ಇತ್ತೀಚಿನ ಸುದ್ದಿ
ಸಿಎಂ, ಡಿಸಿಎಂ ಸರ್ವಾಧಿಕಾರಿಗಳಾ?: ನಿಂದನೆ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತನ ಬಂಧನಕ್ಕೆ ಡಾ.ಭರತ್ ಶೆಟ್ಟಿ ಕಿಡಿ
17/12/2023, 20:11

ಸುರತ್ಕಲ್(reporterkarnataka.com): ರಾಜಕಾರಣಿಗಳ ವಿರುದ್ದ ಜನರ ಟೀಕೆ ಸಾಮಾನ್ಯ.ಅದನ್ನು ಅರಗಿಸಿಕೊಂಡು ರಾಜಕಾರಣ ಮಾಡುವ ಉದಾರ ಮನಸ್ಸು ಬೆಳೆಸಿಕೊಳ್ಳಿ.
ಸಿಎಂ ಸಿದ್ದರಾಮಯ್ಯ ,ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ , ನೀವೇನು ಸರ್ವಾಧಿಕಾರಿಗಳಾ?. ನಿಂದನೆ ಮಾಡಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿ ಕಾರ್ಯಕರ್ತರಲ್ಲಿ ಭೀತಿ ಮೂಡಿಸುವ ನಿಮ್ಮ ಕುತಂತ್ರವನ್ನು ಮೆಟ್ಟಿ ನಿಲ್ಲುತ್ತೇವೆ ಎಂದು ಡಾ.ಭರತ್ ಶೆಟ್ಟಿ ವೈ. ಗುಡುಗಿದ್ದಾರೆ.
ಮೋದಿ, ಯೋಗಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ದಿನ ಬೆಳಗಾದರೆ ನಿಂದನೆಯ ಮಹಾಪೂರ ಹರಿದು ಬರುತ್ತದೆ. ಇದರ ವಿರುದ್ದ ಬಿಜೆಪಿ ಕಾರ್ಯಕರ್ತರು ಕೇಸು ದಾಖಲಿಸುತ್ತಾ ಹೋದರೆ ಠಾಣೆಯಲ್ಲಿ ಇರುವ ಸೆಲ್ ಗಳು ಸಾಕಾಗದು.
ಸಾಮಾನ್ಯರು ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ವಾರಗಟ್ಟಲೆ ಸತಾಯಿಸುವ ಪೊಲೀಸ್ ಇಲಾಖೆ, ಕಾಂಗ್ರೆಸ್ ಪರವಾಗಿ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿರುವಂತೆ ಕಾಣುತ್ತದೆ.
ಹೆಚ್ಚು ದಿನ ಇಂತಹ ಕಳ್ಳ ಪೊಲೀಸ್ ಆಟ ನಡೆಯಲಾರದು ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ಕಾರ್ಯಕರ್ತನ ಪರ ಪಕ್ಷ ಹಾಗೂ ವೈಯಕ್ತಿಕವಾಗಿ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.