12:50 AM Friday30 - January 2026
ಬ್ರೇಕಿಂಗ್ ನ್ಯೂಸ್
ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:…

ಇತ್ತೀಚಿನ ಸುದ್ದಿ

ಮಂಗಳೂರು: ಯಕ್ಷಗಾನ ವೇಷಧಾರಿ ರವಿರಾಜ ಪನೆಯಾಲಗೆ ‘ಶ್ರೀ ಕದ್ರಿ’ ಪ್ರಶಸ್ತಿ ಪ್ರದಾನ

20/12/2023, 12:10

ಮಂಗಳೂರು(reporterkarnataka.com): ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನ ಪ್ರಾಂಗಣದಲ್ಲಿ ನಡೆದ ಯಕ್ಷಗಾನ ಬಯಲಾಟ ಸಂದರ್ಭ ವೇಷಧಾರಿ ರವಿರಾಜ ಪನೆಯಾಲ ಅವರಿಗೆ ಶ್ರೀ ಕದ್ರಿ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕುಂದೇಶ್ವರ ಪ್ರತಿಷ್ಠಾನ ಅಧ್ಯಕ್ಷ ಜಿತೇಂದ್ರ ಕುಂದೇಶ್ವರ ಅಭಿನಂದನಾ ಭಾಷಣ ಮಾಡಿ, ಪನೆಯಾಲರು ಕೀಚಕ, ಭೀಮ, ಸುಂದೋಪ ಸುಂದ ಮೊದಲಾದ ಪಾತ್ರಗಳಿಗೆ ಜೀವ ತುಂಬಿದವರು. ಸಮರ್ಥ ಅರ್ಥಧಾರಿ, ಕೃಷಿಕನಾಗಿ ಮತ್ತು ಯಕ್ಷಗಾನದಲ್ಲೂ ಕೃಷಿ ಮಾಡುತ್ತಿರುವ ಪನೆಯಾಲರು ಯುವ ಕಲಾವಿದರಿಗೆ ಆದರ್ಶ ಯಕ್ಷಗಾನ ಬಯಲಾಟ ತುಳುನಾಡಿನ ಜೀವನಾಡಿ, ಸಾವಿರಕ್ಕೂ ಮಿಕ್ಕಿ ವೃತ್ತಿಪರ ಕಲಾವಿದರು, ಹತ್ತು ಸಾವಿರಕ್ಕೂ ಮಿಕ್ಕಿ ಹವ್ಯಾಸಿಗಳು ಇರುವ ಕ್ಷೇತ್ರಕ್ಕೆ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಕಲಿಯಲು ಬರುತ್ತಿರುವುದು ಕಲೆಯ ವಿಶೇಷ ಶಕ್ತಿ ಎಂದರು.
ಪ್ರಶಸ್ತಿ ಸ್ವೀಕರಿಸಿದ ರವಿರಾಜ‌ ಪನೆಯಾಲ ಮಾತನಾಡಿ, ಯಕ್ಷವೇಷ ಧರಿಸಿದ ನನಗೆ ಸನ್ಮಾನ ಮಾಡಿದ್ದೀರಿ. ‌ರಂಗದಲ್ಲಿ ಮಾಡುವ ಪಾತ್ರಗಳಿಗೆ ಈ ಪ್ರಶಸ್ತಿ. ಇದು ಯಕ್ಷಗಾನ ಕಲೆಗೆ ಸಂದ ಗೌರವ ಎಂದರು.

ಕಾರ್ಪೊರೇಟರ್ ಮನೋಹರ ಶೆಟ್ಟಿ ಕದ್ರಿ, ಕಾರ್ಪೊರೇಟರ್ ಶಕಿಲಾ ಕಾವ, ಶಿವಳ್ಳಿ ಸ್ಪಂದನ ಅಧ್ಯಕ್ಷ ಕೃಷ್ಣ ಭಟ್ ಕದ್ರಿ, ಪೊಳಲಿ ಗಿರಿಪ್ರಕಾಶ್ ತಂತ್ರಿ, ಸುಧಾಕರ ರಾವ್ ಪೇಜಾವರ, ಆಯೋಜಕರಾದ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ, ದೀಪಾ. ಕೆ.ಎಸ್., ಋತ್ವಿಕ್ ಅಲೆವೂರಾಯ, ಸಂಹಿತಾ ಅಲೆವೂರಾಯ, ಸುಜಾತ ಕುಮಾರಿ, ರಾಘವೇಂದ್ರ ಭಟ್ ಇದ್ದರು.
ಯಕ್ಷಕೂಟ ಸಂಚಾಲಕ ಕದ್ರಿ ರಾಮಚಂದ್ರ ಭಟ್ ಎಲ್ಲೂರು ನಿರೂಪಿಸಿ ವಂದಿಸಿದರು.
ಆಸ್ರಣ್ಣ ಭೇಟಿ: ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಭೇಟಿ‌ ನೀಡಿ, ಚೌಕಿಯಲ್ಲಿ ದೇವರ ದರ್ಶನ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು