10:55 PM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಚಳ್ಳಕೆರೆ: ಬರಗಾಲದಲ್ಲಿ 2 ಲಕ್ಷ ಸಾಲ ಮಾಡಿ ಬೆಳೆದ ಕರ್ಬುಜ ಹಣ್ಣಿನ ಬೆಳೆ ಸಂಪೂರ್ಣ ನಾಶ; ರೈತ ಕಂಗಾಲು

21/12/2023, 20:59

ಮುರುಡೇ ಗೌಡ ಚಳ್ಳಕೆರೆ ಚಿತ್ರದುರ್ಗ

info.reporterarnataka@gmail.com

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಮ್ಮತ್ ಮರಿಕುಂಟೆ ಗ್ರಾಮದಲ್ಲಿ ರೈತನೊಬ್ಬ ಕರ್ಬುಜ ಹಣ್ಣಿನ ಬೆಳೆ ಬರಗಾಲದಿಂದ ಸಂಪೂರ್ಣ ನೆಲಕಚ್ಚಿ ಹೋಗಿದ್ದು, ರೈತ ಕಂಗಾಲಾಗಿದ್ದಾರೆ.

ಕಿರಣ್ ಗೌಡ ಎಂಬ ರೈತ ತನ್ನ ಮೂರೂವರೆ ಎಕರೆ ಜಮೀನಿನಲ್ಲಿ ಕರ್ಬುಜ ಹಣ್ಣನ್ನು ಬೆಳೆದಿದ್ದಾರೆ. ಆದರೆ ಫಸಲು ಕೈ ಸೇರಬೇಕು ಅನ್ನುವಷ್ಟರಲ್ಲಿ, ಕರ್ಬುಜ ಹಣ್ಣುಗಳು ಹೊಸ ಬಗೆಯ ರೋಗಕ್ಕೆ ತುತ್ತಾಗಿ ಹಣ್ಣುಗಳು ಡ್ಯಾಮೇಜ್ ಆಗಿ ಹೋಗುತ್ತಿದ್ದು. ಇದರಿಂದ ಒಂದು ಹಣ್ಣನ್ನು ಸಹ ಮಾರಾಟ ಮಾಡದೆ ಕರ್ಬುಜ ಬೆಳೆಯನ್ನು ನಾಶಪಡಿಸಲು ರೈತ ಮುಂದಾಗಿದ್ದಾರೆ.
ಅನಂತಪುರದ ಶ್ರಾವಣಿ ಅಂಗಡಿಯಲ್ಲಿ, ಪಟಜಮ್ ತಳಿಯ ನಿರ್ಮಲಾ 24-24 ಬೀಜವನ್ನು ತಂದು ಬಿತ್ತನೆ ಮಾಡಿದ್ದಾರೆ. ಬೆಳೆಯು ಸಹ ಉತ್ತಮ ರೀತಿಯಲ್ಲಿ ಬಂದಿದ್ದು, ಫಸಲಿಗೆ ಬಂದಂತಹ ಸಮಯದಲ್ಲಿ ಹಣ್ಣುಗಳು ಸಂಪೂರ್ಣವಾಗಿ ಹೊಸ ರೀತಿಯ ರೋಗಕ್ಕೆ ತುತ್ತಾಗುತ್ತಿದ್ದು. ಇದರಿಂದ ರೈತನ ಕೈ ಸೇರಬೇಕಿದ್ದ 25 ರಿಂದ 30 ಟನ್ ಹಣ್ಣು ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗಿದೆ.
ಬರಗಾಲದಲ್ಲಿ ಎರಡು ಲಕ್ಷಕ್ಕೂ ಅಧಿಕ ಸಾಲವನ್ನು ಮಾಡಿ ಕರ್ಬುಜ ಹಣ್ಣನ್ನು ಬೆಳೆಯಲು ಮುಂದಾಗಿದ್ದೇನೆ. ಆದರೆ ಫಸಲಿಗೆ ಬಂದ ಹಣ್ಣುಗಳು ಸಂಪೂರ್ಣವಾಗಿ ರೋಗಕ್ಕೆ ತುತ್ತಾಗಿ ಆಗಿ ಹೋಗುತ್ತಿವೆ. ಇದರಿಂದ ಅಂಗಡಿಯಿಂದ ತಂದ ಬೀಜದ ಫಾಲ್ಟ್ ಅಥವಾ ಹೊಸ ತಳಿಯ ರೋಗ ಬಂದಿದೆಯಾ ಎಂಬುದು ತಿಳಿಯುತ್ತಿಲ್ಲ. ಬೆಳೆಯು ಸಂಪೂರ್ಣವಾಗಿ ನಷ್ಟವಾಗಿದ್ದು, ಇದರಿಂದ ಬೆಳೆಯನ್ನು ನಾಶಪಡಿಸಲು ಮುಂದಾಗಿದ್ದೇನೆ ಎಂದು ರೈತ ಕಿರಣ್ ಗೌಡ ಹೇಳುತ್ತಾರೆ.
ಇದರಿಂದ ಸಂಬಂಧ ಪಟ್ಟ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ರೈತರ ಜಮೀನಿಗೆ ಬಂದು ಸಂಶೋಧನೆ ನಡೆಸಿ ರೈತರ ಕೈ ಸೇರಬೇಕಿದ್ದ ಬೆಳೆಗೆ ಏನು ತೊಂದರೆ ಆಗಿದೆ ಎಂಬುದನ್ನು ತಿಳಿಸಿ.ಇಲಾಖೆ ವತಿಯಿಂದ ಪರಿಹಾರ ಕೊಡಬೇಕು ಎಂದು ಯುವ ರೈತ ಕಿರಣ್ ಗೌಡ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು