ಇತ್ತೀಚಿನ ಸುದ್ದಿ
ಖಾನಾಪೂರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆಮೆಗತಿ: ಗ್ರಾಮಸ್ಥರ ಸ್ಥಿತಿ ಅಧೋಗತಿ
04/12/2023, 10:50

ರಮೇಶ್ ದೇವದುರ್ಗ ರಾಯಚೂರು
info.reporterkarnataka@gmail.com
ದೇವದುರ್ಗ ತಾಲ್ಲೂಕಿನ ಹೇಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಖಾನಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಕುಡಿವ ನೀರಿನ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಜಲ ಜೀವನ್ ಮಿಷನ್ ಯೋಜನೆಯಡಿ ಒಂದು ಕೋಟಿಗೂ ಅಧಿಕ ಮೊತ್ತದ ಮನೆ ಮನೆಗೆ ನೀರು ಸರಬರಾಜು ಮಾಡುವ ಕುಡಿವ ನೀರಿನ ಪೈಪ್ ಕಾಮಗಾರಿ ನಡೆದಿದೆ. ಮಂದಗತಿಯಲ್ಲಿ ಕಾಮಗಾರಿ ನಡೆದಿದ್ದರಿಂದ ಪೈಪ್ ಲೈನ್ ಗೆ ತೆಗೆದ ತೆಗ್ಗು ಸಂಚಾರಕ್ಕೆ ತೊಂದರೆ ಉಂಟು ಮಾಡಿದೆ.
ಗುತ್ತೇದಾರ ನಿರ್ಲಕ್ಷ್ಯ.ದಿಂದ ರಾತ್ರಿ ವೇಳೆ ವಾರ್ಡಗಳ ಸಂಚಾರ ಮಾಡಲು ಮಕ್ಕಳಿಗೆ ಹಾಗೂ ವೃದ್ಧರಿಗೆ ತೊಂದರೆಯಾಗಿದೆ.
ಅಹಿತಕರ ಘಟನೆ ನಡೆಯುವ ಮೊದಲು ಸಂಬಂಧಿಸಿದ ಅಧಿಕಾರಿಗಳು ಬಿರುಕು ಬಿಟ್ಟ ತೆಗ್ಗುಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು ಹಾಗೂ ಖಾನಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಕುಡಿವ ನೀರಿನ ಯೋಜನೆ ಕಾಮಗಾರಿ ಅಂದಾಜು ಪತ್ರದಂತೆ ನಡೆಯುತ್ತಿಲ್ಲ. ತೋಡಿದ ಗುಂಡಿಗಳು ಮುಚ್ಚದೆ ಹಾಗೆ ಇರುವುದರಿಂದ ವಾಹನ ಸವಾರರು, ಜನರು ತಿರುಗಾಡಲು ಬೇಸತ್ತು ಹೋಗಿದ್ದಾರೆ. ಆದ್ದರಿಂದ ಅಧಿಕಾರಿಗಳ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ನಾಗಪ್ಪ ಖಾನಾಪೂರ ಅವರು ಆಕ್ರೋಶ ವ್ಯಕ್ತಪಡಿಸಿದರು.