ಇತ್ತೀಚಿನ ಸುದ್ದಿ
ಸರಕಾರಿ ಶಾಲೆ ಜಮೀನು ಕುರಿತು ಮರುಸರ್ವೆ ಮಾಡಿ ತನಿಖೆ ನಡೆಸಿ, ನಿಮ್ಮದೇ ಸರಕಾರವಿದೆ: ಶಾಸಕ ಡಾ.ಭರತ್ ಶೆಟ್ಟಿ ಸವಾಲು
29/12/2023, 16:02
ಕಾವೂರು(reporterkarnataka.com): ಜನತಾ ಕಾಲನಿಯ ಸರಕಾರಿ ಶಾಲೆಯ ಮೈದಾನದಲ್ಲಿ ಖಾಸಗೀ ಜಮೀನು ಎಂದು ಮನೆ ನಿರ್ಮಾಣ,ಮಾರಾಟಕ್ಕಿಳಿದರುವ ಕುರಿತಂತೆ ಮೊಯಿದಿನ್ ಬಾವಾ ಅವರೇ, ನನ್ನ ಮೇಲೆ ಗೂಬೆ ಕೂರಿಸುವ ಮೊದಲು ನೀವು ಎಷ್ಟು ಸಲ ಬೇಕಾದರೂ ಸರ್ವೆ ನಡೆಸಿ ,ತನಿಖೆ ನಡೆಸಿ,ಸತ್ಯ ಹೊರಗೆ ತನ್ನಿ,ನೀವು ಹೇಳುವಂತೆ ಕೇಳುವ ಕಾಂಗ್ರೆಸ್ ಸರಕಾರ
ವಿದೆ.ಈ ಹಿಂದೆ ಸರಕಾರಿ ಶಾಲೆಯ ಮಕ್ಕಳು ಆಟವಾಡುತ್ತಿರುವ ಮೈದಾನ ದ ಸತ್ಯ ವಿಚಾರಗಳು ಬಹಿರಂಗವಾಗಲಿ ಎಂದು ಶಾಸಕ ಡಾ.ಭರತ್ ಶೆಟ್ಟಿ ಸವಾಲು ಹಾಕಿದ್ದಾರೆ.
ಖಾಸಗೀಯವರು ಮಾರಾಟಕ್ಕೆ ಯತ್ನಿಸಿದಾಗ ಶಿಕ್ಷಣ ಇಲಾಖೆ ಮೌನವಹಿಸಿದ್ದು ಯಾಕೆ? ಬೇರೆಡೆ ಮಂಜೂರಾದ ಭೂಮಿ ಏನಾಯಿತು?. ಯಾವ ಉದ್ದೇಶಕ್ಕೆ ಬಳಕೆಯಾಗಿದೆ ಇದೆಲ್ಲಕ್ಕೂ ಉತ್ತರ ಸಿಗಲಿ. ಸೂಕ್ತ ತನಿಖೆ ಮಾಡಿಸಿ, ಅದು ಬಿಟ್ಟು ನೀವು ಯಾವುದೇ ಪುರಾವೆ ಇಲ್ಲದೆ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಮಾತನಾಡುವುದನ್ನು ನಿಲ್ಲಿಸಿ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ.