7:27 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಚಳ್ಳಕೆರೆ ದೊಡ್ಡ ಉಳ್ಳಾರ್ತಿ ಗೌರಿದೇವಿಗೆ ಸಂಭ್ರಮದ ಜಾತ್ರೆ ಮಹೋತ್ಸವ: ಹರಿದು ಬಂದ ಭಕ್ತ ಸಾಗರ

01/12/2023, 12:16

ಮುರುಡೇ ಗೌಡ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ದೊಡ್ಡ ಉಳ್ಳಾರ್ತಿ ಗೌರಿದೇವಿಗೆ ಸಂಭ್ರಮದ ಜಾತ್ರೆ ಮಹೋತ್ಸವ ನಡೆಯಿತು. ಭಾರಿ ಸಂಖ್ಯೆಯಲ್ಲಿ ಭಕ್ತಾಧಿಗಳು ನೆರೆದಿದ್ದರು.
ಬಯಲು ಸೀಮೆಯಲ್ಲೇ ವಿಶಿಷ್ಟ ಶುಷ್ಕ ಹುಲ್ಲುಗಾವಲು ಪರಿಸರದಲ್ಲಿ ಬರುವ ದೊಡ್ಡ ಉಳ್ಳಾರ್ತಿ ಎಂಬ ಗ್ರಾಮದ ಹೆಸರಿನ ಮೂಲ “ಉರಳು-ಆರತಿ” ಎಂಬ ಕನ್ನಡದ ಪದದಿಂದ ಬಂದಿದೆ. ಭಾರತೀಯ ಧಾರ್ಮಿಕ ಆಚರಣೆಗಳಲ್ಲಿ ತಮ್ಮ ಇಷ್ಟ ದೈವಕ್ಕೆ ಭಕ್ತಿಯನ್ನು ವ್ಯಕ್ತಪಡಿಸುವ ಪ್ರಾರ್ಥನೆ ಮತ್ತು ಸಾಧನೆಯ ಕ್ರಮದಲ್ಲಿ ಒಂದಾದ ದೈಹಿಕ ಉರಳು ಸೇವೆ ಎಂಬ ಮೂಲದಿಂದ ಬಂದಿದೆ.ಸಮೀಪದಲ್ಲಿರುವ ಚಿಕ್ಕ ಉಳ್ಳಾರ್ತಿ ಗ್ರಾಮದ ಹೆಸರು ಕೂಡ ಭಕ್ತಿಯ ಇದೇ ಆಶಯವನ್ನು ಹೊಂದಿದ್ದು ಸಣ್ಣ ಪ್ರಮಾಣದಲ್ಲಿ ಧಾರ್ಮಿಕ ಆಚರಣೆಗಳನ್ನು ಇಲ್ಲಿ ಅದು ಸೂಚಿಸುತ್ತದೆ. ಈ ಗ್ರಾಮಗಳ ವಿಶಿಷ್ಟ ಭೌಗೋಳಿಕ ಪರಿಸರದಲ್ಲಿರುವ ಅಧ್ಬತವೆನಿಸುವ ದಂತಕತೆಗಳೊಂದಿಗೆ ಹಲವು ಪೌರಾಣಿಕ ಮತ್ತು ನಂಬಿಕೆಗಳು ಬೆಸೆದು ಕೊಂಡಿದ್ದು, ಇಲ್ಲಿನ ಜನರ ವಿಸ್ಮಯಗೊಳೀಸುವ ನೆನಪುಗಳ ಮತ್ತು ಸಂಕಿರ್ಣ ಚರಿತ್ರೆಗಳು ಕೇಳುಗರನ್ನು ಮೂಕವಿಸ್ಮತರನ್ನಾಗಿಸುತ್ತವೆ.ಬೇಡುತ್ತ ಆ ಬೆಂಕಿ ಕೆಂಡಗಳಲ್ಲಿ ಆ ದನ-ಕರುಗಳನ್ನು ಒಮ್ಮೇಲೆ ಹಾಯಿಸುತ್ತಾರೆ.

ಅಂದು ಗ್ರಾಮವು ಚಟುವಟಿಕೆಯಿಂದ ಕೂಡಿದ ದೊಡ್ಡ ಜೇನು ಗುಡಿನ ರೀತಿಯಾಗಿದ್ದು, ನಾಡಿನ ಪ್ರಸಿದ್ದ ಕರಿಕುರಿ ಕಂಬಳಿಗಳು, ಕರಕುಶಲ ವಸ್ತುಗಳು, ಮಡಿಕೆ-ಕುಡಿಕೆಗಳು, ಬಿದಿರು ಬುಟ್ಟಿಗಳು, ಸಿಹಿ ತಿಂಡಿಗಳು, ಮತ್ತು ದನಕರುವಿನ ಸಂತೆಯಿಂದ ವೈವಿಧ್ಯಮಯವಾಗಿ ಝೇಂಕರಿಸುತ್ತಿರುತ್ತದೆ.ದೊಡ್ಡ ಉಳ್ಳಾರ್ತಿ ಗೌರಮ್ಮಳ ಹಬ್ಬ
ಅಮೃತ್ ಮಹಲ್ ಕಾವಲುಗಳು
ಕರ್ನಾಟಕ ರಾಜ್ಯದ ಕೊನೆ ಹಾಗು ಬಹು ವಿಸ್ತಾರವದ ಹುಲ್ಲುಗಾವಲುಗಳ ಜೈವಿಕ ಪರಿಸರ ವ್ಯವಸ್ಥೆಯಾಗಿದೆ. ಇಲ್ಲಿನ ಸ್ಥಳೀಯ ಸಮುದಾಯಗಳು ಈ ಕಾವಲುಗಳನ್ನು ಬಳಸುತ್ತ ಮತ್ತು ಪೂಜಿಸುತ್ತಾ ಸಂರಕ್ಷಿಸಿಕೊಂಡು ಬಂದಿದ್ದಾರೆ. ಈ ಕಾವಲುಗಳು ತೀವ್ರವಾಗಿ ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ನ ಬಸ್ಟ್ ಡ್, ಲೆಸ್ಸರ್ ಫ್ಲೋರಿಕಾನ್ ಹಕ್ಕಿಗಳು ಮತ್ತು ಅಳಿವಿನ ಅಪಾಯದಲ್ಲಿರುವ ಕೃಷ್ಣಮೃಗ ಮತ್ತು ತೋಳಗಳ ಆವಾಸಸ್ಥಾನವಾಗಿವೆ.

