ಇತ್ತೀಚಿನ ಸುದ್ದಿ
ಅಬಕಾರಿ ದಾಳಿ: 100 ಲೀಟರ್ ಬೆಲ್ಲದ ಕೊಳೆ ಹಾಗೂ 5 ಲೀಟರ್ ಕಳ್ಳಭಟ್ಟಿ, ಪರಿಕರ ವಶ; ಆರೋಪಿಗಳು ಪರಾರಿ
19/12/2023, 16:42
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnata@gmail.com
ಕೊಟ್ಟಿಗೆಹಾರ ಬಣಕಲ್ ನ ಬಿ. ಹೊಸಳ್ಳಿಗೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ 5 ಲೀಟರ್ ಸಾರಾಯಿ, 100 ಲೀಟರ್ ಬೆಲ್ಲದ ಕೊಳೆ ಹಾಗೂ ಪರಿಕರಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ಆರೋಪಿ ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ. ಬಣಕಲ್ ಬಿ. ಹೊಸಳ್ಳಿಯ ಸುಂದರೇಶ್ ಆಲಿಯಾಸ್ ಮರಿ ಬಿನ್ ರಾಮೇಗೌಡ ಎಂಬುವವರ ತೋಟದ ಮೇಲೆ ಅಬಕಾರಿ ನಿರೀಕ್ಷಕ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಈ ಸಮಯದಲ್ಲಿ ಆರೋಪಿ ಪರಾರಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ಸಿಬ್ಬಂದಿಗಳಾದ ಸುರೇಶ್ ಕೆ., ಮಹಮ್ಮದ್ ಅಲಾವುದ್ದೀನ್ ಖಾನ್ , ವಾಹನ ಚಾಲಕ ಅನೂಪ್ ಮತ್ತಿತರರು ಭಾಗವಹಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ.