8:48 PM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಮೂಡುಬಿದರೆ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರೇರಣಾ ಕಾರ್ಯಾಗಾರ

22/12/2023, 21:43

ಮೂಡುಬಿದಿರೆ(reporterkarnataka.com): ಇಲ್ಲಿನ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರೇರಣಾ ಕಾರ್ಯಾಗಾರ ನಡೆಯುತ್ತಿದ್ದು ಡಾ ಸುರೇಶ ನೆಗಳಗುಳಿಯವರು ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ನಡುಹಗಲ ಕಾರ್ಯಾಗಾರ ವನ್ನು ನಡೆಸಿ ಕೊಟ್ಟರು.

ಸ್ನಾತಕೋತ್ತರ ಪದವಿ ಪಡೆಯ ಬೇಕಾದರೆ ಕೇವಲ ಪ್ರವೇಶ ಗಿಟ್ಟಿಸಿದರೆ ಸಾಲದು ಪ್ರತ್ಯುತ್ಪನ್ನ ಮತಿ ಸಹಿತವಾದ ಸಾಧನೆ ಅಗತ್ಯ. ಗ್ರಂಥೋಕ್ತ ವಿಚಾರಗಳನ್ನು ದಾಖಲೀಕರಣ ಮಾಡಲು ಸರಿಯಾದ ಅನುಸಂಧಾನದ ಅಗತ್ಯವಿದೆ. ಆದ ಕಾರಣ ಯೋಗ್ಯ ಉಪದೇಶಕನ ಜೊತೆಗೆ ಪೂರ್ಣ ಪ್ರಮಾಣದ ಕ್ರಮ ಬದ್ಧವಾದ ಅನುಸಂಧಾನ ಪ್ರಕ್ರಿಯೆ ಅಗತ್ಯ. ತೌಲನಾತ್ಮಕ ಅಧ್ಯಯನ, ವೈಜ್ಞಾನಿಕ ಸಲಕರಣೆಗಳಾದ ಸಿ‌.ಟಿ.ಸ್ಕಾನ್,ಕ್ಷ ಕಿರಣ, ಲ್ಯಾಬೊರೇಟರಿ ಇತ್ಯಾದಿಗಳನ್ನು ಬಳಸಿ ಸತ್ಯಾನ್ವೇಷಣೆ ಮಾಡ ಬೇಕು.
ಎಷ್ಟೋ ಉತ್ತಮ ಅಂಶಗಳು ಅಧ್ಯಯನದ ಕೊರತೆಯಿಂದ ಮಾಸಿ ಹೋಗಿವೆ. ಅಂಥವುಗಳ ಪುನರುಜ್ಜೀವನಕ್ಕೆ ಈ ರೀತಿಯ ಅಧ್ಯಯನ ಅಗತ್ಯ ಎನ್ನುತ್ತಾ ಹಲವಾರು ಪೂರಕ ಉದಾಹರಣೆಗಳನ್ನೂ ಸ್ವರಚಿತ ಮುಕ್ತಕ ಮಾಲೆಯನ್ನೂ ವಾಚಿಸಿದರು.


ಕಾಲೇಜು ಪ್ರಾಚಾರ್ಯ ಡಾ ಸಜೀತ್ ಎಂ. ಹಾಗೂ ಸ್ನಾತಕೋತ್ತರ ಡೀನ್ ಡಾ ರವಿರಾಜ ಹೆಗ್ಡೆ ಸಹಿತ ಎಪ್ಪತ್ತು ಮಂದಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡರು.
ಪ್ರಾಚಾರ್ಯರು ಪುಸ್ತಕ ಹಾರ ಹಾಗೂ ಶಾಲು ಹೊದೆಸಿ ಸನ್ಮಾನ ಮಾಡುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಇತ್ತೀಚಿನ ಸುದ್ದಿ

ಜಾಹೀರಾತು