ನೂರಾರು ವರ್ಷಗಳಿಂದಲೂ ಮಾಂಸ, ಹಾಲು, ಉಣ್ಣೆ, ಗೊಬ್ಬರ, ಔಷಧ ಸಸ್ಯಗಳು, ನೀರು ನೆರಳನ್ನು ತನ್ನ ಜೈವಿಕ ಪರಿಸರ ವ್ಯವಸ್ಥೆಯ ಮೂಲಕ ಲಕ್ಷಾಂತರ ಜನಜೀವಗಳನ್ನು ಪೊರೆಯುತ್ತ ಬಂದಿದೆ. ಈ ಕಾವಲಿನೊಂದಿಗಿನ ಹೊಂದಿರುವ ಅವಿನಾಭಾವ ಸಂಭಂದದಿಂದಾಗಿ ಇಲ್ಲಿನ ಕೃಷಿಕರು ಮತ್ತು ಪಶುಪಾಲಕರುಗಳು ತಮ್ಮ ಘನತೆಯುಕ್ತ ಬದುಕಿನ ಸಾಧ್ಯತೆಯನ್ನು ಕಂಡುಕೊಂಡಿದ್ದು ಹಾಗು ಕಾವಲುಗಳ ವೈವಿಧ್ಯತೆಯ ಕಾಣಿಕೆಯನ್ನು ಗೌರವದಿಂದ ಪಡೆಯುತ್ತ ಅದಕ್ಕೆ ಋಣವಾಗಿ ಸಮೃದ್ದ ಸಂಪ್ರದಾಯ ಮತ್ತು ನಂಬಿಕೆಗಳ ಮೂಲಕ ಅವುಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆಕಾವಲುಗಳಿಗೆ ಭೀತಿ
ಈಗ ಈ ಕಾವಲುಗಳಲ್ಲಿ ಸರ್ಕಾರವು ಪರಮಾಣು, ರಕ್ಷಣ ಸಂಸ್ಥೆ ಮತ್ತು ಇತರೆ ಅಭಿವೃದ್ದಿ ಯೋಜನೆಗಳಿಗೆ ಇಲ್ಲಿನ ಸಮುದಾಯಗಳೊಂದಿಗೆ ಚರ್ಚಿಸದೆ ಅಥವ ಕಾನೂನು ಪ್ರಕ್ರಿಯೆಗಳಿಗೆ ಅನುಗುಣವಾಗಿರದೆ ಅವಕಾಶ ಮಾಡುತ್ತಿದ್ದು ಇಂದು ಈ ಜನರ ಸಂಸ್ಕೃತಿ, ಬದುಕ, ದೇಶಿ ಜ್ಞಾನದೊಂದಿಗೆ ಈ ಕಾವಲುಗಳು ಅಳಿವಿನ ಅಪಾಯದಲ್ಲಿರುತ್ತದೆ.


ಈಗ ಚಳ್ಳಕೆರೆಯ ಕೃಷಿಕ ಮತ್ತು ಪಶುಪಾಲನ ಸಮುದಾಯಗಳ ಸಾಂಪ್ರದಾಯಿಕ ಜ್ಞಾನ ಭರಿತ ಜೀವನವನ್ನು ಮತ್ತು ಅವರ ಸ್ವಾಲಂಬದ ಬದುಕನ್ನು ಸಂಭ್ರಮಿಸಲು ಹಾಗೆ, ಈ ಅದ್ಭುತ ಜೈವಿಕ ಸಂಸ್ಕೃತಿಯ ಪರಂಪರೆಯನ್ನು ಉಳಿಸಲು ಕೈ ಜೋಡಿಸುವ ಸಮಯವಾಗಿದೆ. ಇದಕ್ಕಾಗಿ ESG ಮುಂತಾದ ಸಂಸ್ಥೆಗಳು ಸತತ ಹೋರಾಟ ನಡೆಸುತ್ತಿವೆ.ತಲುಪುವುದು ಹೇಗೆ?
ದೊಡ್ಡ ಉಳ್ಳಾರ್ತಿ ಗ್ರಾಮವು ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಿಂದ ಸುಮಾರು 15 ಕಿ.ಮಿ. ದೂರದಲ್ಲಿರುತ್ತದೆ.

ಬೆಂಗಳೂರುನಿಂದ ಸುಮಾರು 204 ಕಿ.ಮಿ ದೂರದಲ್ಲಿರುತ್ತದೆ. ದಾರಿ : ಬೆಂಗಳೂರಿನಿಂದ-ನೆಲಮಂಗಲ-ತುಮಕೂರು-ಸಿರ- ಹಿರಿಯೂರು-ಚಳ್ಳಕೆರೆ.

ಇತ್ತೀಚಿನ ಸುದ್ದಿ

ಜಾಹೀರಾತು