3:52 PM Saturday20 - December 2025
ಬ್ರೇಕಿಂಗ್ ನ್ಯೂಸ್
ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಲೋಕ ಕಲ್ಯಾಣಕ್ಕಾಗಿ 150 ಕಿಮೀ ದೂರದ ಆಂಧ್ರದಿಂದ ಕೊಟ್ಟೂರಿಗೆ‌ ಕಾಲ್ನಡಿಗೆಯಲ್ಲಿ ಆಗಮಿಸಿದ ಭಕ್ತ ದೊಡ್ಡನಗೌಡ

24/12/2023, 11:11

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಡಿ. 25ರಂದು ಕೊಟ್ಟೂರಲ್ಲಿ ಜರುಗಲಿರುವ, ಶ್ರೀಗುರು ಕೊಟ್ಟೂರೇಶ್ವರ ಕಾರ್ತೀಕೋತ್ಸವಕ್ಕಾಗಿ ನೆರೆ ರಾಜ್ಯ ಆಂಧ್ರ ಪ್ರದೇಶದಿಂದ ಕರ್ನಾಟಕದ ಕೊಟ್ಟೂರು ಕ್ಷೇತ್ರಕ್ಕೆ, ಭಕ್ತನೋರ್ವ ಸುಮಾರು 150 ಕಿಮೀ ಅಂತರದಿಂದ ಕಾಲ್ನಡಿಗೆ ಮೂಲಕ ಶ್ರೀಕೊಟ್ಟೂರೇಶ್ವರ ಸ್ವಾಮಿ ದರ್ಶನಕ್ಕಾಗಿ ತೆರಳಿದ್ದಾನೆ.
ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ತಾಲೂಕು ಆಲಅಡವಿ ಮಂಡಲದ ಸಿರಿಗಾಪುರ ಗ್ರಾಮದ 28 ವರ್ಷದ ಯುವ ರೈತ ದೊಡ್ಡನಗೌಡ ಅವರು ಲೋಕ ಕಲ್ಯಾಣಕ್ಕಾಗಿ ಹಾಗೂ ಸಕಲರಿಗೂ ನೆಮ್ಮದಿ ನೀಡೆಂದು ಬೇಡಿಕೊಳ್ಳಲು, 150ಕಿ ಮೀ ದೂರದಿಂದ ಕಾಲ್ನಡಿಗೆ ಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಮೂಲಕ ವಿಜಯನಗರ ಜಿಲ್ಲೆಯ ಕೊಟ್ಟೂರು ಶ್ರೀಕೊಟ್ಟೂರೇಶ್ವರ ದೇವರ ಕಾರ್ತೀಕೋತ್ಸವಕ್ಕಾಗಿ, 150 ಕಿಮೀ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದಾರೆ ದೊಡ್ಧನ ಗೌಡ. ಇದು ಸತತ 2ನೇ ವರ್ಷದ ಪಾದಯಾತ್ರೆಯಾಗಿದ್ದು, ಆಂದ್ರಪ್ರದೇಶದ ಕರ್ನೂಲು ಜಿಲ್ಲೆಯಿಂದ ಕರ್ನಾಟಕದ ವಿಜಯನಗರ ಜಿಲ್ಲೆ ಕೊಟ್ಟೂರುಗೆ ಒಟ್ಟು 150 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದಾರಡ ಯುವ ರೈತ 28 ವರ್ಷದ ದೊಡ್ಡನಗೌಡ, ಡಿ23ರಂದು ಸಂಜೆ ಕೂಡ್ಲಿಗಿ ಪಟ್ಟಣ ಪ್ರವೇಶಿಸಿದ ಆಂಧ್ರ ಮೂಲದ ಶ್ರೀಕೊಟ್ಟೂರೇಶ್ವರ ಸ್ವಾಮಿಯ ಭಕ್ತ ದೊಡ್ಡನಗೌಡ. ಸೂರ್ಯಾಸ್ಥ ಆದ ಕಾರಣ ಅವರು ಪಟ್ಟಣದ ಹೊರವಲಯದ ಶ್ರೀ ಗಣೇಶನ ಗುಡಿಯಲ್ಲಿ ತಂಗಿದ್ದಾರೆ. 24ರ ಭಾನುಬಾರ ಬೆಳ್ಳಂಬೆಳಿಗ್ಗೆ ಮಡಿ ಮುಡಿಯೊಂದಿಗೆ, ತಮ್ಮ ಬಳಿಯಲ್ಲಿರುವ ಶ್ರೀಗುರು ಕೊಟ್ಟೂರೇಶ್ವರರ ಧ್ವಜಕ್ಕೆ ಪೂಜೆಗೈದು. ಲಘು ಉಪಹಾರ ಮತ್ತು ನೀರು ಸೇವಿಸುತ್ತಾರೆ, ಕೊಟ್ಟೂರು ಕಡೆ ಪಾದಯಾತ್ರೆ ಮುಂದುವರೆಸಿದ್ದಾರೆ ಭಕ್ತ ದೊಡ್ಡನಗೌಡ, ಶ್ರೀಕೊಟ್ಟೂರೇಶ್ವರ ದೇವರ ಭಾವಚಿತ್ರ ಇರುವ ಧ್ವಜವನ್ನಿಡಿದು ಪಾದಯಾತ್ರೆ ಮಾಡುತ್ತಾರೆ. ಡಿ 21ರಂದು ಆರಂಭಗೊಂಡ ಕಾಲ್ನಡಿಗೆಯಾತ್ರೆಯನ್ನು, ಅವರು ಉಪವಾಸ ವ್ರತದೊಂದಿಗೆ ಮಾಡುತ್ತಿರುವುದೇ ವಿಶೇಷವಾಗಿದೆ. ಆಹಾರವನ್ನೇ ಸೇವಿಸದೇ ಕೇವಲ ಫಲಾರ (ಖಾರ ಮಂಡಕ್ಕಿ ಮಿರ್ಚಿ) ಹಾಗೂ ನೀರನ್ನು ಮಾತ್ರ ಸೇವಿಸುತ್ತಾರೆ ದೊಡ್ಡನಗೌಡ. ತಮ್ಮ ಸ್ವ ಗ್ರಾಮದಿಂದ ಹೊರಟ ಯುವ ರೈತ ದೊಡ್ಡಗೌಡ ಪ್ರತಿ ದಿನಕ್ಕೆ, 30-35ಕಿಮೀ ಕಾಲ್ನಡಿಗೆ ಯಾತ್ರೆ ಮೂಲಕ ಮಾರ್ಗ ಕ್ರಮಿಸುತ್ತಾರೆ. ಕೊಟ್ಟೂರಲ್ಲಿ ಡಿ25ರಂದು ಜರುಗಲಿರುವ, ಶ್ರೀಕೊಟ್ಟೂರೇಶ್ವರ ಕಾರ್ತೀಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಗುರು ಕೊಟ್ಟೂರೇಶ್ವರರ ಭಕ್ತ ದೊಡ್ಡನಗೌಡ ಇವರು ಹುಟ್ಟು ಉಗ್ಗುವಿಕೆಯಿಂದ ಬಳ ಲುತಿದ್ದು, ದೊಡ್ಡನ ಗೌಡ ಮಾತನಾಡಿದ್ದಾನೆ. ಲೋಕ ಕಲ್ಯಾಣಕ್ಕಾಗಿ ಹಾಗೂ ಸರ್ವರಿಗೂ ನೆಮ್ಮದಿ ನೀಡೆಂದು ತನ್ನ ಮನೆದೇವರಾದ, ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯಲ್ಲಿ ಬೇಡುವುದಾಗಿ. ಅದಕ್ಕಾಗಿ ಕಾಲ್ನಡಿಗೆ ಮೂಲಕ ಕೊಟ್ಟೂರಿಗೆ ತೆರಳುತ್ತಿರುವುದಾಗಿ ದೊಡ್ಡನಗೌಡ ನುಡಿದಿದ್ದಾರೆ. ಉಪವಾಸ ವ್ರತದೊಂದಿಗೆ ಸತತ ಐದು ದಿನಗಳ ಕಾಲ ಏಕಾಂಗಿಯಾಗಿ, ಆಂಧ್ರ ಪ್ರದೇಶದಿಂದ ಆರಂಭಿಸಿದ ಕಾಲ್ನಡಿಗೆಯಾತ್ರೆ ದಿನದ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ, ದಿನ ಒಂದಕ್ಕೆ 30-40 ಕಿ ಮೀ ಕ್ರಮಿಸುವುದಾಗಿ ಅವರು ತಿಳಿಸಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ಎಡ ಬಿಡದೆ ನಡೆಯುವ ದೊಡ್ಡನಗೌಡ, ಪಾದರಕ್ಷೆಯಿಲ್ಲದೇ ಬರೀ ಕಾಲಲ್ಲಿ 150 ಕಿಮೀ ಕಾಲ್ನಡಿಗೆಯಾತ್ರೆ ಕೈಗೊಂಡಿದ್ದಾರೆ. ಇವರ ಈ ಭಕ್ತಿಯ ಪರಾಕಾಷ್ಠೆಗೆ ಆಧ್ಯಾತ್ಮ ಚಿಂತಕರು ಹಾಗೂ ಆಸ್ಥಿಕರು, ಪ್ರಶಸಂನೆ ವ್ಯಕ್ತಪಡಿಸಿದ್ದಾರೆ. ಆಂಧ್ರ ಮೂಲದ ಯುವ ರೈತ ಶ್ರೀಗುರು ಕೊಟ್ಟೂರೇಶ್ವರರ ಭಕ್ತರಾದ, ದೊಡ್ಡನಗೌಡರ ಸಂಪರ್ಕ ಸಂಖ್ಯೆ 93468 21823 ಇದ್ದು. ಇವರು ಸದ್ಯ ಡಿ24ರಂದು ಬೆಳಿಗ್ಗೆ ಕೂಡ್ಲಿಗಿ ಪಟ್ಟಣದ ಶ್ರೀಗಣೇಶ ಗುಡಿಯಿಂದ ಕೊಟ್ಟೂರು ಕಡೆ ಕಾಲ್ನಡಿಗೆ ಯಾತ್ರೆ ಬೆಳಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು