿ ಮಾಡಿದ ತಾಲೂಕು ಅಧ್ಯಕ್ಷರ ನಿಯೋಗ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಯಲ್ಲಿ ಮಹತ್ವದ ಅಂಶ ಬಹಿರಂಗ; ಶೀಘ್ರದಲ್ಲೇ… ಶೃಂಗೇರಿ | ಗೋರಿಗುಡ್ಡ ಮಸೀದಿ ರಕ್ಷಣೆಗೆ ಕಟ್ಟಿದ್ದ ಕಾಂಕ್ರೀಟ್ ವಾಲ್ ನಲ್ಲಿ ಬಿರುಕು:… ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಏರು ರಸ್ತೆ ಹಾನಿ;… Kodagu | ಮಡಿಕೇರಿ ರಾಜಾಸೀಟ್ ನಾಳೆಯಿಂದ ಜುಲೈ 12ರವರೆಗೆ ಕ್ಲೋಸ್: ಜಿಲ್ಲಾಧಿಕಾರಿ ಆದೇಶ ನಾಗರಹೊಳೆ ಉದ್ಯಾನದ ಬೀಟ್‌ಗಾರ್ಡ್ ಮನೆಯಲ್ಲಿ ಅಕ್ರಮ ಜಿಂಕೆ ಪತ್ತೆ: ಬಂಧನ; ಬಂದೂಕು ವಶ ಮೂಗ್ರಹಳ್ಳಿ ಸೇತುವೆ ಕಾಮಗಾರಿಯಲ್ಲಿ ಸುರಕ್ಷತೆ ನಿರ್ಲಕ್ಷ್ಯ ಆರೋಪ; ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಗ್ರಾಮಸ್ಥರ… ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ…

ಇತ್ತೀಚಿನ ಸುದ್ದಿ

ಎಂಸಿಎಫ್ ಸಾಮಾಜಿಕ ಬದ್ಧತಾ ನಿಧಿಯಡಿ ಕೃತಕ ಮಂಡಿ ಜೋಡಣೆ, ವೀಲ್ ಚೇರ್ ಮತ್ತಿತರ ಸಲಕರಣೆಗಳ ವಿತರಣೆ: ಅಂತಾರಾಷ್ಟ್ರೀಯ ಗುಣಮಟ್ಟದ ಕೃತಕ ಅಂಗಾಂಗಗಳ ವ್ಯವಸ್ಥೆ

04/01/2024, 23:07

ಮಂಗಳೂರು(reporterkarnataka.com):ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ ಅವರ ಶಿಫಾರಸ್ಸಿನಂತೆ ಎಂಸಿಎಫ್ ಕಂಪೆನಿಯ ಸಾಮಾಜಿಕ ಬದ್ಧತಾ ನಿಧಿಯಡಿ ಕೃತಕ ಮಂಡಿ ಜೋಡಣೆ, ವೀಲ್ ಚೇರ್ ಮತ್ತಿತರ ಸಲಕರಣೆಗಳ ವಿತರಣೆ ಎಂಸಿಎಫ್ ಸಭಾಂಗಣದಲ್ಲಿ ಜರಗಿತು.
ಶಾಸಕ ಡಾ.ಭರತ್ ಶೆಟ್ಟಿ ವೈ, ಸುರತ್ಕಲ್ ಅಥರ್ವ ಆಸ್ಪತ್ರೆಯ ಡಾ.ಪ್ರಶಾಂತ್ ಮೋಹನ್ ಅವರು ಫಲಾನುಭವಿಗಳಿಗೆ ಕೃತಕ ಅಂಗಾಂಗ ಜೋಡಣಾ ಸಲಕರಣೆ ವಿತರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಳೆದ ಐದು ವರ್ಷಗಳಲ್ಲಿ ಅಗತ್ಯವುಳ್ಳವರಿಗೆ ಅಂತಾರಾಷ್ರ್ಟೀಯ ಗುಣಮಟ್ಟದ ಕೃತಕ ಅಂಗಾಂಗ ಜೋಡಣೆಯ ವ್ಯವಸ್ಥೆಯನ್ನು ಮಾಡುವ ಮೂಲಕ ಎಂಸಿಎಫ್ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ ಎಂದು ಶ್ಲಾಘಿಸಿದರು. ಕ್ಲಾಸ್ ರೂಂ ನವೀಕರಣ, ಅಂಗನವಾಡಿ ಕೇಂದ್ರದ ನವೀಕರಣ, ಸರಕಾರಿ ಲೇಡಿಗೋಶನ್ ಆಸ್ಪತ್ರೆಗೆ ಟ್ರೋಲಿ, ಆಮ್ಲಜನಕ ಉತ್ಪಾದನಾ ಘಟಕ ಸೇರಿದಂತೆ ವಿವಿಧ ಸಹಾಯ, ಸಹಕಾರ ಮತ್ತು ಅಭಿವೃದ್ಧಿ ಕಾರ್ಯಗಳು ನಡೆದಿವೆ ಸಂಸ್ಥೆಗೆ ಈ ಸಂದರ್ಭದಲ್ಲಿ ಕೃತಜ್ನತೆ ಅರ್ಪಿಸುವುದಾಗಿ ಶಾಸಕರು ನುಡಿದರು.
ಎಂಸಿಎಫ್‍ನ ಸಿಇಒ ಆಗಿರುವ ನಿತಿನ್ ಎಂ. ಕಾಂತಕ್ ಅವರು ಮಾತನಾಡಿ, ಸಿಎಸ್‍ಆರ್ ನಿಧಿಯಡಿ ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ಮುಂದೆಯೂ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಂಸಿಎಫ್ ಉತ್ಪಾದನಾ ವಿಭಾಗದ ಮುಖ್ಯಸ್ಥ ಗಿರೀಶ್ ಎಸ್. ಅವರು ಸಿಎಸ್‍ಆರ್ ಯೋಜನೆಯ ಕುರಿತಂತೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮನಪಾ ಸದಸ್ಯೆ ಜಯಲಕ್ಷ್ಮೀ ಶೆಟ್ಟಿ,ಎಂಸಿಎಫ್‍ನ ಪ್ರಮುಖ ಅಧಿಕಾರಿಗಳು,ಸಿಎಸ್‍ಆರ್ ವಿಭಾಗದ ಅಧಿಕಾರಿಗಳು,ಎಂಡೋಲೈಟ್ ಸಂಸ್ಥೆಯ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.
ಎಂಸಿಎಫ್ ಸಂಸ್ಥೆಯ ಡಾ.ಯೋಗೀಶ್ ನಿರೂಪಿಸಿದರು. ಚೇತನ್ ಮೆಂಡೋನ್ಸಾ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು