ಇತ್ತೀಚಿನ ಸುದ್ದಿ
ಡ್ರಗ್ಸ್ ನಿಂದ ದೂರವಿದ್ದು ಉಜ್ವಲ ಭವಿಷ್ಯ ಕಟ್ಟಿಕೊಳ್ಳಿ: ವಿದ್ಯಾರ್ಥಿಗಳಿಗೆ ಎಸಿಪಿ ಗೀತಾ ಕುಲಕರ್ಣಿ ಕಿವಿಮಾತು
20/12/2023, 23:19
ಮಂಗಳೂರು(reporterkarnataka.com): ಡ್ರಗ್ಸ್ ಸೇವನೆ,ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ. ಡ್ರಗ್ಸ್ ವ್ಯಸನಕ್ಕೆ ಸಹಾಯ ಮಾಡಿದರೂ ನೀವು ಅಪರಾಧಿಗಳಾಗಿರುತ್ತೀರಾ. ಆದ್ದರಿಂದ, ಡ್ರಗ್ಸ್ ನಿಂದ ದೂರವಿದ್ದು ಉಜ್ವಲ ಭವಿಷ್ಯ ಕಟ್ಟಿಕೊಳ್ಳಿ ಎಂದು ಎಸಿಪಿ ಗೀತಾ ಕುಲಕರ್ಣಿ ಹೇಳಿದರು.
ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕೆಪಿಟಿಯಲ್ಲಿ
ಕರ್ನಾಟಕ ರಾಜ್ಯ ಪೊಲೀಸ್, ಮಂಗಳೂರು ನಗರ ಪೊಲೀಸ್, ಮಂಗಳೂರು ಸಂಚಾರ ಉಪ ವಿಭಾಗ ಹಾಗೂ ಸಂಚಾರಿ ಪೂರ್ವ ಠಾಣೆ ವತಿಯಿಂದ ನಡೆದ ಅಪರಾಧ ಮಾಸಚರಣೆ 2023 ಮಾದಕ ದ್ರವ್ಯ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕದ್ರಿ ಠಾಣಾ ಇನ್ಸ್ಪೆಕ್ಟರ್ ಗೋಪಾಲ ಕೃಷ್ಣ ಭಟ್ ಮಾತನಾಡಿ, ನಿಮ್ಮ ಮನಸಿನಲ್ಲಿ ಯಾವುದೇ ಯಾತನೆಗಳಿದ್ದರೂ ಅದನ್ನು ನಿಮ್ಮ ತಂದೆ, ತಾಯಿ, ಶಿಕ್ಷಕರಲ್ಲಿ, ಅಥವಾ ಆತ್ಮೀಯರಲ್ಲಿ ಹಂಚಿಕೊಳ್ಳಿ, ಮಾದಕ ವ್ಯಸನಕ್ಕೆ ದಾಸರಾಗಿ,ಆತ್ಮಹತ್ಯೆಗೆ ಬಲಿಯಾಗಬೇಡಿ ಎಂದು ಕಿವಿ ಮಾತು ಹೇಳಿದರು.
ಎಲೆಕ್ಟ್ರಿಕಲ್ ಮೇಕನಿಕ್ ಉಪನ್ಯಾಸಕಿ ಸುರೇಖಾ,ಎಸ್ ಐ ವಿಜಯ್ ಮತ್ತಿರರ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.