ಇತ್ತೀಚಿನ ಸುದ್ದಿ
ಕಲೈಮಾಮಣಿ ಡಾ. ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಪ್ರಶಸ್ತಿಗೆ ಖ್ಯಾತ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಆಯ್ಕೆ: ಡಿ. 23ರಂದು ಪ್ರದಾನ
30/11/2023, 12:03
ಮಂಗಳೂರು(reporterkarnataka.com): ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್ ಕಲಾವಿದರಾದ ಪದ್ಮಶ್ರೀ ಪುರಸ್ಕೃತ ಡಾ.ಕದ್ರಿ ಗೋಪಾಲನಾಥ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ವತಿಯಿಂದ ಕದ್ರಿ ಸಂಗೀತ ಸೌರಭ 2023 ಕಾರ್ಯಕ್ರಮವನ್ನು ನಗರದ ಉರ್ವ ಸ್ಟೋರ್ಸ್ ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಡಿಸೆಂಬರ್ 23ರಂದು
ಆಯೋಜಿಸಲಾಗಿದೆ.
ಅಂದು ಬೆಳಗ್ಗಿನಿಂದ ಉದಯೋನ್ಮುಖ ಕಲಾವಿದರಿಗೆ ಭವ್ಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ ನಡೆಯಲಿರುವ ವೇದಿಕೆಯ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯಕರಾದ ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಅವರನ್ನು “ಡಾ. ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು 50 ಸಾವಿರ ನಗದು ಹಾಗೂ ಬೆಳ್ಳಿಯ ಫಲಕ ಹೊಂದಿರುತ್ತದೆ. ನಂತರ ಭವ್ಯ ವೇದಿಕೆಯಲ್ಲಿ ಪಂಡಿತ್ ವೆಂಕಟೇಶ್ ಕುಮಾರ್ ಅವರ ಸಂಗೀತ ಕಾರ್ಯಕ್ರಮವಿರುತ್ತದೆ.
ನಾಡಿನ ಅನೇಕ ಹಿರಿಯ ಕಲಾವಿದರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ದು ಸಾಕ್ಸೋಫೋನ್ ವಾದನದಲ್ಲಿ ಅದ್ವಿತೀಯ ಅನ್ನುವ ಹಾಗೆ ಬದುಕಿ ಬಾಳಿದ ನಮ್ಮೆಲ್ಲರ ನೆಚ್ಚಿನ ಸಾಕ್ಸೋಫೋನ್ ಚಕ್ರವರ್ತಿ, ಕಲೈಮಾಮಣಿ , ಕರ್ನಾಟಕ ಕಲಾಶ್ರೀ ಡಾ.ಕದ್ರಿ ಗೋಪಾಲನಾಥ್ ಅವರ 74ನೇ ಹುಟ್ಟು ಹಬ್ಬದ ಅಂಗವಾಗಿ ಕಾರ್ಯಕ್ರಮ ನಡೆಯಲಿದೆ.
Padmashri awardee Pandit Venkatesh Kumar to be honoured with “Dr. Kadri Gopalnath Lifetime Achievement Award 2023
“Kadri Sangeeta Saurabha 2023” organized by “Dr. Kadri Gopalnath Academy for Arts (R)” in the name of Padma Shri awardee Dr. Kadri Gopalnath, will be held on the 23rd December 2023 at B.R. Ambedkar Bhawan, Urva Stores, Mangalore.
A grand open stage for all the aspiring and budding artists has been arranged to pay tribute to the Great Guru in the form of “GURU VANDANA”. This will be a non-stop marathon concert starting from 9 am to 5 pm.
Padma Shri awardee Pandit Venkatesh Kumar, popular and renowned Hindustani classical music singer of the country, is being honoured with the “Dr. Kadri Gopalnath Lifetime Achievement Award 2023” to be held later in the evening.
The award carries a cash prize of Rs.50,000 and a silver plaque followed by his concert.
Many senior artists and dignitaries of the country will be present in the program.