ಇತ್ತೀಚಿನ ಸುದ್ದಿ
ಶಾಲಾ – ಕಾಲೇಜು ಕ್ಯಾಂಪಸ್ ಗಳಲ್ಲಿ ಯೂನಿಫಾರ್ಮ್ ವಸ್ತ್ರ ಸಂಹಿತೆಗೆ ಸರಕಾರವೇ ಅಡ್ಡಿ: ಶಾಸಕ ಡಾ.ಭರತ್ ಶೆಟ್ಟಿ ಕಿಡಿ
23/12/2023, 15:16
ಮಂಗಳೂರು(reporterkarnataka.com): ಶಾಲಾ ಕಾಲೇಜುಗಳು ರೂಪಿಸಿಕೊಂಡಿರುವ ಶಿಸ್ತುಬದ್ಧ ವಸ್ತ ಸಹಿತೆಗೆ ಸರಕಾರವೇ ಅಡ್ಡಗಾಲು ಹಾಕುತ್ತಿರುವುದು ವಿಷಾದನೀಯ.
ಹಿಜಾಬ್ ಧರಿಸಲು ಶಾಲಾ ಕೊಠಡಿ ಒಳಗೆ ಅನುಮತಿ ನೀಡುವುದಾದರೆ ಕೇಸರಿ ಶಾಲು ಧರಿಸಿ ಹಿಂದೂ ವಿದ್ಯಾರ್ಥಿಗಳು ಹೋಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ. ತಿರುಗೇಟು ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು ಕ್ಯಾಂಪಸ್ ಗಳಲ್ಲಿ ವಸ್ತ್ರ ಸಂಹಿತೆ ಕುರಿತಂತೆ ಸುಧೀರ್ಘ ಹೋರಾಟವೊಂದು ವಿವಿಧ ವಿದ್ಯಾರ್ಥಿ ಸಂಘಟನೆಗಳ ನಡುವೆ ರೂಪುಗೊಳ್ಳಬಹುದು ಎಂದಿರುವ ಶಾಸಕರು, ಸರಕಾರ ಕೂಡಲೇ ಎಚ್ಚೆತ್ತುಕೊಂಡು ತನ್ನ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಹಿಜಾಬ್ ಧರಿಸಲು ಕ್ಯಾಂಪಸ್ ಹೊರಗಡೆ , ಕಾಲೇಜಿನ ಒಳಗೂ ಅನುಮತಿ ನೀಡುವುದಾದರೆ, ಕೇಸರಿ ಶಾಲು ಧರಿಸಲು
ಹಿಂದೂಪರ ವಿದ್ಯಾರ್ಥಿಗಳಿಗೂ ಆಯ್ಕೆ ಸ್ವಾತಂತ್ರ್ಯ ವಿದೆ.
ಜಾತಿ ಗೊಂದರಂತೆ ಬಟ್ಟೆ ಧರಿಸಲು ಕ್ಯಾಂಪಸ್ ನಲ್ಲಿ ಅನುಮತಿ ನೀಡುವ ಮೂಲಕ ಸರಕಾರ ಶಾಲಾ-ಕಾಲೇಜಿನ ಯೂನಿಫಾರ್ಮ್ ವ್ಯವಸ್ಥೆಗೆ ಬೆಲೆ ಇಲ್ಲದಂತೆ ಮಾಡಿದೆ.
ಶಾಲಾ-ಕಾಲೇಜು ಕೊಠಡಿಯ ಒಳಗೆ ಎಲ್ಲರೂ ಸಮಾನರು ಎಂಬ ಭಾವನೆಗೆ ಸರಕಾರವೇ ಹಿಜಾಬ್ ಧರಿಸಲು ಅನುಮತಿ ನೀಡುವ ಮೂಲಕ ದಕ್ಕೆ ತಂದಂತಾಗಿದೆ. ಬಿಜೆಪಿ ಇದರ ವಿರುದ್ದ ಎಲ್ಲಾ ಹೋರಾಟ ಹಾದಿಯನ್ನು ಮುಕ್ತವಾಗಿ ಇರಿಸಿದೆ. ಸೂಕ್ತ ಸಮಾಲೋಚನೆಯ ಬಳಿಕ ಹೋರಾಟದ ಅಭಿಯಾನ ಆರಂಭವಾಗಲಿದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.