7:39 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಜ್ಞಾನ ಸಂಪಾದಿಸಲು ಪ್ರಶ್ನೆ ಕೇಳುವ ಧೈರ್ಯ ಮಕ್ಕಳಲ್ಲಿ ಬೆಳೆಸಬೇಕು: ಪಠ್ಯಶಿಕ್ಷಣ ಸಂಪನ್ಮೂಲ ರಾಜ್ಯ ತರಬೇತುದಾರ ಜಯಾನಂದ ಪೆರಾಜೆ

20/12/2023, 11:19

ಬಂಟ್ವಾಳ(reporterkarnataka.com): ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕನ್ನಡ ಭಾಷೆ ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಜ್ಞಾನ ಸಂಪಾದಿಸಲು ಪ್ರಶ್ನೆ ಕೇಳುವ ಧೈರ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಪಠ್ಯಶಿಕ್ಷಣ ಸಂಪನ್ಮೂಲ ರಾಜ್ಯ ತರಬೇತುದಾರ ಜಯಾನಂದ ಪೆರಾಜೆ ಹೇಳಿದರು.
ಅವರು ಮಾಣಿ ದ.ಕ.ಜಿ.ಪ.ಮಾ.ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಏರ್ಪಡಿಸಲಾದ ಭಾಷಾ ಬೋಧನೆಯ ತರಬೇತು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಲಿ-ಕಲಿ ಶಿಕ್ಷಕರು ಚಟುವಟಿಕೆಯೊಂದಿಗೆ ಪರಿಣಾಮಕಾರಿಯಾಗಿ ಕನ್ನಡ ಭಾಷಾ ಕಲಿಕೆಯಲ್ಲಿ ಉಚ್ಚಾರ ಮತ್ತು ಅಕ್ಷರ ದೋಷಗಳನ್ನು ತಿದ್ದುವ ಬಗ್ಗೆ ಚರ್ಚಿಸಲಾಯಿತು. ಮಮತಾ ಕಿರಣ್ ಬಂಟ್ರಿಂಜ , ಶಾಂತಿ ಪಾಯಸ್ ಸತ್ತಿಕಲ್ಲು, ಚೇತನಾ ಬಾಲ್ತಿಲ ಕಂಠಿಕ, ಶೀಲಾವತಿ ಮಾಣಿ ಅನಿಸಿಕೆ ವ್ಯಕ್ತಪಡಿಸಿದರು. ಸಮಾಲೋಚನಾ ಸಭೆಯಲ್ಲಿ ಮಾಣಿ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಾವತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಣಿ ವಲಯ ಸಿಆರ್‌ಪಿ ಸತೀಶ್ ಸ್ವಾಗತಿಸಿದರು. ಶಿಕ್ಷಕ ನಾಗೇಶ್ ಮಾಣಿ ವಂದಿಸಿದರು. ಕೆದಿಲ ಸಿಆರ್‌ಪಿ ಸುಧಾಕರ ಭಟ್ , ಕಾರ್ಲ ಶಾಲೆಯ ಮುಖ್ಯ ಶಿಕ್ಷಕಿ ಜಾನಕಿ, ಶಿಕ್ಷಣ ಸಂಯೋಜಕಿ ಪ್ರತಿಮಾ ವೈ. ಶುಭ ಹಾರೈಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು