ಇತ್ತೀಚಿನ ಸುದ್ದಿ
ಉಡುಪಿ ನಗರಸಭೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪರ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಮತಯಾಚನೆ
26/12/2023, 15:16
ಉಡುಪಿ(reporterkarnataka.com): ಉಡುಪಿ ನಗರಸಭೆ ವ್ಯಾಪ್ತಿಯ ಪೆರಂಪ್ಪಳ್ಳಿ ವಾರ್ಡಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾದ ಶೃತಿ ಪೂಜಾರಿ ಅವರ ಪರವಾಗಿ ವಿಧಾನ ಪರಿಷತ್ ಸದ್ಯಸರಾದ ಮಂಜುನಾಥ ಭಂಡಾರಿ ಅವರು ಮತಯಾಚನೆ ಮಾಡಿದರು.
ಕೆಪಿಸಿಸಿ ಸದಸ್ಯರಾದ ದಿನೇಶ್ ಪುತ್ರನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಾಬಲ ಕುಂದರ್, ಲಾರೆನ್ಸ್ ಡಿಸೋಜ ಹಾಗೂ ಪಕ್ಷದ ಇತರ ನಾಯಕರು ಇದ್ದರು.