8:31 PM Sunday22 - December 2024
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು…

ಇತ್ತೀಚಿನ ಸುದ್ದಿ

ಚಿನಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಐಡಬ್ಲ್ಯುಸಿಯಿಂದ 50 ಕುರ್ಚಿ, 4 ಟೇಬಲ್ ಕೊಡುಗೆ

18/12/2023, 22:34

ಜಮಖಂಡಿ(reporterkarnataka.com): ಜಮಖಂಡಿ ತಾಲೂಕಿನ ಚಿನಗುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಇಂದು IWC of HBR ಬೆಂಗಳೂರಿನವರು ನಲಿಕಲಿ ತರಗತಿಗೆ 10 ಕುರ್ಚಿ ಹಾಗೂ 4 ಟೇಬಲ್ ಗಳನ್ನು , IWC ಬಾಗಲಕೋಟನವರು ನವರು 10 ಕುರ್ಚಿ, ˌIWC ಹಾವೇರಿಯವರು 10 ಕುರ್ಚಿ ˌ IWC ರಬಕವಿಯವರು 10 ಕುರ್ಚಿ, ˌIWC ಜಮಖಂಡಿ ಯವರು 10 ಕುರ್ಚಿಗಳನ್ನು ಶಾಲೆಗೆ ದೇಣಿಗೆಯಾಗಿ ನೀಡಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಸಮಿತಿಯ ಆಶಾ ಶಂ .ಕಾಂಬಳೆ ಅವರು ವಹಿಸಿಕೊಂಡಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ CRP ಮಾಲಗಾರ ಅವರು IWC ಯವರ ಕಾರ್ಯ ಶ್ಲಾಘನೀಯವಾದದ್ದು ಅವರು ಚಿನಗುಂಡಿ ಶಾಲೆಯನ್ನು ಆಯ್ಕೆ ಮಾಡಿಕೊಂಡದ್ದು ತುಂಬಾ ಸಂತೋಷದ ವಿಷಯ ಎಂದು ಹೇಳಿದರು. ಮುಖ್ಯಗುರುಗಳಾದ ಕುಂಬಾರ ಅವರು ಮಾತನಾಡಿ ದೇಣಿಗೆಯ ಮಹತ್ವವನ್ನು ಸರ್ವಜ್ಞನ ವಚನದ ಮೂಲಕ ವಿವರಿಸಿ ನಮ್ಮ ಶಾಲೆಗೆ ದೇಣಿಗೆ ನೀಡಿದಕ್ಕೆ IWC ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜ್ಯೋತಿ ಕಿರಣ್ ದಾಸ್ ಅವರು ಚಿನಗುಂಡಿಯ ಶಾಲೆಗೆ ಕುರ್ಚಿಗಳನ್ನು ಹಾಗೂ ಟೇಬಲ್ ಗಳನ್ನು ನೀಡಲು ಖುಷಿ ಆಗುತ್ತಿದೆ. ಮಕ್ಕಳು ಚೆನ್ನಾಗಿ ಓದಿ ಶಾಲೆಯ ಹೆಸರನ್ನು ಹಾಗೂ ಚಿನ್ನದಂತೆ ಇರುವ ಚಿನಗುಂಡಿ ಗ್ರಾಮದ ಹೆಸರನ್ನು ತರಬೇಕು ಎಂದು ಹೇಳಿದರು.
ನಂತರ ಮಾತನಾಡಿದ ವೀಣಾ ಪ್ರಮೋದ್ ಅವರು ಇಲ್ಲಿಯ ಶಾಲಾ ವಾತಾವರಣ ಕಂಡು ಹರ್ಷ ವ್ಯಕ್ತಪಡಿಸಿ ಕುರ್ಚಿಗಳನ್ನು ನೀಡಲು ಅವಕಾಶ ಮಾಡಿಕೊಟ್ಟ ಮುಖ್ಯಗುರುಗಳಿಗೂ ಹಾಗೂ ನಮ್ಮ ನಡುವೆ ಹಾಗೂ ಶಾಲೆಯ ನಡುವೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡಿದ ಪರಮಾನಂದ ಸ. ಶಿ. ಅವರ ಕಾರ್ಯವನ್ನು ಸ್ಮರಿಸಿದರು. ವಿರಾಜ್ ಕೋಟಕ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿಯೂ ತಮ್ಮ ಶಾಲೆಗೆ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು. ಬೀಳಗಿಯ IWC ಯವರು ಎಲ್ಲಾ ಮಕ್ಕಳಿಗೆ ಹಣ್ಣು ಹಾಗೂ ಬಿಸ್ಕೇಟ್ ಗಳನ್ನು ನೀಡಿದರು. ನಂತರ ಶಾಲೆಯಲ್ಲಿ ಸಸಿಗಳನ್ನು ನೆಡಲಾಯಿತು. ಇದೇ ವೇಳೆ ಅತಿಥಿಗಳಿಗೆ ಸತ್ಕರಿಸಲಾಯಿತು. ಹಾಗೂ ಇದೇ ವೇಳೆ ಎಸ್ ಡಿಎಂಸಿ ಸಮಿತಿ ಚಿನಗುಂಡಿಯವರು ಶಾಲೆಗೆ 2 ನಲಿಕಲಿ ಟೇಬಲ್ ಗಳನ್ನು ನೀಡಿದರು. IWC ಯ ರಶಿತ ಬೆಂಗಳೂರದಿಂದ ˌ ಮಂಜುಳಾ ಬಾಗಲಕೋಟದಿಂದ,ˌಮಮತಾ ಹಾವೇರಿಯಿಂದ,ˌಅನನ್ಯಾ ಬೀಳಗಿಯಿಂದˌ, ದೀಪಾಲಿ ರಬಕವಿಯಿಂದ,ˌಲತಾ ಜಮಖಂಡಿಯಿಂದ ಭಾಗವಹಿಸಿದ್ದರು ಹಾಗೂ ಎಲ್ಲಾ ಪದಾಧಿಕಾರಿಗಳು ˌ ಸದಸ್ಯರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಸದಸ್ಯರಾದ ರಾಮಣ್ಣ ಕಳ್ಯಾಡ್ರ ಹಾಗೂ ಊರಿನ ಪ್ರಮುಖರಾದ ನಿಂಗಪ್ಪ ತುಬಚಿ ˌ ತಿಮ್ಮಣ್ಣ ಲೆಂಡಿˌ ಶಂಕರ ಕಾಂಬಳೆˌ ಲಕ್ಷ್ಮಣ ನಾಯಕ ˌ ಮಾಳಪ್ಪ ತುಬಚಿ ˌ ಸುಧಾ ಲೆಂಡಿ ˌಹೊಳಬಸಯ್ಯ ಮಠಪತಿ ˌ ಶ್ರೀಶೈಲ್ ಮಠಪತಿ ಉಪಸ್ಥಿತರಿದ್ದರು .
ಶಿಕ್ಷಕ ಅಮರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಬಡಿಗೇರ ಅವರು ಸ್ವಾಗತಿಸಿದರು. ಶಿಕ್ಷಕ ಪರಮಾನಂದ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು