4:36 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಸುರಕ್ಷತಾ ಪರಿಕರ ಧರಿಸದೆ ಚರಂಡಿ ಸ್ವಚ್ಛತೆ!: ನಂಜನಗೂಡಿನಲ್ಲಿ ಪೌರ ಕಾರ್ಮಿಕರಿಗೆ ರಕ್ಷಣೆ ಎಲ್ಲಿದೆ? ಶಾಸಕರೇ, ಜಿಲ್ಲಾಧಿಕಾರಿಗಳೇ ಏನು ಮಾಡುತ್ತಿದ್ದೀರಿ?

13/12/2023, 21:06

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಸುರಕ್ಷತಾ ಪರಿಕರಗಳನ್ನ ಧರಿಸದೆ ಪೌರ ಕಾರ್ಮಿಕ ಚರಂಡಿ ಸ್ವಚ್ಛಗೊಳಿಸುತ್ತಿರುವ ಘಟನೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ.
ಸ್ವಚ್ಛತೆ ಕಾರ್ಯ ನಡೆಸುವ ವೇಳೆ ಬಳಸುವ ಪರಿಕರಗಳನ್ನ ಧರಿಸದೆ ಪೌರ ಕಾರ್ಮಿಕನೊಬ್ಬ ಚರಂಡಿ ಸ್ವಚ್ಛಗೊಳಿಸುತ್ತಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಸ್ವಚ್ಛತೆ ಕಾರ್ಯ ನಡೆಸುವ ವೇಳೆ ಬಳಸುವ ಪರಿಕರಗಳನ್ನ ಧರಿಸಬೇಕೆಂಬ ಕಡ್ಡಾಯ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ಬರಿಗೈಯಲ್ಲೇ ಸ್ವಚ್ಛ ಮಾಡುತ್ತಿರುವ ಪೌರ ಕಾರ್ಮಿಕ ಪ್ರಸ್ತುತವಿರುವ ನಂಜನಗೂಡು ನಗರಸಭೆಯ ದುರ್ವ್ಯವಸ್ಥೆಗೆ ಕೈಗನ್ನಡಿಯಾಗಿದ್ದಾನೆ. ಆರೋಗ್ಯದ ದೃಷ್ಟಿಯಿಂದ ರಕ್ಷಾ ಕವಚಗಳನ್ನ ಬಳಸಬೇಕೆಂದು ಕಡ್ಡಾಯ ನಿಯಮವಿದೆ ಆದ್ರೆ ದಕ್ಷಿಣ ಕಾಶಿ ನಂಜನಗೂಡಿನ ಈ ಪೌರ ಕಾರ್ಮಿಕ ಯಾವುದೇ ಪರಿಕರಗಳನ್ನ ಧರಿಸದೆ ರಾಜಾರೋಷವಾಗಿ ಚರಂಡಿಗೆ ಇಳಿದು ಸ್ವಚ್ಛಗೊಳಿಸುವ ಮೂಲಕ ನಂಜನಗೂಡಿನ ನಗರಸಭಾ ಆಡಳಿತ ಕಾರ್ಯವೈಖರಿಯನ್ನ ಅಣಕಿಸುವಂತೆ ಮಾಡಿದೆ.


ನಂಜನಗೂಡು ಪಟ್ಟಣದ ಆರ್‌ಪಿ ರಸ್ತೆಯ 12ನೆಯ ತಿರುವಿನಲ್ಲಿ ಗಬ್ಬೆದ್ದು ನಾರುತ್ತಿರುವ ಚರಂಡಿಯ ಕೊಳಚೆಯನ್ನು ಸ್ವಚ್ಛಗೊಳಿಸುವ ವೇಳೆ ಬಾಯಿಗೆ ಮಾಸ್ಕ್ ಧರಿಸಿಲ್ಲ, ಕೈಗೆ ಗ್ಲೌಸ್ ಹಾಕಿಲ್ಲ, ಕಾಲಿಗೆ ಬೂಟ್ ಗಳು ಇಲ್ಲವೇ ಇಲ್ಲ ಹೀಗಿದ್ದೂ ಹಾಡುಹಗಲೇ ಸ್ವಚ್ಛತೆಗೆ ಮುಂದಾಗಿರುವುದು ತಲೆತಗ್ಗಿಸುವ ವಿಚಾರವಾಗಿದೆ. ಪ್ರಸ್ತುತ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರೇ ನಂಜನಗೂಡು ನಗರ ಸಭೆಯ ಆಡಳಿತ ಅಧಿಕಾರಿಯಾಗಿದ್ದಾರೆ. ತುಕ್ಕು ಹಿಡಿದಿರುವ ನಂಜನಗೂಡು ನಗರಸಭಾ ಅಧಿಕಾರಿಗಳಿಗೆ ಸರ್ಜರಿ ಮಾಡಿ ಪೌರ ಕಾರ್ಮಿಕರ ಆರೋಗ್ಯವನ್ನು ಕಾಪಾಡುವಲ್ಲಿ ಮುಂದಾಗ ಬೇಕಿದೆ. ಪೌರಕಾರ್ಮಿಕರ ಜೀವ ರಕ್ಷಣೆಗಾಗಿ ಸಾಕಷ್ಟು ಸಲಕರಣೆಗಳು ವಿವಿಧ ಬಗೆಯ ಹೈಟೆಕ್ ಸೇಫ್ಟಿ ಪದಾರ್ಥಗಳನ್ನು ಪೌರಕಾರ್ಮಿಕರಿಗೆ ನೀಡುತ್ತೇವೆ ಎಂಬುದು ಕೇವಲ ಬಾಯಿಮಾತು ಹಾಗು ದಾಖಲಾತಿ ಪತ್ರಗಳಲ್ಲಿ ಮಾತ್ರ ಉಳಿಯುತ್ತಿದೆ. ಆದರೆ ವಾಸ್ತವವಾಗಿ ಸ್ವಚ್ಛತಾ ಪರಿಕರ ಮತ್ತು ಪೌರಕಾರ್ಮಿಕರ ಹೆಸರಿನಲ್ಲಿ ಬಿಡುಗಡೆಯಾಗುವ ಹಣ ಯಾರ ಜೇಬು ಸೇರುತಿದೆ ಎಂಬುದು ಯಕ್ಷಪ್ರಶ್ನೆಯಾಗುತ್ತಿದೆ..?

ಇತ್ತೀಚಿನ ಸುದ್ದಿ

ಜಾಹೀರಾತು