8:23 AM Sunday5 - July 2026
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ…

ಇತ್ತೀಚಿನ ಸುದ್ದಿ

ಕ್ರೆಡೈಯಿಂದ ಮಂಗಳೂರಿನಲ್ಲಿ ಮಾ.9 ಮತ್ತು 10ರಂದು ಎರಡು ದಿನಗಳ ಬೃಹತ್ ‘ರಿಯಾಲ್ಟಿ ಎಕ್ಸ್ ಪೋ’: ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯ

07/12/2023, 23:11

ಮಂಗಳೂರು(reporterkarnataka.com): ಕ್ರೆಡೈ ಮಂಗಳೂರು ವತಿಯಿಂದ 2024ರ ಮಾರ್ಚ್ 9 ಮತ್ತು 10ರಂದು ಎರಡು ದಿನಗಳ ಕಾಲ ಬೃಹತ್ ಮಟ್ಟದ ‘ರಿಯಾಲ್ಟಿ ಎಕ್ಸ್‌ಪೋ’ ಆಯೋಜಿಸಲಾಗಿದೆ ಎಂದು ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50ಕ್ಕೂ ಅಧಿಕ ಉದ್ಯಮಿಗಳು, ವಿವಿಧ ಉದ್ಯಮ ಸಂಸ್ಥೆಗಳು ಸೇರಿಕೊಂಡು ಈ ಎಕ್ಸ್ ಪೋ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ದೊರೆಯುವಂತೆ ಎಕ್ಸ್‌ಪೋದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಲಕ್ಸುರಿ ಅಪಾರ್ಟ್‌ಮೆಂಟ್‌ಗಳು, ಎಲೆಕ್ಟ್ಪಾನಿಕ್ಸ್ ಉತ್ಪನ್ನಗಳು, ವಸತಿ, ಬ್ಯಾಂಕ್, ಕಾರ್ ಡೀಲರ್‍ಸ್ ಸೇರಿದಂತೆ ವಿವಿಧ ಸಂಸ್ಥೆಗಳು ಎಕ್ಸ್ ಪೋದಲ್ಲಿ ಭಾಗವಹಿಸಲಿವೆ ಎಂದವರು ಹೇಳಿದರು.
ಇದೇ ಸಂದರ್ಭದಲ್ಲಿ ಕ್ರೆಡೈ ಸಂಸ್ಥೆಯ ಅಧ್ಯಕ್ಷ ವಿನೋದ್ ಪಿಂಟೋ ಅವರು ಮಾತಾನಾಡಿ
ಇತ್ತೀಚೆಗೆ, ಬಿಲ್ಡರ್ ಸಂಸ್ಥೆಯೊಂದರ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸಂಬಂಧಿಸಿದ ಪ್ರಕರಣದಲ್ಲಿ ಗ್ರಾಹಕರ ವೇದಿಕೆಯು ನೀಡಿದ ತೀರ್ಪಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದರು.
ಮಂಗಳೂರಿನ ಕಟ್ಟಡ ನಿಯಮಾವಳಿ ಪ್ರಕಾರ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದರೂ, ತನಗೆ ನಿಗದಿತ ಕಾರ್ ಪಾರ್ಕಿಂಗ್ ಸ್ಲಾಟ್ ನಿಗದಿಪಡಿಸಿಲ್ಲ ಎಂದು ದೂರುದಾರರು ಆರಂಭಿಕ ದೂರು ನೀಡಿ ಪ್ರಸಕ್ತ ನೀಡಿರುವ ಆವರಣದೊಳಗೆ ಮುಚ್ಚಿದ ಪಾರ್ಕಿಂಗ್ (ತಗಡು ಮಾಡು) ಮಾದರಿಯ ಪಾರ್ಕಿಂಗ್ ಬೇಡ, ತನಗೆ ಕಾಂಕ್ರೀಟ್ ಕಟ್ಟಡದ ಕೆಳಗೆಯೆ ಪಾರ್ಕಿಂಗ್ ಸ್ಲಾಟ್ ಬೇಕು ಎಂದು ಹೇಳಿದ್ದರು. ಆದರೆ ಸದ್ರಿ ಕಟ್ಟಡವು ಈಗಾಗಲೇ ಮಾರಾಟ ವಾಗಿದ್ದು, ಪ್ರಸಕ್ತ ಸನ್ನಿವೇಶದಲ್ಲಿ ಬದಲಾವಣೆ ಆಸಾಧ್ಯವಾಗಿತ್ತು. ಈ ಸಮಸ್ಯೆಯ ಬಗ್ಗೆ ದೂರುದಾರ ವ್ಯಕ್ತಿಯ ಬಳಿ ಸಾಕಷ್ಟು ಬಾರಿ ಸಂಧಾನ ನಡೆಸಿದರು ಪರಿಹಾರ ಸಾಧ್ಯವಾಗಿರಲಿಲ್ಲ. ಈ ನಡುವೆ ಜಿಲ್ಲಾ ಗ್ರಾಹಕ ವೇದಿಕೆ ದೂರುದಾರರ ಪರವಾಗಿ ತೀರ್ಪು ನೀಡಿದೆ. ಮುಂದೆ ರಾಜ್ಯ ವೇದಿಕೆಯಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ರೆಡೈ ಕಾರ್ಯದರ್ಶಿ ಗುರು ಎಂ. ರಾವ್, ಉಪಾಧ್ಯಕ್ಷ ಪ್ರಶಾಂತ್ ಸನಿಲ್, ಜತೆ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಂಡಾರಿ, ಕೋಶಾಧಿಕಾರಿ ಕರುಣಾಕರಣ್, ಪ್ರಮುಖರಾದ ರೋಹನ್ ಮೊಂತೇರೊ, ನವೀನ್ ಕಾರ್ಡೋಜ, ಧೀರಜ್ ಅಮೀನ್, ಆವೊಲಾನ್ ಪತ್ರಾವೊ, ವಿಲಿಯಂ ಡಿಸೋಜ, ರವೀಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು