1:08 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಹೊಡೆಯದಿದ್ರೂ ಕೇಸು ಹಾಕ್ತೀರಿ, ಹಿಂದೂಗಳ ಮೇಲೆ ನಿಮ್ಮದೂ ನೈತಿಕ ಗೂಂಡಾಗಿರಿ: ಶಾಸಕ ಡಾ.ಭರತ್ ಶೆಟ್ಟಿ ಕಿಡಿ

30/11/2023, 01:40

ಸುರತ್ಕಲ್(reporterkarnataka.com):ಕಾಂಗ್ರೆಸ್ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಕೇಸು ಹಾಕಿಸುತ್ತಿದೆ.
ಹಿಂದೂ ಯುವತಿಯ ಜತೆಗಿದ್ದವನನ್ನು ಕೇವಲ ವಿಚಾರಿಸಿದ ಮಾತ್ರಕ್ಕೆ ಕೇಸು ಹಾಕುದಾದ್ರೆ, ನಿಮ್ಮದೂ ಹಿಂದೂಗಳ ಮೇಲೆ ನೈತಿಕ ಪೊಲೀಸ್ ಗಿರಿಯೆ ಎಂದು ಕಾಂಗ್ರೆಸ್ ಆಡಳಿತವನ್ನು ಶಾಸಕ ಡಾ.ಭರತ್ ಶೆಟ್ಟಿ ವೈ. ಪ್ರಶ್ನಿಸಿದ್ದಾರೆ.
ಮೈ ಕೈ ಮುಟ್ಟದೆ ಪ್ರಶ್ನಿಸಿದರೂ ಕೇಸು, ಹೊಡೆದರೂ ಕೇಸು ಹಾಕುದಾದ್ರೆ‌ ಹಿಂದೂ ಕಾರ್ಯಕರ್ತರಿಗೆ ನೀವೇ ಪರೋಕ್ಷವಾಗಿ ಪ್ರೇರಣೆ ನೀಡುತ್ತಿದ್ದೀರಿ. ಮಂಗಳೂರಿನ ಮಾರ್ಗನ್ಸ್ ಗೇಟ್ ಬಳಿ ಹಿಂದೂ ಯುವತಿಯನ್ನು ಅನ್ಯ ಮತೀಯ ಯುವಕ ಪುಸಲಾಯಿಸಿ ಕರೆದೊಯ್ದದಾಗ ಯಾವುದೇ ಹಲ್ಲೆ ಅಥವಾ ನಿಂದನೆ ಮಾಡದೆ ವಿಚಾರಿಸಿದ್ದೇ ಮಹಾ ಅಪರಾಧ ಎಂಬಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಅವರ ಮೇಲೆ ಕೇಸು ದಾಖಲಿಸಿ ಯುವಕರ ಭವಿಷ್ಯ ಮುಸುಕಾಗಿಸುವ ಹುನ್ನಾರವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ.
ಹಿಂದೂ ಸಮಾಜದ ಒಳಿತಿಗಾಗಿ, ನಮ್ಮ ಸಹೋದರಿಯರ ಮಾನ, ಪ್ರಾಣ ರಕ್ಷಣೆಗೆ ಮುಂದೆಯೂ ನಮ್ಮ ಪಕ್ಷ , ನಮ್ಮ ಹಿಂದೂ ಸಂಘಟನೆಯ ಕಾರ್ಯಕರ್ತರು ಇಟ್ಟ ಹೆಜ್ಜೆಯನ್ನು ಹಿಂದೆ ಇಡುವುದಿಲ್ಲ. ಗಡಿಪಾರು, ರೌಡಿ ಶೀಟರ್, ಅನೈತಿಕ ಪೊಲೀಸ್ ಗಿರಿಯಂತಹ ಸೆಕ್ಷನ್ ವಿಧಿಸಿ ಬೆದರಿಕೆಯ ಕೇಸ್ ಹಾಕಿದರೆ ಹೆದರಿ ಮೂಲೆ ಸೇರುತ್ತಾರೆ ಎಂಬುದು ನಿಮ್ಮ ಭ್ರಮೆ. ಅನ್ಯ ಮತೀಯರ ದುಷ್ಟ ಸಂಚನ್ನು ನಮ್ಮ ಕಾರ್ಯಕರ್ತರು ಮುಂದೆಯೂ ಬಯಲಿಗೆಳೆಯುತ್ತಾರೆ. ನಿಮ್ಮಿಂದ ಆಗುವುದಾದರೆ ತಡೆಯಿರಿ ಎಙದು ಡಾ.ಭರತ್ ಶೆಟ್ಟಿ ಸವಾಲು ಹಾಕಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು